ಹಿಂದೂ ಸಮಾಜ ಸಂಘಟನೆ ನಡೆಯುತ್ತಿದೆ, ಆಗಾಗ ವಿಘ್ನಗಳು ನಡೆಯುತ್ತವೆ, ಅದು ಸಾಮಾನ್ಯ: ಗೋಪಾಲ್ ನಾಗರಕಟ್ಟೆ

Public TV
2 Min Read
gopal nagarakatte

ಬೆಳಗಾವಿ:‌ ಹಿಂದೂ ಸಮಾಜ ಸಂಘಟನೆಯಾಗುತ್ತಿದೆ. ಈ ವೇಳೆ ಆಗಾಗ ವಿಘ್ನಗಳು ನಡೆಯುತ್ತವೆ. ಅದನ್ನು ಎದುರಿಸಲು ಈಗ ಹಿಂದೂ ಸಂಘಟನೆಗಳು ಸಜ್ಜುಗೊಳ್ಳುತ್ತಿವೆ ಎಂದು ವಿಹೆಚ್‍ಪಿ ಮುಖಂಡ, ಅಯೋಧ್ಯೆ ರಾಮಮಂದಿರ ನಿರ್ಮಾಣದ ಉಸ್ತುವಾರಿ ಗೋಪಾಲ್ ನಾಗರಕಟ್ಟೆ ಹೇಳಿದರು.

ನಗರದಲ್ಲಿ ರಾಜ್ಯದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರ ಹತ್ಯೆ ವಿಚಾರಕ್ಕೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶ, ದೊಡ್ಡ ಕಾರ್ಯಗಳು ಕೈಗೊಂಡಾಗ ಕೆಲವೊಮ್ಮೆ ವಿಘ್ನಗಳು ಬರುತ್ತವೆ. ಯುದ್ಧದ ಸಂದರ್ಭದಲ್ಲಿ ಅನೇಕರ ಬಲಿದಾನ ಆಗುತ್ತವೆ. ಅದು ಸಾಮಾನ್ಯ. ಭಾರತ ದೇಶದಲ್ಲಿ ಈ ಮೊದಲು ಕೇವಲ ಹಿಂದೂಗಳ ಹತ್ಯೆ ಅಷ್ಟೇ ಆಗ್ತಿತ್ತು. ಈಗ ಉತ್ತರ ಕೊಡುವ ಪ್ರಯತ್ನಗಳು ನಡೆಯುತ್ತಿವೆ. ಇದು ಇನ್ನಷ್ಟು ಗಟ್ಟಿಯಾಗಬೇಕು ಎಂದರು.

ಬಜರಂಗದಳದ ಕಾರ್ಯಕರ್ತರಿಂದ ಬೆಳಗಾವಿಯಲ್ಲಿ ಶಸ್ತ್ರಗಳ ಪೂಜೆ ಆಗಿದೆ. ಸಮಾಜದಲ್ಲಿ ಪರಾಕ್ರಮ ಜಾಗೃತಿ ಆಗಬೇಕು. ಪರಾಕ್ರಮದಿಂದಲೇ ಹಿಂದೂ ಸಂಸ್ಕøತಿ ಉಳಿಸಬೇಕು. ಭಾರತದ ಸಂಸ್ಕೃತಿ, ಧರ್ಮ ಉಳಿಸಲು ಪರಾಕ್ರಮ ಜಾಗೃತ ಆಗಬೇಕು. ಸ್ವಸಾಮಥ್ರ್ಯದ ಮೂಲಕ ಹಿಂದೂ ಧರ್ಮದ ರಕ್ಷಣೆ, ಭಾರತದ ಸಂಸ್ಕೃತಿ ಉಳಿಸಬೇಕಿದೆ. ಈ ಕಾರಣಕ್ಕೆ ಪ್ರತಿ ಮನೆಮನೆಗಳಲ್ಲಿ ಪರಾಕ್ರಮದ ಆರಾಧನೆ ನಡೆಯಬೇಕು. ಪರಾಕ್ರಮದ ಜೊತೆಗೆ ಹಿಂದೂಗಳ ಸ್ವಾಭಿಮಾನವೂ ಹೆಚ್ಚಾಗಬೇಕು ಎಂದು ಹೇಳಿದರು.

bjp rss

ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಿಂದೂ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ ಪಡೆಯಲು ಸರ್ಕಾರಕ್ಕೆ ನಾನು ಆಗ್ರಹಿಸುತ್ತೇನೆ. ಪಿಎಫ್‍ಐ ಬಳಿಕ ಆರ್‌ಎಸ್‍ಎಸ್ ಬ್ಯಾನ್ ಆಗಬೇಕು ಎಂಬ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರಕ್ಕೆ ಕಿಡಿಕಾರಿದರು. ಇದನ್ನೂ ಓದಿ: ಹಿಂದೆ ಶಂಕುಸ್ಥಾಪನೆ ಮಾತ್ರ ಆಗುತ್ತಿತ್ತು, ನಮ್ಮ ಅವಧಿಯಲ್ಲಿ ಶಂಕುಸ್ಥಾಪನೆಯಾಗಿ ಉದ್ಘಾಟನೆಯಾಗುತ್ತಿದೆ: ಮೋದಿ

ಆರ್‌ಎಸ್‍ಎಸ್ ಬ್ಯಾನ್ ಮಾಡುವುದು ಕೇವಲ ಅವರ ಕನಸು ಅಷ್ಟೇ. ಇಂಥ ಪ್ರಯತ್ನಗಳು ಈ ಹಿಂದೆ ಬಹಳ ಸಲ ನಡೆದಿವೆ. ಅವು ತಾತ್ಕಾಲಿಕವಾಗಿದೆಯಷ್ಟೇ. ಸೂರ್ಯನ ಕಿರಣ ತಡೆಯಲು ಆಗಾಗ ಗ್ರಹಣ ಬರುತ್ತದೆ. ಅದು ಕ್ಷಣಿಕ ಮಾತ್ರ. ಗೃಹಣದಿಂದ ಸೂರ್ಯನ ಕಿರಣ ತಡೆಯಲು ಸಾಧ್ಯವಿಲ್ಲ. ಅದೇ ರೀತಿ ಆರ್‌ಎಸ್‍ಎಸ್ ಶ್ರೇಷ್ಠ ಕಾರ್ಯ ತಡೆಯಲು ಸಾಧ್ಯವಿಲ್ಲ ಎಂದರು.

ಇದೇ ವೇಳೆ ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿವೆ ಎಂಬ ಆರ್‌ಎಸ್‍ಎಸ್ ಮುಖಂಡ ದತ್ತಾತ್ರೇಯ ಹೊಸಬಾಳೆ ಹೇಳಿಕೆ ವಿಚಾರ ಹಾಗೂ ಪರೇಶ್ ಮೇಸ್ತಾ ಪ್ರಕರಣದ ಕುರಿತು ಪ್ರತಿಕ್ರಿಯಿಸಲು ಗೋಪಾಲ ನಾಗರಕಟ್ಟೆ ನಿರಾಕರಿಸಿದರು.  ಇದನ್ನೂ ಓದಿ: ಸೋನಿಯಾ ಗಾಂಧಿ ಮನಸ್ಸು ಮಾಡಿದರೆ ಎರಡು ಅವಧಿ ಪ್ರಧಾನಿ ಆಗಬಹುದಿತ್ತು: ಸತೀಶ್ ಜಾರಕಿಹೊಳಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *