ಬೆಳಗಾವಿ: ನಗರದ (Belagavi) ರೈಲು ನಿಲ್ದಾಣದ ಬಳಿ ಗೂಡ್ಸ್ ರೈಲು (Goods Train ) ಹಳಿ ತಪ್ಪಿದ ಘಟನೆ ಇಂದು (ಏ.15) ಮುಂಜಾನೆ ನಡೆದಿದೆ.
ಬೆಳಗಾವಿ ರೈಲು ನಿಲ್ದಾಣದಿಂದ ಅರ್ಧ ಕಿಮೀ ದೂರದಲ್ಲಿ ಗೂಡ್ಸ್ ರೈಲು ಹಳಿ ತಪ್ಪಿದೆ. ರೈಲು ಬೆಳಗಾವಿ ಕಡೆಯಿಂದ ಹುಬ್ಬಳ್ಳಿ (Hubballi) ಕಡೆಗೆ ಹೊರಟಿತ್ತು. ಈ ವೇಳೆ ಹಳಿ ತಪ್ಪಿ ಮೂರು ಬೋಗಿಗಳು ಪಕ್ಕಕ್ಕೆ ಸರಿದಿವೆ.
20 ನಿಮಿಷ ಆಗಿದ್ದರೆ ಗೂಡ್ಸ್ ರೈಲಿಗೆ ರಾಣಿ ಚನ್ನಮ್ಮ ರೈಲು ಡಿಕ್ಕಿಯಾಗುವ ಸಂಭವವಿತ್ತು ಎನ್ನಲಾಗಿದೆ. ಆದರೆ ಬೆಂಗಳೂರಿನಿಂದ ಬೆಳಗಾವಿಯತ್ತ ಬರುತ್ತಿದ್ದ ರಾಣಿ ಚನ್ನಮ್ಮ ರೈಲನ್ನು 8 ಕಿಮೀ ಹಿಂದಿನ ದೇಸೂರು ನಿಲ್ದಾಣದಲ್ಲಿಯೇ ಅಧಿಕಾರಿಗಳು ತಡೆದಿದ್ದಾರೆ. ಇದರಿಂದ ಆಗುತ್ತಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.
ಸ್ಥಳಕ್ಕೆ ರೇಲ್ವೇ ಪೊಲೀಸರು ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾವ ಕಾರಣಕ್ಕೆ ಹಳಿ ತಪ್ಪಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.