ನವದೆಹಲಿ: ಮನೆಯನ್ನು ಸ್ಮಾರ್ಟ್ ಹೋಮ್ ಮಾಡಬಲ್ಲ ಗೂಗಲ್ ಕಂಪನಿ ಅಭಿವೃದ್ಧಿ ಪಡಿಸಿರುವ ‘ನೆಸ್ಟ್ ಹಬ್’ ಸಾಧನ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗಿದೆ.
3500 ಕಂಪನಿಗಳ ಒಟ್ಟು 2 ಕೋಟಿ ಉತ್ಪನ್ನಗಳನ್ನು ನಿಯಂತ್ರಿಸುವ ಗೂಗಲ್ ನೆಸ್ಟ್ ಹಬ್ 9,999 ರೂ. ದರ ನಿಗದಿಯಾಗಿದೆ. ಫ್ಲಿಪ್ ಕಾರ್ಟ್, ಟಾಟಾ ಕ್ಲಿಕ್, ಕ್ರೋಮಾ, ರಿಲಯನ್ಸ್ ಡಿಜಿಟಲ್ ಮೂಲಕ ಈ ಸಾಧನವನ್ನು ಖರೀದಿ ಮಾಡಬಹುದಾಗಿದೆ.
Advertisement
ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಅಮೆರಿಕದಲ್ಲಿ ಈ ನೆಸ್ಟ್ ಹಬ್ ಬಿಡುಗಡೆಯಾಗಿತ್ತು. ಅಮೆರಿಕದಲ್ಲಿ 99 ಡಾಲರ್(ಅಂದಾಜು 7,100 ರೂ.) ಬೆಲೆಯಲ್ಲಿ ಈ ಸಾಧನ ಈಗ ಮಾರಾಟವಾಗುತ್ತಿದೆ.
Advertisement
Advertisement
ಮೇ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ಅಮೆಜಾನ್ ಇಕೋ ಶೋಗೆ ಪ್ರತಿಯಾಗಿ ಗೂಗಲ್ ಈಗ ನೆಸ್ಟ್ ಹಬ್ ಬಿಡುಗಡೆ ಮಾಡಿದೆ. ಅಮೆಜಾನ್ ಇಕೋ ಶೋಗೆ 8,999 ರೂ. ದರವಿದೆ. ಗೂಗಲ್ ಅಸಿಸ್ಟೆಂಟ್, ಕ್ರೋಮೋಕ್ಯಾಸ್ಟ್ ಬಿಲ್ಟ್ ಇನ್ ಫೀಚರ್ ಹೊಂದಿದೆ. ಆಂಡ್ರಾಯ್ಡ್, ಐಓಎಸ್, ಮ್ಯಾಕ್, ವಿಂಡೋಸ್ ಮತ್ತು ಕ್ರೋಮ್ ಬುಕ್ ಮೂಲಕ ಕೆಲಸ ಮಾಡಬಹುದು.
Advertisement
ಗುಣ ವೈಶಿಷ್ಟ್ಯ ಏನು?
ನಿಮ್ಮ ಧ್ವನಿಯ ಮೂಲಕವೇ ಸಂಪೂರ್ಣ ಮನೆಯನ್ನು ನಿಯಂತ್ರಿಸಬಹುದು. ಗೂಗಲ್ ಸರ್ಚ್, ಗೂಗಲ್ ನ್ಯೂಸ್, ಯೂ ಟ್ಯೂಬ್, ಗೂಗಲ್ ಫೋಟೋ ಸೇರಿದಂತೆ ಗೂಗಲ್ ನಹಲವು ಸೇವೆಗಳು ಇದರಲ್ಲಿ ಲಭ್ಯವಿದೆ. ನಿಮ್ಮ ಮನೆಯಲ್ಲಿ ಸ್ಮಾರ್ಟ್ ಸಾಧನಗಳಾದ ಕ್ಯಾಮೆರಾ, ಲಾಕ್, ಲೈಟ್ ವ್ಯವಸ್ಥೆ ಸೇರಿದಂತೆ ಹಲವು ವ್ಯವಸ್ಥೆಯನ್ನು ನೀವು ನೆಸ್ಟ್ ಹಬ್ ಮೂಲಕವೇ ನಿಯಂತ್ರಿಸಬಹುದು.
67.3 ಸೆಂ.ಮೀ ಉದ್ದ, 17.58 ಸೆ.ಮೀ ಅಗಲ, 11.8 ಸೆ. ಎತ್ತರ, 1.5 ಮೀ ಪವರ್ ಕೇಬಲ್, 7 ಇಂಚಿನ ಎಲ್‍ಸಿಡಿ ಟಚ್ ಸ್ಕ್ರೀನ್, ಫುಲ್ ರೇಂಜ್ ಸ್ಪೀಕರ್, ಬ್ಲೂ ಟೂತ್ 5.0 ಸಪೋರ್ಟ್ ಮಾಡುತ್ತದೆ. ಈ ನೆಸ್ಟ್ ಹಬ್ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ತಿಳಿಸಲು ಇಲ್ಲಿ ವಿಡಿಯೋ ನೀಡಲಾಗಿದೆ.