BollywoodCinemaLatestMain PostSandalwood

`ಗೂಗ್ಲಿ’ ನಟಿಗೆ ಶಾರುಖ್ ಖಾನ್ ಜೊತೆ ನಟಿಸಬೇಕಂತೆ

`ಚಿರು’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಪರಿಚಿತರಾದ ನಟಿ ಕೃತಿ ಕರಬಂಧ ಸದ್ಯ ಬಹುಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಿರೋ ನಟಿಗೆ ಶಾರುಖ್ ಖಾನ್ ಜೊತೆ ನಟಿಸಬೇಕಂತೆ ಹಾಗಂತ ಸ್ವತಃ ನಟಿ ಕೃತಿ ಹೇಳಿಕೊಂಡಿದ್ದಾರೆ.

`ಚಿರು’, `ಪ್ರೇಮ್ ಅಡ್ಡಾ’, `ಗೂಗ್ಲಿ’ ಚಿತ್ರದ ಮೂಲಕ ಗಮನ ಸೆಳೆದ ನಟಿ ಕೃತಿ ಈಗ ಬಾಲಿವುಡ್ ಚಿತ್ರಗಳಲ್ಲಿ ಆಕ್ಟೀವ್ ಆಗಿದ್ದಾರೆ. ಜತೆಗೆ ಇದೀಗ ಮಾಲಿವುಡ್ ಚಿತ್ರರಂಗದಲ್ಲೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇತ್ತೀಚೆಗೆ `ಗೂಗ್ಲಿ’ ನಟಿ ಕೃತಿ ನೀಡಿದ ಸಂದರ್ಶನವೊಂದರಲ್ಲಿ ನಾನು ಶಾರುಖ್ ಖಾನ್ ಅಭಿಮಾನಿ, ಅವರ ಜತೆ ಚಿತ್ರದಲ್ಲಿ ನಟಿಸಬೇಕು ಎಂಬ ತಮ್ಮ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದಾರೆ.

ಕೃತಿ ಚಿಕ್ಕವಯಸ್ಸಿನಿಂದಲೂ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಸಿನಿಮಾಗಳನ್ನ ನೋಡುತ್ತಲೇ ಬೆಳೆದವರು. ಅದರಲ್ಲೂ ಕಳೆದ ವರ್ಷ ಲಾಕ್‌ಡೌನ್‌ನಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ಕುಟುಂಬದ ಜೊತೆ ಸಾಕಷ್ಟು ಸಿನಿಮಾಗಳನ್ನ ನೋಡಿದ್ದರಂತೆ. ಕೆಲ ವರ್ಷಗಳ ಹಿಂದೆ `ಕುಚ್ ಕುಚ್ ಹೋತಾ ಹೈ’ ನೋಡಿ ಚಿತ್ರದಲ್ಲಿ ಇರುವಂತಹದ್ದೆ ಪ್ರೇಂಡ್‌ಶಿಪ್ ಬ್ಯಾಂಡ್ ತಂದು ಹಾಕಿಕೊಂಡಿದ್ದರಂತೆ. ಇದನ್ನೂ ಓದಿ: ಬಾಲಿವುಡ್ ಗಲ್ಲಾಪೆಟ್ಟಿಗೆಯಲ್ಲಿ 18ನೇ ದಿನವೂ ರಾಕಿಭಾಯ್ ಅಬ್ಬರ: 400 ಕೋಟಿಯತ್ತ `ಕೆಜಿಎಫ್ 2′

ಇನ್ನು ಸಾಕಷ್ಟು ಖಾನ್ ಸಿನಿಮಾ ನೋಡಿ ಬೆಳೆದಿರೋ ಕೃತಿಗೆ ಒಂದಲ್ಲಾ ಒಂದು ದಿನ ತಾನು ಅವರ ಜತೆ ನಟಿಸುತ್ತೇನೆ. ಹಾಗೆಯೇ ನನ್ನ ನೆಚ್ಚಿನ ನಟ ಶಾರುಖ್ ಖಾನ್ ಜೊತೆ ನಟಿಸೋದು ನಿಜ ಅಂತಾ ತಮ್ಮ ಮನದಾಸೆಯನ್ನು ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಗೂಗ್ಲಿ ನಟಿಯ ಇಚ್ಛೆಯಂತೆಯೇ ಆಗಲಿ ಅಂತಾ ಫ್ಯಾನ್ಸ್ ಕೂಡ ವಿಶ್ ಮಾಡ್ತಿದ್ದಾರೆ.

Leave a Reply

Your email address will not be published.

Back to top button