ನವದೆಹಲಿ: ಗೂಗಲ್ ಪೇ ಭಾರತದಲ್ಲಿ ಯುಪಿಐ(ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್) ವಹಿವಾಟಿನ ಹೊಸ ಫೀಚರ್ ಟ್ಯಾಪ್ ಟು ಪೇ ಯನ್ನು ಪ್ರಾರಂಭಿಸುವುದಾಗಿ ತಿಳಿಸಿದೆ.
ಗೂಗಲ್ ಪೇಯ ಈ ಹೊಸ ಫೀಚರ್‌ನಿಂದ ಬಳಕೆದಾರರು ತಮ್ಮ ಫೋನ್‌ಗಳನ್ನು ನೇರವಾಗಿ ಅಂಗಡಿಗಳಲ್ಲಿ ಲಭ್ಯವಾಗುವ ಪಾಯಿಂಟ್-ಆಫ್-ಸೇಲ್(ಪಿಒಎಸ್)ನ ಟರ್ಮಿನಲ್‌ನಲ್ಲಿ ಟ್ಯಾಪ್ ಮಾಡುವ ಮೂಲಕ ಯುಪಿಐ ಪಾವತಿಗಳನ್ನು ಮಾಡಲು ಸಹಾಯವಾಗಲಿದೆ.
Advertisement
ಬಳಕೆದಾರರು ತಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಎನ್‌ಎಫ್‌ಸಿಯನ್ನು ಸಕ್ರಿಯಗೊಳಿಸಿದ್ದಾಗ ಮಾತ್ರವೇ ಈ ಫೀಚರ್ ಬಳಸಲು ಸಾಧ್ಯವಾಗುತ್ತದೆ. ಆದರೆ ಆಪಲ್ ಕಂಪನಿಯ ಫೋನ್‌ಗಳಲ್ಲಿ ಎನ್‌ಎಫ್‌ಸಿ(ನಿಯರ್ ಫೀಲ್ಡ್ ಕಮ್ಯೂನಿಕೇಶನ್) ಮೂಲಕ ಆಪಲ್ ಪೇ ಹೊರತುಪಡಿಸಿ ಇತರ ಯುಪಿಐ ಪಾವತಿ ಸಾಧ್ಯವಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: ಪ್ಲುಟೋದಲ್ಲಿ ಹೊಸ ವಿಸ್ಮಯ – ಸೌರವ್ಯೂಹದಲ್ಲಿ ಎಲ್ಲೂ ಕಾಣಿಸದ ಮಂಜಿನ ಜ್ವಾಲಾಮುಖಿಯ ಸುಳಿವು
Advertisement
Advertisement
ಇನ್ನು ಮುಂದೆ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ಕೇವಲ ಪಿಒಎಸ್ ಟರ್ಮಿನಲ್‌ನಲ್ಲಿ ಒಂದು ಟ್ಯಾಪ್ ಮಾಡುವ ಮೂಲಕ ಸುಲಭವಾಗಿ ಯುಪಿಐ ಪಾವತಿಗಳನ್ನು ಮಾಡಬಹುದು. ಇದನ್ನೂ ಓದಿ: ಇಮ್ರಾನ್ ಖಾನ್ ಕೊನೆಯ ಬಾಲ್ ವರೆಗೂ ಹೋರಾಡುತ್ತಾರೆ, ರಾಜೀನಾಮೆ ಕೊಡಲ್ಲ: ಪಾಕ್ ಸಚಿವ
Advertisement
ಟ್ಯಾಪ್ ಟು ಪೇ ಫೀಚರ್ ಅನ್ನು ಗೂಗಲ್ ಪೇ ಹೊಸದಾಗಿ ಪರಿಚಯಿಸುತ್ತಿಲ್ಲ. ಈ ಮೊದಲೇ ಕಾರ್ಡ್ ಬಳಕೆದಾರರಿಗೂ ಫೀಚರ್ ಲಭ್ಯವಿತ್ತು. ಇಲ್ಲಿ ವರೆಗೆ ಗೂಗಲ್ ಪೇನಲ್ಲಿ ಕ್ಯೂಆರ್ ಕೋಡ್ ಅಥವಾ ಫೋನ್ ನಂಬರ್‌ಗಳಿಂದ ಮಾತ್ರವೇ ಪಾವತಿಗಳನ್ನು ಮಾಡಲು ಸಾಧ್ಯವಿತ್ತು. ಇದೀಗ ಗೂಗಲ್ ಪೇಯ ಹೊಸ ಪಾವತಿಗಳ ಆಯ್ಕೆಗೆ ಟ್ಯಾಪ್ ಟು ಪೇ ಸೇರ್ಪಡೆಗೊಂಡಿದೆ.