ವಾಷಿಂಗ್ಟನ್: ಜಾಗತಿಕವಾಗಿ ಇಂಟರ್ನೆಟ್ ಅಲ್ಲಿ ಅತಿ ಹೆಚ್ಚು ಬಳಕೆಯಲ್ಲಿರುವ ಸರ್ಚ್ ಎಂಜಿನ್ ಗೂಗಲ್ (Google) ಇಂದು 25 ವರ್ಷವನ್ನು ಪೂರೈಸಿದೆ. ಬುಧವಾರ ವಿಭಿನ್ನವಾದ ಡೂಡಲ್‌ನೊಂದಿಗೆ ಗೂಗಲ್ ತನ್ನ 25ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದೆ.
ಗೂಗಲ್ ಈ ಬಗ್ಗೆ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ. ಕಳೆದ 25 ವರ್ಷಗಳಲ್ಲಿ ಕಂಪನಿ ಬೆಳೆದು ಬಂದ ಹಾದಿ, 1998ರಿಂದ 2023ರ ವರೆಗೆ ತನ್ನ ಬದಲಾದ ಲೋಗೋಗಳನ್ನು ತೋರಿಸುವ ಡೂಡಲ್ ಅನ್ನು ತನ್ನ ಬ್ಲಾಗ್‌ನಲ್ಲಿ ಹಂಚಿಕೊಂಡಿದೆ.
Advertisement
25 years ago, Google Search launched from a garage in a California suburb. Today, we have offices and data centers on six continents, in over 200 cities. In honor of our 25th birthday tomorrow, take a world tour with us #Google25 ↓ https://t.co/lRCaDCJvg0
— Google (@Google) September 26, 2023
Advertisement
90ರ ದಶಕದ ಉತ್ತರಾರ್ಧದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಕಾರ್ಯಕ್ರಮದಲ್ಲಿ ಭೇಟಿಯಾದ ಡಾಕ್ಟರೇಟ್ ವಿದ್ಯಾರ್ಥಿಗಳಾದ ಸೆರ್ಗೆ ಬ್ರಿನ್ ಮತ್ತು ಲ್ಯಾರಿ ಪೇಜ್ ಅವರು ಗೂಗಲ್ ಅನ್ನು ಅಭಿವೃದ್ಧಿಪಡಿಸಿದರು. ಇದನ್ನು ಜಾಗತಿಕ ವಿಸ್ತರಿಸಲು ಅವರು ಸಿಲಿಕಾನ್ ವ್ಯಾಲಿಯಲ್ಲಿ ಹೂಡಿಕೆದಾರರನ್ನು ಹುಡುಕಿದರು. ಇದಕ್ಕೆ ಸನ್ ಮೈಕ್ರೊಸಿಸ್ಟಮ್ಸ್ 1 ಲಕ್ಷ ಅಮೆರಿಕನ್ ಡಾಲರ್ ಅನ್ನು ಗೂಗಲ್‌ನಲ್ಲಿ ಹೂಡಿತು. ಬಳಿಕ ಗೂಗಲ್ 1998ರ ಸೆಪ್ಟೆಂಬರ್ 27ರಂದು ಕ್ಯಾಲಿಫೋರ್ನಿಯಾದಲ್ಲಿ ಅಧಿಕೃತವಾಗಿ ಆರಂಭವಾಯಿತು. ಇದನ್ನೂ ಓದಿ: ರಿಲಯನ್ಸ್ ಜಿಯೋ: ಐಫೋನ್ 15 ಖರೀದಿಸಿದರೆ 6 ತಿಂಗಳು ಫ್ರೀ ಪ್ಲಾನ್
Advertisement
ಗೂಗಲ್‌ನ ಪ್ರಸ್ತುತ ಸಿಇಒ ಸುಂದರ್ ಪಿಚೈ ಅವರು ಕಳೆದ ತಿಂಗಳು ಕಂಪನಿಯ ಹುಟ್ಟುಹಬ್ಬವನ್ನು ಗುರುತಿಸಲು ಟಿಪ್ಪಣಿಯನ್ನು ಬರೆದಿದ್ದರು. ಅವರು ಕಂಪನಿಯ ಪ್ರಯಾಣ, ತಂತ್ರಜ್ಞಾನವನ್ನು ಪರಿವರ್ತಿಸುವಲ್ಲಿ ಅದರ ಪಾತ್ರ ಮತ್ತು ಭವಿಷ್ಯದ ಹಾದಿಯನ್ನು ರೂಪಿಸಿದ ಬಗ್ಗೆ ಮೆಲುಕು ಹಾಕಿದರು. ಗೂಗಲ್‌ನ ಯಶಸ್ಸಿನ ಭಾಗವಾಗಿರುವ ಬಳಕೆದಾರರು, ಉದ್ಯೋಗಿಗಳು ಮತ್ತು ಪಾಲುದಾರರಿಗೆ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಹೊಸತನದ ನಿರಂತರ ಸವಾಲು ಮತ್ತು ಹಿಂದಿನ ಮತ್ತು ಪ್ರಸ್ತುತ ಗೂಗ್ಲರ್‌ಗಳ ಸಮರ್ಪಣೆಗಾಗಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
ಕಳೆದ 25 ವರ್ಷಗಳಲ್ಲಿ ಗೂಗಲ್ ಕೇವಲ ಸರ್ಚ್ ಎಂಜಿನ್ ಆಗಿ ಉಳಿದಿರದೇ ಇಮೇಲ್, ಯೂಟ್ಯೂಬ್‌ನಿಂದ ಹಿಡಿದು ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್‌ವರೆಗೂ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಬೆಳೆದು ನಿಂತಿದೆ. ಇದನ್ನೂ ಓದಿ: ಆರು ವರ್ಷದ ನಂತರ ಕಾರವಾರಕ್ಕೆ ಬಂದಿಳಿದ ಟುಪೋಲೆವ್ ಯುದ್ಧ ವಿಮಾನ
Web Stories