ನವದೆಹಲಿ: ಭಾರತ ವಿರೋಧಿ ಹಾಗೂ ಪ್ರತ್ಯೇಕತಾವಾದದ ಕುರಿತ ‘2020 ಸಿಖ್ ರೆಫೆರೆಂಡಮ್’ ಎಂಬ ಆ್ಯಪ್‍ನ್ನು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ತೆಗೆದು ಹಾಕಿದೆ.
ಈ ದೇಶ ವಿರೋಧಿ ಹಾಗೂ ಪ್ರತ್ಯೇಕತಾ ವಾದದ ಕುರಿತ ಆ್ಯಪ್‍ನ್ನು ತೆಗೆದು ಹಾಕುವಂತೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮನವಿ ಮಾಡಿದ್ದರು. ಸಿಎಂ ಮನವಿಯನ್ನು ಪರಿಗಣಿಸಿದ ಗೂಗಲ್ ತನ್ನ ಪ್ಲೇ ಸ್ಟೋರಿನಿಂದ 2020 ಸಿಖ್ ರೆಫೆರೆಂಡಮ್(2020 ಸಿಖ್ ಜನಾಭಿಪ್ರಾಯ ಸಂಗ್ರಹ) ಆ್ಯಪ್‍ನ್ನು ತೆಗೆದು ಹಾಕಿದೆ. ಈ ಕುರಿತು ಪಂಜಾಬ್‍ನ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Advertisement
ಭಾರತದ ಮೊಬೈಲ್ ಬಳಕೆದಾರರಿಗೆ ಈ ಆ್ಯಪ್ ಇನ್ನು ಮುಂದೆ ಲಭ್ಯವಿಲ್ಲ ಎಂದು ಮುಖ್ಯಮಂತ್ರಿ ಕಚೇರಿಯ ವಕ್ತಾರರು ತಿಳಿಸಿದ್ದಾರೆ.
Advertisement
Advertisement
ಈ ಕುರಿತು ಗೂಗಲ್ ಗೆ ಮನವರಿಕೆ ಮಾಡುವಂತೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ICETEC ರಚಿಸಿರುವ ಈ ಆ್ಯಪ್ ಬಿಡುಗಡೆಯಿಂದ ಉಂಟಾಗಿರುವ ಬೆದರಿಕೆಯನ್ನು ನಿಭಾಯಿಸಲು ಕೇಂದ್ರದ ಭದ್ರತಾ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಅಮರಿಂದರ್ ಸಿಂಗ್ ಆದೇಶಿಸಿದ್ದರು.
Advertisement
ಈ ಆ್ಯಪ್ ಮೂಲಕ ಪಂಜಾಬ್ ಜನಾಭಿಪ್ರಾಯ 2020 ಖಲಿಸ್ತಾನ್ ಎಂಬ ಹೆಸರಲ್ಲಿ ಮತ ಸಂಗ್ರಹಿಸಲಾಗುತ್ತಿತ್ತು. ನೋಂದಾಯಿಸಿಕೊಳ್ಳುವಂತೆ ಆ್ಯಪ್ ಸಾರ್ವಜನಿಕರಿಗೆ ಸೂಚಿಸಿತ್ತು. ಅಲ್ಲದೆ ಎಸ್2ಖಲಿಸ್ತಾನ್ ಎಂಬ ವೆಬ್‍ಸೈಟನ್ನು ಸಹ ಇದೇ ಉದ್ದೇಶಕ್ಕಾಗಿ ಪ್ರಾರಂಭಿಸಲಾಗಿತ್ತು.
ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದುಹಾಕಲು ಹಾಗೂ ಭಾರತದಲ್ಲಿ ವೆಬ್‍ಸೈಟ್ ಬಳಕೆಯನ್ನು ನಿರ್ಬಂಧಿಸಲು ಪಂಜಾಬ್‍ನ ತನಿಖಾ ದಳ ಹಾಗೂ ಸೈಬರ್ ಅಪರಾಧ ವಿಭಾಗವು ಪ್ರಯತ್ನ ನಡೆಸಿತ್ತು. ಈ ಹಿನ್ನೆಲೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(3)ಬಿ ಅಡಿಯಲ್ಲಿ ಗೂಗಲ್ ಪ್ಲೇ ಸ್ಟೋರಿನಿಂದ ಆ್ಯಪ್ ತೆಗೆದು ಹಾಕುವಂತೆ ನ.8ರಂದು ಗೂಗಲ್‍ಗೆ ಸೂಚಿಸಲಾಗಿತ್ತು ಎಂದು ಸರ್ಕಾರದ ವಕ್ತಾರರು ಮಾಹಿತಿ ನೀಡಿದ್ದಾರೆ.