ನವದೆಹಲಿ: ಅಮೆರಿಕಾ ತಂತ್ರಜ್ಞಾನ ದೈತ್ಯ ಗೂಗಲ್ ಟೆಲಿಕಾಂ ಕಂಪನಿ ಏರ್‌ಟೆಲ್‌ನೊಂದಿಗೆ ಒಂದು ಮಹತ್ತರ ಒಪ್ಪಂದ ನಡೆಸಿದೆ. ಈ ಮೂಲಕ ಗೂಗಲ್ ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಗೂಗಲ್ ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಭಾರತಿ ಏರ್‌ಟೆಲ್‌ನಲ್ಲಿ ಮುಂದಿನ 5 ವರ್ಷಗಳ ಅವಧಿಯಲ್ಲಿ 1 ಬಿಲಿಯನ್ ಡಾಲರ್(7,400 ಕೋಟಿ ರೂ.) ಹೂಡಿಕೆ ಮಾಡಲಿದೆ ಎಂದು ವರದಿಯಾಗಿದೆ. ಈ ಒಪ್ಪಂದದ ಪ್ರಕಾರ ಗೂಗಲ್ ಸಂಸ್ಥೆ ಏರ್‌ಟೆಲ್ ಕಂಪನಿಯ ಶೇ. 1.28ರಷ್ಟು ಪಾಲುದಾರಿಕೆಯನ್ನು ತಲಾ ಷೇರಿಗೆ 734 ರೂ.ಯಂತೆ ಪಡೆದುಕೊಳ್ಳಲಿದೆ ಹಾಗೂ 300 ಮಿಲಿಯನ್ ಡಾಲರ್ ವಾಣಿಜ್ಯ ಒಪ್ಪಂದಗಳಿಗೆ ಹೂಡಿಕೆ ಮಾಡಲಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್
Advertisement
Advertisement
ಈ ಒಪ್ಪಂದದ ಮೂಲಕ ಏರ್‌ಟೆಲ್ ಹಾಗೂ ಗೂಗಲ್ ಒಟ್ಟಾಗಿ ಗ್ರಾಹಕರಿಗೆ ಕೈಗೆಟಕುವಂತಹ ಹೊಸ ಕೊಡುಗೆಗಳನ್ನು ನೀಡಲು ಮುಂದಾಗುತ್ತಿದೆ. 5ಜಿ ಹಾಗೂ ಇತರ ಸಂಬಂಧಿತ ಸೌಲಭ್ಯಗಳ ಬಳಕೆಗೆ ನೆಟ್‍ವರ್ಕ್ ಡೊಮೈನ್ ರಚನೆಗೆ ಹೆಚ್ಚಿನ ಮಹತ್ವ ನೀಡಲಿದೆ ಎಂದು ಏರ್‌ಟೆಲ್ ತಿಳಿಸಿದೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ
Advertisement
ಡಿಜಿಟೈಸೇಶನ್ ಫಂಡ್‍ನ ಮುಂದುವರಿಕೆಯಾಗಿ ಹೊಸ ವ್ಯಾಪಾರ ಮಾದರಿಯನ್ನು ಬೆಂಬಲಿಸಲು ಹಾಗೂ ಸಂಪರ್ಕವನ್ನು ಹೆಚ್ಚಿಸಲು ಏರ್‌ಟೆಲ್‌ನಲ್ಲಿ ನಮ್ಮ ಹೂಡಿಕೆ ಪ್ರಾರಂಭಿಸಿದ್ದೇವೆ ಎಂದು ಗೂಗಲ್ ಹಾಗೂ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ತಿಳಿಸಿದ್ದಾರೆ.