ಗೂಗಲ್‍ನಲ್ಲಿ ‘ಈಡಿಯಟ್’ ಎಂದು ಟೈಪ್ ಮಾಡಿದ್ರೆ ಟ್ರಂಪ್ ಫೋಟೋ ಯಾಕೆ ಬರುತ್ತೆ- ಸುಂದರ್ ಪಿಚೈಗೆ ಗೂಗ್ಲಿ ಪ್ರಶ್ನೆ

Public TV
1 Min Read
GOOGLE TRUMP PICHAI

ವಾಷಿಂಗ್ಟನ್: “ಗೂಗಲ್ ಸರ್ಚ್ ನಲ್ಲಿ ‘ಈಡಿಯಟ್’ ಎಂದು ಟೈಪ್ ಮಾಡಿದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೋಟೋ ಬರುತ್ತದೆ ಯಾಕೆ?” _ ಈ ರೀತಿಯ ಗೂಗ್ಲಿ ಪ್ರಶ್ನೆ ಅಮೆರಿಕದ ಸೆನೆಟರ್ ಒಬ್ಬರು ಗೂಗಲ್ ಸಿಇಒ ಆಗಿರುವ ಭಾರತೀಯ ಮೂಲದ ಸುಂರ್ ಪಿಚೈಗೆ ಕೇಳಿದ್ದಾರೆ.

ಮಂಗಳವಾರ ಅಮೆರಿಕದ ಸೆನೆಟ್‍ನಲ್ಲಿ ಗೂಗಲ್ ಡೇಟಾ ಸಂಗ್ರಹದ ಪಾರದರ್ಶಕತೆ, ಉತ್ತಾರದಾಯಿತ್ವ ವಿಚಾರದ ಬಗ್ಗೆ ಎದಿದ್ದ ಸಂದೇಹಗಳಿಗೆ ಉತ್ತರ ನೀಡಲು ಸುಂದರ್ ಪಿಚೈ ಆಗಮಿಸಿದ್ದರು. ಸುಮಾರು ಮೂರುವರೆ ಗಂಟೆಗಳ ಕಾಲ ಪ್ರಶ್ನೋತ್ತರ ವಿಚಾರಣೆ ನಡೆಯಿತು.

ಈ ಸಮಯದಲ್ಲಿ ಸೆನೆಟರ್ ಜೂಹಿ ಲೊಫ್ಗ್ರೆನ್ ಅವರು, ಗೂಗಲ್‍ನಲ್ಲಿ ಈಡಿಯೆಟ್ ಎಂದು ಸರ್ಚ್ ಮಾಡಿದರೆ, ಟ್ರಂಪ್ ಅವರ ಫೋಟೋ ಹಾಗೂ ಅವರಿಗೆ ಸಂಬಂಧಿಸಿದ ಸುದ್ದಿಗಳು ಬರುತ್ತವೆ. ಈ ಪದವನ್ನು ಟೈಪ್ ಮಾಡಿದ ಕೂಡಲೇ ಟ್ರಂಪ್ ಫೋಟೋ ಬರಲು ಹೇಗೆ ಸಾಧ್ಯ? ಇದರಲ್ಲಿ ವ್ಯಕ್ತಿಗಳ ಕೈವಾಡವಿದೆಯೇ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ಸುಂದರ್ ಪಿಚೈ, ಈ ರೀತಿಯ ಫಲಿತಾಂಶ ಬರಲು ಯಾವುದೇ ವ್ಯಕ್ತಿಗಳ ಕೈವಾಡವಿಲ್ಲ. ಗೂಗಲ್ ಕೀವರ್ಡ್ ಗಳನ್ನು ಬಳಸಿಕೊಂಡು ನಿಖರ ಸರ್ಚ್ ರಿಸಲ್ಟ್ ಗಳನ್ನು ನೀಡುತ್ತದೆ. ಕೀವರ್ಡ್ ಗಳನ್ನು ಪಡೆದು ನಂತರ 200 ಸಿಗ್ನಲ್‍ಗಳ ಮೂಲಕ ಮ್ಯಾಚ್ ಮಾಡಲಾಗುತ್ತದೆ. ಅತಿ ಹೆಚ್ಚು ಸರ್ಚ್, ಪ್ರಸ್ತುತ ಅದರ ಅಗತ್ಯತೆ ಈ ಎಲ್ಲ ವಿಚಾರಗಳನ್ನು ನೋಡಿಕೊಂಡು ಫಲಿತಾಂಶ ಬರುವಂತೆ ಸಿದ್ಧಪಡಿಸಲಾಗಿದೆ. ಎಲ್ಲ ಸರ್ಚ್‍ಗಳನ್ನು ನಾವು ಪರಿಶೀಲಿಸುವುದಿಲ್ಲ ಎಂದು ತಿಳಿಸಿದರು.

DONALD TRUMP

ಗೂಗಲ್‍ನಲ್ಲಿ ಈ ರೀತಿಯ ಫಲಿತಾಂಶ ಬರುತ್ತಿರುವುದು ಇದೇ ಮೊದಲೇನಲ್ಲ. ಕೆಲ ದಿನಗಳ ಹಿಂದೆ ಫೇಕ್ ಎನ್ನುವ ಪದವನ್ನು ಗೂಗಲ್ ನಲ್ಲಿ ಟೈಪ್ ಮಾಡಿದ್ದಾಗ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವನ್ನು ತೋರಿಸುತ್ತಿತ್ತು. ಅಲ್ಲದೇ ಪಪ್ಪು ಎಂದು ಟೈಪ್ ಮಾಡಿದಾಗ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಫೋಟೋ ಕೂಡ ಬಂದಿತ್ತು.

ny 1544665214 io7fpuknwb snap image

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *