Connect with us

ಜಸ್ಟ್ 2 ಸಾವಿರ ರೂ.ಗೆ ಗೂಗಲ್ ಒರಿಯೋ ಫೋನ್: ಏನಿದರ ವಿಶೇಷತೆ? ಕಡಿಮೆ ಬೆಲೆಗೆ ಈ ಫೋನ್ ಹೇಗೆ ಸಿಗುತ್ತೆ?

ಜಸ್ಟ್ 2 ಸಾವಿರ ರೂ.ಗೆ ಗೂಗಲ್ ಒರಿಯೋ ಫೋನ್: ಏನಿದರ ವಿಶೇಷತೆ? ಕಡಿಮೆ ಬೆಲೆಗೆ ಈ ಫೋನ್ ಹೇಗೆ ಸಿಗುತ್ತೆ?

ಬೆಂಗಳೂರು: ಗೂಗಲ್ ಸಹಭಾಗಿತ್ವದಲ್ಲಿ ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಅತಿ ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಸ್ಮಾರ್ಟ್ ಫೋನ್ ತಯಾರಿಸಿದ್ದು ಜನವರಿ 26 ರಂದು ಈ ಫೋನ್ ಬಿಡುಗಡೆಯಾಗುವ ಸಾಧ್ಯತೆ ಇದೆ.

ಆಂಡ್ರಾಯ್ಡ್ ಓಒರಿಯೋ ಗೊ ಆಪರೇಟಿಂಗ್ ಸಿಸ್ಟಂ ಮೂಲಕ ಕಾರ್ಯನಿರ್ವಹಿಸುವ ವಿಶ್ವದ ಮೊದಲ ಫೋನ್ ಇದಾಗಿದ್ದು, ಈ ಸ್ಮಾರ್ಟ್‍ಫೋನ್ ಬೆಲೆ ಕೇವಲ 2 ಸಾವಿರ ರೂ. ಇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಫೋನ್ ವೋಲ್ಟ್ ಮತ್ತು 4ಜಿ ಟೆಕ್ನಾಲಜಿಗೆ ಸಪೋರ್ಟ್ ಮಾಡುತ್ತದೆ.

ಗೂಗಲ್ ಮೈಕ್ರೋಮ್ಯಾಕ್ಸ್ ಅಲ್ಲದೇ ಲಾವಾ, ಕಾರ್ಬನ್, ಇಂಟೆಕ್ಸ್ ಜೊತೆಗೂಡಿ ಒರಿಯೋ ಗೋ ಫೋನ್ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ.

ಒರಿಯೋ ಗೋ ಫೋನ್ ವಿಶೇಷತೆ ಏನು?
ಆಪರೇಟಿಂಗ್ ಸಿಸ್ಟಂ ರನ್ ಆಗಲು ಫೋನ್ ಗಳಲ್ಲಿ ಇಂತಿಷ್ಟೆ ಪ್ರಮಾಣದ ರ‍್ಯಾಮ್, ಪ್ರೊಸೆಸರ್, ಆಂತರಿಕ ಮೆಮೊರಿ ಇರಬೇಕು ಎನ್ನುವ ನಿಯಮವಿದೆ. ಆದರೆ ಒರಿಯೋ ಗೋ ಫೋನ್ ಗಳಲ್ಲಿ ಕಡಿಮೆ ಮೆಮೊರಿ ಇದ್ದರೂ ಅಪ್ಲಿಕೇಶನ್ ಗಳು ರನ್ ಆಗುತ್ತದೆ. 512 ಎಂಬಿ ಆಂತರಿಕ ಮೆಮೊರಿ, 1ಜಿಬಿ ರಾಮ್ ಇದ್ದರೆ ಸಾಕಾಗುತ್ತದೆ. ಈ ಕಾರಣಕ್ಕಾಗಿ ಈ ಫೋನ್ ಗಳ ಬೆಲೆ ಮಾರುಕಟ್ಟೆಯಲ್ಲಿರುವ ಫೋನ್ ಗಳಿಗಿಂತ ಕಡಿಮೆ ಬೆಲೆಯಲ್ಲಿ ನಿಗದಿಯಾಗಿರುತ್ತದೆ. ಅಷ್ಟೇ ಅಲ್ಲದೇ ಗೂಗಲ್ ಆಂಡ್ರಾಯ್ಡ್ ಒನ್ ಮಾನದಂಡದಲ್ಲಿ ಫೋನ್ ಗಳ ಹಾರ್ಡ್‍ವೇರ್ ಇರಲಿದೆ.

ಗೂಗಲ್ ಹೇಳುವಂತೆ ಆಂಡ್ರಾಯ್ಡ್ ಒರಿಯೋ ಗೋ ಆವೃತ್ತಿ ಆಪರೇಟಿಂಗ್ ಸಿಸ್ಟಂ, ಗೂಗಲ್ ಅಪ್ಲಿಕೇಶನ್ ಮತ್ತು ಪ್ಲೇ ಸ್ಟೋರ್ ಎನ್ನುವ ತತ್ವದ ಅಡಿ ಕಾರ್ಯನಿರ್ವಹಿಸುತ್ತದೆ. ಹೊಸ ಸಾಫ್ಟ್ ವೇರ್ ನಲ್ಲಿ ಅಪ್ಲಿಕೇಶನ್ ಒಂದು 15% ವೇಗವಾಗಿ ಕಾರ್ಯನಿರ್ವಹಿಸುತ್ತದೆ.

ಈ ಆವೃತ್ತಿಗಾಗಿಯೇ ಗೂಗಲ್ ವಿಶೇಷ ಅಪ್ಲಿಕೇಶನ್ ರೂಪಿಸಿದೆ. ಗೂಗಲ್ ಗೋ, ಗೂಗಲ್ ಅಸಿಸ್ಟೆಂಟ್ ಗೋ, ಯೂ ಟ್ಯೂಬ್ ಗೋ, ಗೂಗಲ್ ಮ್ಯಾಪ್ಸ್ ಗೋ, ಜಿಮೇಲ್ ಗೋ, ಜಿ ಬೋರ್ಡ್, ಗೂಗಲ್ ಪ್ಲೇ, ಕ್ರೋಮ್, ಮತ್ತು ಫೈಲ್ಸ್ ಗೋ ಅಪ್‍ಗಳ ಗುಚ್ಛಗಳು ಈ ಫೋನಿನಲ್ಲಿ ಪ್ರಿ ಲೋಡೆಡ್ ಆಗಿರಲಿವೆ. ಈ ಎಲ್ಲ ಅಪ್ಲಿಕೇಶನ್ ಗಳು ಕಡಿಮೆ ಮೆಮರಿಯನ್ನು ಹೊಂದಿದ್ದು, ವಿಶೇಷವಾಗಿ ಗೂಗಲ್ ಗೋ 5 ಎಂಬಿಗಿಂತಲೂ ಕಡಿಮೆ ಇರಲಿದೆ.

 

ಏನಿದು ಗೂಗಲ್ ಆಂಡ್ರಾಯ್ಡ್ ಒನ್?
ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು

2017ರಜನವರಿಯಲ್ಲಿ ಗೂಗಲ್ ಸಿಇಒ ಸುಂದರ್ ಪಿಚೈ ಭಾರತಕ್ಕೆ ಬಂದಿದ್ದಾಗ ಕಡಿಮೆ ಬೆಲೆಯಲ್ಲಿ ಆಂಡ್ರಾಯ್ಡ್ ಫೋನ್ ತಯಾರಿಸಲಾಗುವುದು ಎಂದು ತಿಳಿಸಿದ್ದರು. ಭಾರತಕ್ಕೆ 30 ಡಾಲರ್(2 ಸಾವಿರ ರೂ.) ಬೆಲೆಯ ಆಂಡ್ರಾಯ್ಡ್ ಫೋನ್ ಅಗತ್ಯವಿದೆ ಎಂದು ಹೇಳಿದ್ದರು. ಇದಕ್ಕೆ ಪೂರಕ ಎಂಬಂತೆ ಈಗ ಮೈಕ್ರೋಮ್ಯಾಕ್ಸ್ ಜೊತೆಗೂಡಿ ಗೂಗಲ್ ಈ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

 

Advertisement
Advertisement