ನವದೆಹಲಿ: ಭಾರತೀಯ ಸ್ಪರ್ಧಾತ್ಮಕ ಆಯೋಗ (CCI) ವಿಧಿಸಿದ 1,337 ಕೋಟಿ ರೂ. ದಂಡದ ಪೈಕಿ ಶೇ.10 ರಷ್ಟು ಮೊತ್ತವನ್ನು ಠೇವಣಿ ಇಡುವಂತೆ ರಾಷ್ಟ್ರೀಯ ಕಂಪನಿ ಕಾಯ್ದೆ ನ್ಯಾಯಮಂಡಳಿ (NCALT) ಗೂಗಲ್‌ಗೆ ನಿರ್ದೇಶಿಸಿದೆ.
ಸಿಸಿಐ ಆದೇಶವನ್ನು ಪ್ರಶ್ನಿಸಿ ಗೂಗಲ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ಎನ್‌ಸಿಎಲ್‌ಟಿ, 2022ರ ಅಕ್ಟೋಬರ್‌ನಲ್ಲಿ ಸಿಸಿಐ ನೀಡಿದ ಆದೇಶಕ್ಕೆ ಯಾವುದೇ ತಡೆ ನೀಡುವುದಿಲ್ಲ. ಗೂಗಲ್(Google) ಶೇ.10 ರಷ್ಟು ದಂಡವನ್ನು ಪಾವತಿಸಬೇಕು ಎಂದು ಸೂಚಿಸಿ ಮುಂದಿನ ವಿಚಾರಣೆಯನ್ನು ಫೆ.13 ರಂದು ನಡೆಸುವುದಾಗಿ ತಿಳಿಸಿದೆ.
Advertisement
Advertisement
ಗೂಗಲ್ ಕಂಪನಿಯ ಪರವಾಗಿ ಹಿರಿಯ ವಕೀಲ ಅಭಿಷೇಕ್ ಸಿಂಗ್ವಿ, ಯುರೋಪಿಯನ್ ಆಯೋಗ ನೀಡಿದ ಆದೇಶವನ್ನು ಕಾಪಿ ಪೇಸ್ಟ್ ಮಾಡಿ ಸಿಸಿಐ ಆದೇಶ ಪ್ರಕಟಿಸಿದೆ ಎಂದು ವಾದಿಸಿದರು. ಆಂಡ್ರಾಯ್ಡ್ ಮೊಬೈಲ್ ಸಾಧನ ತಯಾರಕರ ಮೇಲೆ ಕಾನೂನುಬಾಹಿರ ನಿರ್ಬಂಧಗಳನ್ನು ವಿಧಿಸಿದ ಆರೋಪಕ್ಕಾಗಿ ಯುರೋಪಿಯನ್ ಆಯೋಗ ಗೂಗಲ್ ಮೇಲೇ 4.1 ಶತಕೋಟಿ ಯುರೋಗಳಷ್ಟು ದಂಡ ವಿಧಿಸಿತ್ತು. ಇದನ್ನೂ ಓದಿ: ವಿದೇಶಕ್ಕೆ Made In India ಪೋನ್- 110 ಪಟ್ಟು ಹೆಚ್ಚಳ, ಶೇ.40 ಐಫೋನ್ ರಫ್ತು
Advertisement
ಸಿಸಿಐ ದಂಡ ಹಾಕಿದ್ದು ಯಾಕೆ?
ಆಂಡ್ರಾಯ್ಡ್ ಪ್ಲೇಸ್ಟೋರ್‌ಗೆ(Android Play Store) ಸಂಬಂಧಿಸಿದ ನೀತಿಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಕ್ಕೆ ಸಿಸಿಐ ಗೂಗಲ್ ದಂಡ ವಿಧಿಸಿತ್ತು.
Advertisement
ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಆ್ಯಪ್ ಸಿಗಬೇಕಾದರೆ ಅದು ‘ಪ್ಲೇ ಸ್ಟೋರ್’ನಲ್ಲಿ ಇರಬೇಕಾಗುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಕೆಲವು ಉಚಿತವಾಗಿ ಲಭ್ಯವಾದರೆ ಇನ್ನು ಕೆಲವು ಹಣ ಕೊಟ್ಟು ಖರೀದಿಸಬೇಕಾಗುತ್ತದೆ.
ಪ್ಲೇಸ್ಟೋರ್‌ನಲ್ಲಿ ಪಾವತಿ ಮಾಡಿದ ಆಪ್‌ಗಳಿಗಾಗಿ ಗೂಗಲ್ ತನ್ನದೇ ಆದ ಬಿಲ್ಲಿಂಗ್ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಆದರೆ ಇದು ಕಾನೂನು ಸಮ್ಮತವಲ್ಲದ ನಡವಳಿಕೆ ಎಂದು ಸಿಸಿಐಯಲ್ಲಿ ಹಲವು ದೂರು ದಾಖಲಾಗಿತ್ತು
ಹಣ ನೀಡಿ ಖರೀದಿಸಬೇಕಿರುವ ಆ್ಯಪ್‌ಗಳು ಆ್ಯಪ್ ಸ್ಟೋರ್‌ನಲ್ಲಿ ಇರಬೇಕಾದರೆ ಆ್ಯಪ್ ಡೆವಲರ್‌ಗಳು ಗೂಗಲ್ ಪ್ಲೇ ಬಿಲ್ಲಿಂಗ್ ವ್ಯವಸ್ಥೆಯ ಭಾಗವಾಗಿರಲೇಬೇಕು ಎಂಬ ನಿಯಮ ನ್ಯಾಯಯುತವಲ್ಲ. ಈ ಎಲ್ಲಾ ಅನ್ಯಾಯದ ವ್ಯಾಪಾರದ ಅಭ್ಯಾಸಗಳನ್ನು ನಿಲ್ಲಿಸಬೇಕು. ಆ್ಯಪ್ ಖರೀದಿ ಪ್ರಕ್ರಿಯೆಗೆ ಬೇರೆ ಬಿಲ್ಲಿಂಗ್ ಸೇವೆಗಳನ್ನು ಬಳಸಲು ಆ್ಯಪ್ ಡೆವಲಪರ್‌ಗಳಿಗೆ ಅವಕಾಶ ನೀಡಬೇಕು ಸಿಸಿಐ ಸೂಚಿಸಿತ್ತು.
ಪ್ಲೇ ಸ್ಟೋರ್, ಗೂಗಲ್ ಸರ್ಚ್, ಗೂಗಲ್ ಕ್ರೋಮ್, ಯೂಟ್ಯೂಬ್‌ನಂತಹ ಗೂಗಲ್ ಅಭಿವೃದ್ಧಿ ಪಡಿಸಿದ ವಿವಿಧ ಅಪ್ಲಿಕೇಶನ್‌ಗಳನ್ನು ಸಿಸಿಐ ಪರಿಶೀಲನೆ ನಡೆಸಿತ್ತು. ಪರಿಶೀಲನೆಯ ಮೌಲ್ಯಮಾಪನದ ಆಧಾರದ ಮೇಲೆ ಎಲ್ಲಾ ಸಂಬಂಧಿತ ಮಾರುಕಟ್ಟೆಗಳಲ್ಲಿ ಗೂಗಲ್ ಪ್ರಬಲವಾಗಿದೆ ಎಂದು ಸಿಸಿಐ ಹೇಳಿತ್ತು.
ಈ ಹಿಂದೆ ಆನ್‍ಲೈನ್ ಜಾಹಿರಾತುಗಳ ಪ್ರದರ್ಶನಕ್ಕೆ ತನ್ನ ಮಾರುಕಟ್ಟೆಯನ್ನು ದುರುಪಯೋಗ ಪಡಿಸಿದ್ದಕ್ಕೆ ಗೂಗಲ್ ಕಂಪನಿ ಮೇಲೆ ಫ್ರಾನ್ಸ್ ಸ್ಪರ್ಧಾ ನಿಯಂತ್ರಕವು 220 ದಶಲಕ್ಷ ಯೂರೋ(ಅಂದಾಜು 1948 ಕೋಟಿ ರೂ.) ದಂಡವನ್ನು ವಿಧಿಸಿತ್ತು.