ದಿಸ್ಪುರ್: ಆಂಡ್ರಾಯ್ಡ್ನಲ್ಲಿದ್ದ ದೋಷವನ್ನು ಕಂಡು ಹುಡುಕಿ ಅದನ್ನು ಗೂಗಲ್‌ಗೆ ವರದಿ ನೀಡಿದ್ದಕ್ಕೆ ಗೂಗಲ್ 3.5ಲಕ್ಷ ರೂ.ಯನ್ನು ಬಹುಮಾನವಾಗಿ ನೀಡಿದೆ. ದೋಷವನ್ನು ಕಂಡುಹಿಡಿದ ಭಾರತೀಯ ರೋನಿ ದಾಸ್ ಅಸ್ಸಾಂ ಮೂಲದವರು.
ಆಂಡ್ರಾಯ್ಡ್ನ ಫೋರ್‌ಗ್ರೌಂಡ್ ಸೇವೆಯಲ್ಲಿ ಕೆಲವು ದೋಷಗಳಿದ್ದು, ಇದರ ಮೂಲಕ ಹ್ಯಾಕರ್‌ಗಳು ಸುಲಭವಾಗಿ ಬಳಕೆದಾರರ ಫೋನ್‌ಗಳಿಂದ ವಯಕ್ತಿಕ ಮಾಹಿತಿ ಪಡೆಯಲು ಸಾಧ್ಯವಾಗುತ್ತಿತ್ತು. ರೋನಿ ದಾಸ್ ಸೈಬರ್-ಸೆಕ್ಯೂರಿಟಿಯ ಬಗ್ಗೆ ತಿಳುವಳಿಕೆ ಹೊಂದಿದ್ದು, ಆಂಡ್ರಾಯ್ಡ್ನಲ್ಲಿದ್ದ ಸಮಸ್ಯೆಯನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ನಮ್ಮಿಬ್ಬರ ಮದುವೆ ಯಾವಾಗ – ಆಲಿಯಾಗೆ ರಣಬೀರ್ ಪ್ರಶ್ನೆ
Advertisement
Advertisement
ರೋನಿಯವರು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ನಲ್ಲಿ ಅಪ್ಲಿಕೇಶನ್ ಒಂದನ್ನು ರಚಿಸುವಾಗ ತಾಂತ್ರಿಕ ಸಮಸ್ಯೆಯನ್ನು ಎದುರಿಸಿದ್ದರು. ಅದರಲ್ಲಿದ್ದ ದೋಷವನ್ನು ಕಂಡು ಹುಡುಕಿದ ರೋನಿ ಮೇ ತಿಂಗಳಿನಲ್ಲಿ ಗೂಗಲ್‌ಗೆ ದೋಷದ ಬಗ್ಗೆ ವರದಿ ಮಾಡಿದ್ದಾರೆ. ಇದನ್ನೂ ಓದಿ: ಹೆದ್ದಾರಿಯಲ್ಲಿ ಹೊಂಚು ಹಾಕಿ ಬೇಟೆಯಾಡಿದ ಚಿರತೆ – ವೀಡಿಯೋ ವೈರಲ್
Advertisement
ದೋಷದ ಬಗ್ಗೆ ಮಾಹಿತಿ ಪಡೆದ ಗೂಗಲ್ ಆಂಡ್ರಾಯ್ಡ್ ಭದ್ರತಾ ತಂಡ ರೋನಿ ಯವರಿಗೆ ಇಮೇಲ್ ಮೂಲಕ ಧನ್ಯವಾದ ಹೆಳಿದೆ. ಇದರೊಂದಿಗೆ ರೋನಿಗೆ 5000 ಡಾಲರ್(3.5 ಲಕ್ಷ ರೂ.)ಅನ್ನೂ ನೀಡಿದೆ.