ನವದೆಹಲಿ: ಎಂಜಿನಿಯರಿಂಗ್ ಪದವಿ ಓದಿರುವ ವಿದ್ಯಾರ್ಥಿಗಳು ಕೇವಲ ಪಠ್ಯದಲ್ಲಿ ಮಾತ್ರ ಪರಿಣಿತರಾಗಿದ್ದು ಉದ್ಯೋಗಕ್ಕೆ ಬೇಕಾದ ಕೌಶಲ್ಯಗಳು ಅವರಲ್ಲಿ ಇಲ್ಲ ಎನ್ನುವ ಆರೋಪಗಳನ್ನು ಐಟಿ ಕಂಪೆನಿಗಳು ಮಾಡುವುದು ನಿಮಗೆ ಗೊತ್ತೆ ಇದೆ. ಈ ಆರೋಪದಿಂದ ಮುಕ್ತರನ್ನಾಗಿಸಲು ಗೂಗಲ್ ಮುಂದಾಗಿದ್ದು ಆನ್ ಲೈನ್ ಕೋರ್ಸ್ ಆರಂಭಿಸಿದೆ.
ಸಂಪೂರ್ಣವಾಗಿ ಆನ್‍ಲೈನ್ ಮೂಲಕವೇ ನಡೆಯುವ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಲಭ್ಯವಾಗಲಿದೆ. ಈ ಮೂಲಕ ಪ್ರಸಿದ್ಧ ಐಟಿ ಕಂಪನಿಗಳಲ್ಲಿ ಉದ್ಯೋಗ ಪಡೆಯುವ ಅವಕಾಶ ಸಿಗಲಿದೆ.
Advertisement
ಗೂಗಲ್ ಅನುಭವಿ ತಜ್ಞರು ಕೋರ್ಸ್ ಪಠ್ಯವನ್ನು ಸಿದ್ಧಪಡಿಸಿದ್ದು, ಈ ಕೋರ್ಸ್‍ನಲ್ಲಿ 6 ವಿಷಯಗಳು ಲಭ್ಯವಿದೆ. ಅಭ್ಯರ್ಥಿಗಳು ತಮಗೇ ಇಷ್ಟವಾದ ವಿಷಯವನ್ನು ಆಯ್ಕೆ ಮಾಡವಬಹುದಾಗಿದೆ. ಅಲ್ಲದೇ 6 ವಿಷಯಗಳನ್ನು ಏಕಕಾಲದಲ್ಲಿ ಆಯ್ಕೆ ಮಾಡುವ ವಿಶೇಷ ಅವಕಾಶವನ್ನು ನೀಡಲಾಗಿದೆ.
Advertisement
ಈ ತರಬೇತಿಯಲ್ಲಿ ಮೂಲಭೂತ ಕಂಪ್ಯೂಟರ್ ತಾಂತ್ರಿಕ ಅಂಶಗಳಾದ ಬೇಸಿಕ್ ಕಂಪ್ಯೂಟರ್ ಹಾರ್ಡ್‍ವೇರ್, ಕಂಪ್ಯೂಟರ್ ಅಪರೇಟಿಂಗ್ ಸಿಸ್ಟಮ್ಸ್, ಸಿಸ್ಟಮ್ ಅಡ್ಮಿನಿಸ್ಟ್ರೇಷನ್, ಐಟಿ ಅಟೊಮೇಷನ್ ಮತ್ತು ಸೆಕ್ಯೂರಿಟಿ ಅಂಶಗಳ ತರಬೇತಿ ನೀಡಲಾಗುತ್ತದೆ.
Advertisement
ಪ್ರತಿ ವಿದ್ಯಾರ್ಥಿಗೆ ಉತ್ತಮ ತರಬೇತಿ ನೀಡುವ ಮೂಲಕ ಐಟಿ ಕಂಪೆನಿಗಳಲ್ಲಿ ಕಾರ್ಯನಿರ್ವಹಿಸಲು ಬೇಕಾದ ಕೌಶಲ್ಯಗಳನ್ನು ಬೆಳೆಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಆನ್ ಲೈನ್ ಕೋರ್ಸ್ ಮುಕ್ತಾಯವಾದ ಬಳಿಕ ಉದ್ಯೋಗಕ್ಕೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದೈತ್ಯ ಕಂಪನಿಗಳಾಗಿರುವ ಬ್ಯಾಂಕ್ ಆಫ್ ಆಮೆರಿಕ, ವಾಲ್‍ಮಾರ್ಟ್, ಸ್ಪ್ರಿಂಟ್, ಜಿಇ ಡಿಜಿಟಲ್, ಪಿಎನ್‍ಸಿ ಬ್ಯಾಂಕ್, ಇನ್ಫೋಸಿಸ್, ಟಿಇಕೆ ಸಿಸ್ಟಮ್ಸ್, ಯುಪಿಸಿ ಸೇರಿದಂತೆ ವಿವಿಧ ಐಟಿ ಕಂಪೆನಿ ಹಾಗೂ ಗೂಗಲ್ ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ.
Advertisement
ಕೋರ್ಸ್ ಅವಧಿ: ಈ ತರಬೇತಿ ಕಾರ್ಯಕ್ರಮದಲ್ಲಿ 6 ವಿಷಯಗಳಿಗೂ ಸೇರಿ 64 ತರಗತಿಗಳು, ಪ್ರಾಜೆಕ್ಟ್ ಗಳನ್ನು ಹೊಂದಿದೆ. ಪ್ರತಿ ಅಭ್ಯರ್ಥಿಯು ವಾರದಲ್ಲಿ 8 ರಿಂದ 10 ಗಂಟೆಗಳ ಕಾಲ ಭಾಗವಹಿಸಿದರೆ 8 ರಿಂದ 12 ತಿಂಗಳುಗಳಲ್ಲಿ ತರಬೇತಿಯನ್ನು ಪೂರ್ಣಗೊಳಿಸಬಹುದು. ಅವಶ್ಯಕ ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಕೋರ್ಸ್ ಅವಧಿಯಲ್ಲಿ ನೀಡಲಾಗುವ ವಿಷಯದಲ್ಲಿ ಪ್ರಾವಿಣ್ಯತೆ ಹೊಂದಿದ್ದರೆ ಅಂತಹ ವಿಷಯಗಳನ್ನು ಸ್ಕಿಪ್ ಮಾಡುವ ಅವಕಾಶಗಳನ್ನು ನೀಡಲಾಗಿದೆ.
ಕೋರ್ಸ್ ವೆಚ್ಚ: ಒಂದು ಕೋರ್ಸ್ ಪೂರ್ಣಗೊಳಸಿಲು 49 ಅಮೆರಿಕನ್ ಡಾಲರ್ (ಅಂದಾಜು 3,100 ರೂ.) ವೆಚ್ಚವಾಗುತ್ತದೆ. ಕೋರ್ಸ್‍ನಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಯಾವುದೇ ಆರ್ಥಿಕ ಸಹಾಯವನ್ನು ಸಂಸ್ಥೆ ನೀಡುವುದಿಲ್ಲ. ಅಲ್ಲದೇ ಕೋರ್ಸ್ ಕುರಿತ ತೆರಿಗೆ, ಸೇವಾ ಶುಲ್ಕಗಳು ಅನ್ವಯವಾಗುತ್ತದೆ. ಮೊದಲಿಗೆ ಒಂದು ಕೋರ್ಸ್ ಆಯ್ಕೆ ಮಾಡಿಕೊಂಡು ನಂತರ ಬೇರೆ ವಿಷಯಗಳ ಆಯ್ಕೆಗೆ ಅವಕಾಶ ನೀಡಲಾಗಿದೆ.
ಶುಲ್ಕ ಪಾವತಿ ಹೇಗೆ? ಕೋರ್ಸ್ ಬಗ್ಗೆ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಸಂಸ್ಥೆಯ coursera.org ವೆಬ್‍ಸೈಟ್ ಗೆ ಭೇಟಿ ತಮ್ಮ ಗೂಗಲ್ ಅಕೌಂಟ್‍ಗಳ ಮೂಲಕ ಲಾಗಿನ್ ಮಾಡಬಹುದಾಗಿದೆ. ಅಲ್ಲದೇ ಅಭ್ಯರ್ಥಿಗಳು ತಮ್ಮ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಶುಲ್ಕ ಪಾವತಿ ಮಾಡಬಹುದು. ಜನವರಿ 24 ರಿಂದ ಈ ಕೋರ್ಸ್‍ಗಳು ಆರಂಭವಾಗಿದೆ.
ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಕ್ಲಿಕ್ ಮಾಡಿ: www.coursera.org