ನವದೆಹಲಿ: ಗೂಗಲ್ ಇಮೇಜಸ್‍ನಲ್ಲಿ ಕಳ್ಳ, ಕ್ರಿಮಿನಲ್ ಎಂದು ಸರ್ಜ್ ಮಾಡಿದರೆ ಕುಖ್ಯಾತರ ಫೋಟೋಗಳು ಕಾಣಿಸುತ್ತವೆ. ಆದರೆ ಬಿಕಾರಿ (Bhikhari) ಅಂತ ಉರ್ದು ಭಾಷೆಯಲ್ಲಿ ಹುಡುಕಿದರೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಫೋಟೋ ಬರುತ್ತಿವೆ.
ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ವಿಧಾನಸಭೆ ಸಮನ್ಸ್ ಜಾರಿ ಮಾಡಿದೆ.
Advertisement
ಗೂಗಲ್ ಸರ್ಚ್ ನಲ್ಲಿ ಈ ಹಿಂದೆ ಈಡಿಯಟ್ ಎಂದು ಹುಡುಕಿದಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅರವರ ಫೋಟೋ ಕಾಣಸಿಗುತ್ತಿತ್ತು. ಇದು ತೀವ್ರ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೇ ಗೂಗಲ್ ಸಿಇಒ ಸುಂದರ್ ಪಿಚೈ ಅವರು ಈ ಸಂಬಂಧ ಉತ್ತರವನ್ನು ಅಮೆರಿಕದ ಸೆನೆಟ್ ನಲ್ಲಿ ನೀಡಿದ್ದರು.
Advertisement
Advertisement
2018ರ ಡಿಸೆಂಬರ್ ನಲ್ಲಿ ಗೂಗಲ್ ಡೇಟಾ ಸಂಗ್ರಹದ ಪಾರದರ್ಶಕತೆ, ಉತ್ತಾರದಾಯಿತ್ವ ವಿಚಾರದ ಬಗ್ಗೆ ಎದಿದ್ದ ಸಂದೇಹಗಳಿಗೆ ಉತ್ತರ ನೀಡಲು ಸುಂದರ್ ಪಿಚೈ ಆಗಮಿಸಿದ್ದರು. ಸುಮಾರು ಮೂರುವರೆ ಗಂಟೆಗಳ ಕಾಲ ಪ್ರಶ್ನೋತ್ತರ ವಿಚಾರಣೆ ನಡೆಯಿತು.
Advertisement
ಈ ಸಮಯದಲ್ಲಿ ಸೆನೆಟರ್ ಜೂಹಿ ಲೊಫ್ಗ್ರೆನ್ ಅವರು, ಗೂಗಲ್‍ನಲ್ಲಿ ಈಡಿಯೆಟ್ ಎಂದು ಸರ್ಚ್ ಮಾಡಿದರೆ, ಟ್ರಂಪ್ ಅವರ ಫೋಟೋ ಹಾಗೂ ಅವರಿಗೆ ಸಂಬಂಧಿಸಿದ ಸುದ್ದಿಗಳು ಬರುತ್ತವೆ. ಈ ಪದವನ್ನು ಟೈಪ್ ಮಾಡಿದ ಕೂಡಲೇ ಟ್ರಂಪ್ ಫೋಟೋ ಬರಲು ಹೇಗೆ ಸಾಧ್ಯ? ಇದರಲ್ಲಿ ವ್ಯಕ್ತಿಗಳ ಕೈವಾಡವಿದೆಯೇ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಸುಂದರ್ ಪಿಚೈ, ಈ ರೀತಿಯ ಫಲಿತಾಂಶ ಬರಲು ಯಾವುದೇ ವ್ಯಕ್ತಿಗಳ ಕೈವಾಡವಿಲ್ಲ. ಗೂಗಲ್ ಕೀವರ್ಡ್ ಗಳನ್ನು ಬಳಸಿಕೊಂಡು ನಿಖರ ಸರ್ಚ್ ರಿಸಲ್ಟ್ ಗಳನ್ನು ನೀಡುತ್ತದೆ. ಕೀವರ್ಡ್ ಗಳನ್ನು ಪಡೆದು ನಂತರ 200 ಸಿಗ್ನಲ್‍ಗಳ ಮೂಲಕ ಮ್ಯಾಚ್ ಮಾಡಲಾಗುತ್ತದೆ. ಅತಿ ಹೆಚ್ಚು ಸರ್ಚ್, ಪ್ರಸ್ತುತ ಅದರ ಅಗತ್ಯತೆ ಈ ಎಲ್ಲ ವಿಚಾರಗಳನ್ನು ನೋಡಿಕೊಂಡು ಫಲಿತಾಂಶ ಬರುವಂತೆ ಸಿದ್ಧಪಡಿಸಲಾಗಿದೆ. ಎಲ್ಲ ಸರ್ಚ್‍ಗಳನ್ನು ನಾವು ಪರಿಶೀಲಿಸುವುದಿಲ್ಲ ಎಂದು ತಿಳಿಸಿದ್ದರು.
At hearing discussing political bias accusations, Rep. Zoe Lofgren (D-CA) asks Google CEO Sundar Pichai to explain how a picture of Donald Trump comes up when looking up the term "idiot" under images and how search results work https://t.co/UnnwgPQFqO pic.twitter.com/oqRmMeWzW5
— CBS News (@CBSNews) December 11, 2018
ಗೂಗಲ್‍ನಲ್ಲಿ ಈ ರೀತಿಯ ಫಲಿತಾಂಶ ಬರುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಫೇಕ್ ಎನ್ನುವ ಪದವನ್ನು ಗೂಗಲ್ ನಲ್ಲಿ ಟೈಪ್ ಮಾಡಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ತೋರಿಸುತ್ತಿತ್ತು. ಅಲ್ಲದೇ ಪಪ್ಪು ಎಂದು ಟೈಪ್ ಮಾಡಿದಾಗ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಫೋಟೋ ಕೂಡ ಬಂದಿತ್ತು.