ಬೆಂಗಳೂರು: ತುಳು ಭಾಷೆಯನ್ನು (Tulu Language) ಕಲಿಯಬೇಕೆಂಬ ಜನರಿಗೆ ಸಿಹಿ ಸುದ್ದಿ. ಈಗ ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಯಾಗಿದೆ.
ಗೂಗಲ್ ಟ್ರಾನ್ಸ್‌ಲೇಟ್‌ನಲ್ಲಿ ಹೊಸದಾಗಿ 110 ಭಾಷೆಗಳನ್ನು ಸೇರಿಸಿದೆ. ಭಾರತದ ತುಳು ಸೇರಿದಂತೆ ಅವಧಿ, ಬೋಡೋ, ಖಾಸಿ, ಕೊಕ್ಬೊರೊಕ್, ಮಾರ್ವಾಡಿ, ಸಂತಾಲಿಯನ್ನು ಸೇರಿಸಿದೆ.
Advertisement
Tulu language has been included in Google Translate! This will bring our beautiful language f Karnataka to millions around the world, bridging gaps in translation journey and fostering connections.
A huge thank you to everyone involved in this !#TuluLanguage #GoogleTranslate pic.twitter.com/HrEkfefzVD
— Kuntady Nithesh (@kuntadynithesh) June 28, 2024
Advertisement
Google ಅನುವಾದವನ್ನು 2006 ರಲ್ಲಿ ಪರಿಚಯಿಸಲಾಗಿದ್ದು ಇಲ್ಲಿಯವರೆಗೆ 133 ಭಾಷೆಗಳನ್ನು ಬೆಂಬಲಿಸುತಿತ್ತು. ಆದರೆ ಈಗ ಒಂದೇ ಬಾರಿಗೆ 110 ಭಾಷೆಗಳನ್ನು ಸೇರಿಸಿದ್ದು ಒಟ್ಟು ಈಗ 243 ಭಾಷೆಗಳನ್ನು ಬೆಂಬಲಿಸುತ್ತಿದೆ.
Advertisement
ಡೆಸ್ಕ್‌ಟಾಪ್‌ನಲ್ಲಿ translate.google.co.in ಹೋಗಿ ಭಾಷೆಯನ್ನು ಆಯ್ಕೆ ಮಾಡಬಹುದು. ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್ ಟ್ರಾನ್ಸ್‌ಲೇಟ್ ಆಪ್ ಡೌನ್‌ಲೋಡ್ ಅಥವಾ ಡೆಸ್ಕ್‌ಟಾಪ್ ಯುಆರ್‌ಎಲ್ ಲಿಂಕ್ ಬಳಸಿ ಭಾಷಾಂತರ ಮಾಡಬಹುದು. ಇದನ್ನೂ ಓದಿ: ಡಿಕೆಗೆ ಸಿಎಂ ಸ್ಥಾನ ಹೇಳಿಕೆ ಹಿಂದಿದ್ಯಾ ಕುತಂತ್ರ? – ಆಪ್ತರ ಬಳಿ ಸಿಎಂ ತೀವ್ರ ಅಸಮಾಧಾನ
Advertisement
ಸೊಲ್ಮೆಲು 🙏
Thank You @GoogleIndia @Google for recognising one of the oldest language #Tulu in Google translation.
You truly treat & respect all languages equally, unlike our governments.
Let’s improve the translation by providing good feedback#TuluOfficialinKA @CMofKarnataka pic.twitter.com/1i2c29DJtN
— Vije (@vijeshetty) June 28, 2024
ಹಲವು ಪದಗಳು ನಿಖರವಾಗಿ ತುಳುವಿಗೆ ಅನುವಾದವಾದರೂ ಕೆಲವೊಂದು ಪದಗಳು ಸರಿಯಾಗಿ ಅನುವಾದವಾಗೇಬೇಕಿದೆ. ಕನ್ನಡ ಭಾಷೆಯನ್ನು ಆರಂಭದಲ್ಲಿ ಟ್ರಾನ್ಸ್‌ಲೇಟ್‌ಗೆ ಸೇರಿಸಿದಾಗಲೂ ಕೆಲವೊಂದು ಪದಗಳು ಸರಿಯಾಗಿ ಅನುವಾದವಾಗುತ್ತಿರಲಿಲ್ಲ. ಹಂತ ಹಂತವಾಗಿ ಗೂಗಲ್ ಇದನ್ನು ಸರಿಪಡಿಸುತ್ತಾ ಬಂದಿದೆ. ಗೂಗಲ್‌ನ ಆರಂಭಿಕ ಪ್ರಯತ್ನಕ್ಕೆ ತುಳು ಭಾಷಿಗರು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.