ಬೆಂಗಳೂರು: ಗೂಗಲ್ 2018ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಹುಡುಕಾಡಿದ ಟ್ರೆಡಿಂಗ್ ಟಾಪಿಕ್ ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ರಾಜಕೀಯ ಸುದ್ದಿಯಲ್ಲಿ ಕರ್ನಾಟಕ ಚುನಾವಣೆ ದೇಶದಲ್ಲೇ ನಂಬರ್ ಒನ್ ಸ್ಥಾನವನ್ನು ಪಡೆದಿದೆ.
ಗೂಗಲ್‍ನ ರಾಜಕೀಯ ವಿಭಾಗದ ಸುದ್ದಿಯಲ್ಲಿ ಟಾಪ್ 1 ಟ್ರೆಂಡಿಂಗ್ ನಲ್ಲಿ ಕರ್ನಾಟಕದ ಫಲಿತಾಂಶ ಸ್ಥಾನ ಗಿಟ್ಟಿಸಿಕೊಂಡಿದೆ. ಓವರ್ ಆಲ್ ಸುದ್ದಿ ವಿಭಾಗದಲ್ಲಿ ಕರ್ನಾಟಕ ಚುನಾವಣೆ 2ನೇ ಸ್ಥಾನ ಪಡೆದುಕೊಂಡಿದೆ. ಒಟ್ಟಾರೆ ವಿಭಾಗದಲ್ಲಿ ಟಾಪ್ 4 ಸ್ಥಾನದಲ್ಲಿದೆ.
Advertisement
ಸುದ್ದಿ ವಿಭಾಗ:
ಫಿಫಾ ವರ್ಲ್ಡ್ ಕಫ್ ಮೊದಲನೇ ಸ್ಥಾನದಲ್ಲಿದೆ. ಇದನ್ನು ಬಿಟ್ಟರೆ ಭಾರತದಲ್ಲಿ ಹೆಚ್ಚು ಜನರು ಕರ್ನಾಟಕ ಚುನಾವಣಾ ಸುದ್ದಿಯ ಬಗ್ಗೆ ಹುಡುಕಾಟ ನಡೆಸಿದ್ದಾರೆ. ಮೂರನೇ ಸ್ಥಾನ ಪ್ರಿಯಾಂಕ ಚೋಪ್ರಾ ಮದುವೆ ಸಿಕ್ಕಿದರೆ ನಾಲ್ಕನೇಯ ಸ್ಥಾನ ಏಕತಾ ಪ್ರತಿಮೆಗೆ ಸಿಕ್ಕಿದೆ.
Advertisement
Advertisement
ಒಟ್ಟಾರೆ ವಿಭಾಗ:
ಈ ವಿಭಾಗದಲ್ಲಿಯೂ ಫಿಫಾ ವರ್ಲ್ಡ್ ಕಫ್ ಮೊದಲನೇ ಸ್ಥಾನದಲ್ಲಿದೆ. ಟಾಪ್ 2ನಲ್ಲಿ ಲೈವ್ ಸ್ಕೋರ್ ಹಾಗೂ ಟಾಪ್ 3ನಲ್ಲಿ ಐಪಿಎಲ್ 2018 ಇದೆ. ಇದರ ನಂತರ ಸ್ಥಾನದಲ್ಲಿ ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆ ಫಲಿತಾಂಶವಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv