ನವದೆಹಲಿ: ಮುಸ್ಲಿಂ ಸಮುದಾಯದ ಭಾರತದ ಮೊದಲ ಶಿಕ್ಷಕಿ ಎಂದು ಗುರುತಿಸಲ್ಪಟ್ಟಿರುವ ಫಾತಿಮಾ ಶೇಖ್‍ಗೆ ಗೂಗಲ್ ಡೂಡಲ್ ವಿಶೇಷ ಗೌರವ ಸಲ್ಲಿಸಿದೆ.
ಹಿನ್ನೆಲೆ: ಫಾತಿಮಾ ಶೇಖ್ ಅವರು 1831 ಜನವರಿ 9ರಂದು ಪುಣೆಯಲ್ಲಿ ಜನಿಸಿದರು. ಫಾತಿಮಾ ತನ್ನ ಸಹೋದರ ಉಸ್ಮಾನ್‍ನೊಂದಿಗೆ ವಾಸಿಸುತ್ತಿದ್ದರು. ಕೆಳಜಾತಿಗಳ ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸಿದ್ದಕ್ಕಾಗಿ ಫುಲೆ ದಂಪತಿಗಳನ್ನು ಮನೆಯಿಂದ ಹೊರಹಾಕಿದ್ದಾಗ ಫಾತಿಮಾ ಕುಟುಂಬ ಫುಲೆ ದಂಪತಿಗೆ ಆಶ್ರಯ ನೀಡಿತ್ತು. ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ಅವರ ಸಹ ಪ್ರವರ್ತಕರಾದ ಫಾತಿಮಾ ಶೇಖ್ ಸಮಾಜಿಕ ಸೇವೆಯಲ್ಲಿ ಭಾಗಿಯಾಗಿದ್ದರು.
Advertisement
Advertisement
1848ರಲ್ಲಿ ಫಾತಿಮಾ ಶೇಖ್ ಶಾಲೆಯೊಂದನ್ನು ಸ್ಥಾಪಿಸಿದ್ದು, ಇದು ಭಾರತದಲ್ಲಿ ಬಾಲಕಿಯರಿಗಾಗಿ ಆರಂಭಿಸಿದ ಮೊದಲ ಶಾಲೆಯಾಗಿದೆ. ಶೇಖ್‍ಗಳ ಮನೆಯ ಛಾವಣಿಯ ಅಡಿಯಲ್ಲಿಯೇ ಫುಲೆ ದಂಪತಿ ಶಾಲೆ ಆರಂಭಿಸಿದ್ದರು. ಸಾವಿತ್ರಿಬಾಯಿ ಫುಲೆ ಮತ್ತು ಫಾತಿಮಾ ಶೇಖ್ ಅವರು ವರ್ಗ, ಧರ್ಮ ಅಥವಾ ಲಿಂಗದ ಆಧಾರದ ಮೇಲೆ ಶಿಕ್ಷಣದಿಂದ ವಂಚಿತರಾದ ದಲಿತ, ಮುಸ್ಲಿಂ ಮಹಿಳೆಯರು ಮತ್ತು ಮಕ್ಕಳಿಗೆ ಶಿಕ್ಷಣ ಕಲಿಸಿಸುತ್ತಿದ್ದರು. ಇದನ್ನೂ ಓದಿ: ಅಂಡರ್‌ಗ್ರೌಂಡ್‌ನಲ್ಲಿ ಕಂತೆ ಕಂತೆ ನೋಟು ಬಚ್ಚಿಟ್ಟಿದ್ದ ಉದ್ಯಮಿ – ಇವನ ಆಸ್ತಿ ಬಗ್ಗೆ ಮಾಹಿತಿ ನೀಡಿದ್ರೆ 10,000 ಬಹುಮಾನ
Advertisement
Advertisement
ಭಾರತ ಸರ್ಕಾರವು 2014ರಲ್ಲಿ ಉರ್ದು ಪಠ್ಯಪುಸ್ತಕಗಳಲ್ಲಿ ಇತರ ಶಿಕ್ಷಣ ತಜ್ಞರೊಂದಿಗೆ ಫಾತಿಮಾ ಶೇಖ್ ಅವರ ಸಾಧನೆಗಳನ್ನು ಸೇರಿಸುವ ಮೂಲಕ ಫಾತಿಮಾ ಅವರ ಕಾರ್ಯಗಳನ್ನು ಮತ್ತಷ್ಟು ಪರಿಚಯಿಸಿತು. ಇದನ್ನೂ ಓದಿ: ಪಾಠ ಮಾಡುವ ಗುರುಗಳಿಗೆ ಇನ್ಮುಂದೆ ಸರ್, ಮೇಡಂ ಎನ್ನುವಂತಿಲ್ಲ!