ವಾಷಿಂಗ್ಟನ್: ಬಳಕೆದಾರರ ಫೋನ್ ನಂಬರ್ ಹಾಗೂ ಇತರ ಪ್ರಮುಖ ಡೇಟಾಗಳನ್ನು ರಹಸ್ಯವಾಗಿ ಸಂಗ್ರಹಿಸುತ್ತಿದ್ದ ಹತ್ತಾರು ಅಪ್ಲಿಕೇಶನ್‌ಗಳನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಬ್ಯಾನ್ ಮಾಡಿದೆ.
ಗೂಗಲ್ ನಿಷೇಧಿಸಿರುವ ಆ್ಯಪ್‌ಗಳಲ್ಲಿ ಮುಖ್ಯವಾಗಿ 1 ಕೋಟಿಗೂ ಹೆಚ್ಚು ಬಾರಿ ಡೌನ್‌ಲೋಡ್ ಆಗಿದ್ದ ಮುಸ್ಲಿಂ ಪ್ರಾರ್ಥನೆಯ ಅಪ್ಲಿಕೇಶನ್‌ಗಳು, ಬಾರ್‌ಕೋಡ್ ಸ್ಕ್ಯಾನಿಂಗ್ ಅಪ್ಲಿಕೇಶನ್‌ಗಳು, ಹೈವೇ ಸ್ಪೀಡ್ ಟ್ರ್ಯಾಪ್ ಡಿಟೆಕ್ಷನ್ ಅಪ್ಲಿಕೇಶನ್ ಹಾಗೂ ಇತರ ಹಲವಾರು ಬಳಕೆದಾರರ ಡೇಟಾಗಳನ್ನು ಸಂಗ್ರಹಿಸುತ್ತಿದ್ದ ಅಪ್ಲಿಕೇಶನ್‌ಗಳನ್ನು ಗೂಗಲ್ ಬ್ಯಾನ್ ಮಾಡಿದೆ. ಇದನ್ನೂ ಓದಿ: 48 ಗಂಟೆಗಳಲ್ಲಿ 3ನೇ ಸರ್ಕಾರಿ ಟ್ವಿಟ್ಟರ್ ಖಾತೆ ಹ್ಯಾಕ್
Advertisement
Advertisement
ಗೂಗಲ್ ಪ್ಲೇಸ್ಟೋರ್‌ನಿಂದ ನಿಷೇಧಿಸಲಾದ ಅಪ್ಲಿಕೇಶನ್‌ಗಳು ಬಳಕೆದಾರರ ಸ್ಥಳ ಮಾಹಿತಿ, ಇ-ಮೇಲ್, ಫೋನ್ ನಂಬರ್, ಹತ್ತಿರದ ಸಾಧನಗಳು ಹಾಗೂ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುತ್ತಿದ್ದವು ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ಶೀಘ್ರವೇ ಸ್ವಯಂ ಚಾಲಿತ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರೆ ಮಸ್ಕ್
Advertisement
ಬಳಕೆದಾರರ ಡೇಟಾವನ್ನು ಹೊರತೆಗೆಯಲು ಈ ಅಪ್ಲಿಕೇಶನ್‌ಗಳಲ್ಲಿ ಕೋಡ್‌ಗಳನ್ನು ಸೇರಿಸಲಾಗುತ್ತಿದ್ದು, ಇದಕ್ಕಾಗಿ ಹಲವು ಕಂಪನಿಗಳು ಅಪ್ಲಿಕೇಶನ್‌ಗಳಿಗೆ ಪಾವತಿಸಿದೆ. ನಿಷೇಧಿತ ಅಪ್ಲಿಕೇಶನ್‌ಗಳಲ್ಲಿ ಕಂಡುಬಂದಿರುವ ಕೋಡ್‌ಗಳನ್ನು ಇತ್ತೀಚೆಗೆ ಸಂಶೋಧಕರು ಕಂಡುಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ.