ಸ್ಯಾಂಡಲ್‌ವುಡ್ (Sandalwood) ಡೈರೆಕ್ಟರ್ ಪವನ್ ಒಡೆಯರ್ (Pavan Wadeyar) ದಂಪತಿ ತಮ್ಮ ಮುದ್ದಾದ ಮಗಳಿಗೆ ಚೆಂದದ ಹೆಸರಿಟ್ಟಿದ್ದಾರೆ. ಇತ್ತೀಚೆಗಷ್ಟೇ 2ನೇ ಮಗುವನ್ನ ಪವನ್- ಅಪೇಕ್ಷಾ ಜೋಡಿ ಬರಮಾಡಿಕೊಂಡರು. ಈಗ ಅದ್ದೂರಿಯಾಗಿ ಮಗಳ ನಾಮಕರಣ ಮಾಡಿದ್ದಾರೆ.
ಗೂಗ್ಲಿ (Googly Film) ನಿರ್ದೇಶಕ ಪವನ್ ಒಡೆಯರ್ (Pavan Wadeyar) ಮತ್ತು ಅಪೇಕ್ಷಾ ಜೋಡಿ (Apeksha Purohit) ತಮ್ಮ ಮುದ್ದು ಮಗಳಿಗೆ ಯಾದ್ವಿ (Yadvi) ಎಂದು ಹೆಸರಿಟ್ಟಿದ್ದಾರೆ. ನಾಮಕರಣದ ಚೆಂದದ ವಿಡಿಯೋವೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಪವನ್ ದಂಪತಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:104 ದಿನಗಳಲ್ಲಿ ರೆಡಿಯಾಯ್ತು ಪರಿಣಿತಿ ಮದುವೆಗೆ ಧರಿಸಿದ ದುಬಾರಿ ಲೆಹೆಂಗಾ
View this post on Instagram
ಇವಳೇ ನಮ್ಮ ಜೀವನದ ಹೊಸ ಪ್ರೀತಿ, ರಾಜಕುಮಾರಿ ಮತ್ತು ಶೌರ್ಯನ ತಂಗಿ. ನಾವು ಇವಳನ್ನು ಯಾದ್ವಿ ಒಡೆಯರ್ ಎಂದು ಕರೆಯುತ್ತೇವೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಪವನ್ ಪತ್ನಿ ಅಪೇಕ್ಷಾ ಪುರೋಹಿತ್ ಬರೆದುಕೊಂಡಿದ್ದಾರೆ. ಈ ಸಮಾರಂಭದಲ್ಲಿ ‘ಗಾಳಿಪಟ’ ನಟಿ ಭಾವನಾ ರಾವ್ (Bhavana Rao) ಸೇರಿದಂತೆ ಚಿತ್ರರಂಗದ ಅನೇಕ ನಟ-ನಟಿಯರು ಭಾಗಿಯಾಗಿದ್ದಾರೆ.
ಅಂದ್ಹಾಗೆ, 2018ರಲ್ಲಿ ಅಪೇಕ್ಷಾ ಪುರೋಹಿತ್- ಪವನ್ ಒಡೆಯರ್ ಮದುವೆಯಾದರು. ದಂಪತಿಗೆ ಈಗಾಗಲೇ ಶೌರ್ಯ ಎಂಬ ಮಗನಿದ್ದಾನೆ. ಕಳೆದ ಜುಲೈ ತಿಂಗಳಿನಲ್ಲಿ ಹೆಣ್ಣು ಮಗುವಿಗೆ ಅಪೇಕ್ಷಾ ಜನ್ಮ ನೀಡಿದ್ದರು.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]