ಭೋಪಾಲ್: ಯುವತಿಯೊಬ್ಬಳ ಸ್ನೇಹ ಬೆಳೆಸಿ ಬೆಂಗಳೂರಿನಲ್ಲಿ ಗೂಗಲ್ ಮ್ಯಾನೇಜರ್ (Google Manager) ಆಗಿ ಕೆಲಸ ಮಾಡುತ್ತಿದ್ದ ಟೆಕ್ಕಿಯೊಬ್ಬರು ಫಜೀತಿಗೆ ಸಿಲುಕಿದ ವಿಲಕ್ಷಣ ಘಟನೆಯೊಂದು ಮಧ್ಯಪ್ರದೇಶ (Madhya Pradesh) ದ ಭೋಪಾಲ್ ನಲ್ಲಿ ನಡೆದಿದೆ.
ಮಧ್ಯಪ್ರದೇಶದ ಭೋಪಾಲ್ ಮೂಲದ ಗಣೇಶ್ ಶಂಕರ್ ಅವರು ಗೂಗಲ್ ಇಂಡಿಯಾದ ಮ್ಯಾನೇಜರ್ ಆಗಿ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶಿಲ್ಲಾಂಗ್‍ನ ಐಐಎಂನಲ್ಲಿ ಎಂಬಿಎ (MBA) ಓದುವಾಗ ಇವರಿಗೆ ಭೋಪಾಲ್‍ನ ಸುಜತಾ ಎಂಬ ಯುವತಿ ಜೊತೆ ಸ್ನೇಹ ಹುಟ್ಟಿಕೊಂಡಿದೆ. ಕ್ರಮೇಣ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ 5 ವರ್ಷ ಪರಸ್ಪರ ಪ್ರೀತಿಸುತ್ತಿದ್ದರು.
ಇತ್ತೀಚೆಗೆ ಯುವತಿಯನ್ನು ಭೇಟಿಯಾಗಲೆಂದು ಗಣೇಶ್ ಭೋಪಾಲ್‍ಗೆ ತೆರಳಿದಾಗ ಅವರಿಗೆ ಅಚ್ಚರಿಯೊಂದು ಕಾದಿತ್ತು. ಒಂದೆರಡು ದಿನ ಯುವತಿ ಮನೆಯವರು ಗಣೇಶ್‍ನನ್ನು ಚೆನ್ನಾಗಿಯೇ ನೋಡಿಕೊಂಡರು. ಬಳಿಕ ಅವರಿಗೆ ಮತ್ತು ಬರುವ ಔಷಧಿ ನೀಡಿ ಕತ್ತಲು ಕೋಣೆಯೊಂದರಲ್ಲಿ ಕೂಡಿ ಹಾಕಿದರು. ಅಲ್ಲದೆ ಈ ವೇಳೆ ಬೆದರಿಸಿ ಬಲವಂತವಾಗಿ ಯುವತಿ ಜೊತೆ ಮದುವೆ (Girl Marriage) ಮಾಡಿಸಿ ಫೋಟೋ (Photo) ಕೂಡ ತೆಗೆದಿದ್ದಾರೆ. ಇದನ್ನೂ ಓದಿ: ಒಂದೇ ಜಡೆ ಹಾಕಿದ್ದಕ್ಕೆ ವಿದ್ಯಾರ್ಥಿನಿಯನ್ನು ಕ್ಲಾಸ್‍ನಲ್ಲಿ ಕೂಡಿ ಹಾಕಿ ಕೂದಲು ಕತ್ತರಿಸಿದ್ರು!
ಯುವತಿ ಮನೆಯವರ ಉಪಟಳ ಇಷ್ಟಕ್ಕೆ ನಿಲ್ಲಲಿಲ್ಲ. ಮುಂದುವರಿದು, ನೀನು 40 ಲಕ್ಷ ಕೊಟ್ಟರೆ ಸರಿ. ಇಲ್ಲದಿದ್ದರೆ ನಿನ್ನ ವಿರುದ್ಧ ದೂರು ದಾಖಲಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಮತ್ತೆ ಬೆದರಿಕೆ ಹಾಕಿದ್ದಾರೆ. ಇದರಿಂದ ಬೇಸತ್ತ ಗಣೇಶ್, ನೇರವಾಗಿ ಭೋಪಾಲ್‍ನ ಕಮಲಾ ನಗರ ಪೊಲಿಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಅಂತೆಯೇ ದೂರು ಸ್ವೀಕರಿಸಿದ ಪೊಲಿಸರು ಯುವತಿ ಹಾಗೂ ಆಕೆಯ ಮನೆಯವರ ವಿರುದ್ಧ ಎಫ್‍ಐಆರ್ (FIR) ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಕಮಲಾ ನಗರ ಪೊಲೀಸ್ ಠಾಣೆ (Kamala Nagar Police Station) ಅಧಿಕಾರಿ ಅನಿಲ್ ಕುಮಾರ್ ವಾಜಪೇಯಿ ಮಾತನಾಡಿ, ಗೂಗಲ್ ಟೆಕ್ಕಿ (Google Techie) ನೀಡಿರುವ ದೂರಿನ ಸಂಬಂಧ ತನಿಖೆ ನಡೆಯುತ್ತಿದೆ. ಗಣೇಶ್ ಕೂಡ ಬೇರೆ ಯುವತಿಯನ್ನು ಮದುವೆಯಾಗಿರುವುದಾಗಿ ಯುವತಿ ಮನೆಯವರು ದೂರಿದ್ದಾರೆ. ಅಲ್ಲದೆ ಗಣೇಶ್‍ನಿಂದ ಮೋಸ ಹೋಗಿರುವುದಾಗಿ ಯುವತಿ ಸುಜಾತಾ ಮನೆಯವರು ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ರಾಹುಲ್ ಗಾಂಧಿ ಅವರಮ್ಮ ಮದುವೆಯಲ್ಲೂ ಕುಂಕುಮ ಇಟ್ಟಿದ್ರೋ ಇಲ್ವೋ ಗೊತ್ತಿಲ್ಲ- ಸಿ.ಟಿ ರವಿ