ಚಂಡೀಗಢ: ಗೂಡ್ಸ್‌ರೈಲು (Goods Train) ಹಳಿತಪ್ಪಿದ ಪರಿಣಾಮ 8 ಕಂಟೈನರ್‌ಗಳು (Container) ಹಳಿಗೆ ಬಿದ್ದು, ರೈಲು ಸಂಚಾರಕ್ಕೆ ಅಡ್ಡಿಯುಂಟಾದ ಘಟನೆ ಹರಿಯಾಣದ (Haryana) ಕರ್ನಾಲ್ (Karnal) ಜಿಲ್ಲೆಯಲ್ಲಿ ನಡೆದಿದೆ.
ರೈಲು ಅಂಬಾಲಾದಿಂದ ದೆಹಲಿಗೆ ತೆರಳುತ್ತಿತ್ತು ಎಂದು ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯಿಂದ ಎಂಟು ಕಂಟೈನರ್‌ಗಳು ಹಳಿಗೆ ಬಿದ್ದಿವೆ. ಘಟನೆಗೆ ಕಾರಣಗಳನ್ನು ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ರೈಲು ಅಂಬಾಲಾದಿಂದ ದೆಹಲಿಗೆ ತೆರಳುತ್ತಿದ್ದಾಗ ಕರ್ನಾಲ್‌ನ ತಾರೋರಿ ಬಳಿ ಈ ಘಟನೆ ಸಂಭವಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಓರ್ವ ಸಚಿವ, ಓರ್ವ ಶಾಸಕನಿಗೆ ಶೀಘ್ರವೇ ಶೋಕಾಸ್ ನೋಟಿಸ್
Advertisement
Advertisement
ಕಂಟೈನರ್ ಹಳಿಗೆ ಬಿದ್ದ ಪರಿಣಾಮ ಅಂಬಾಲಾ-ದೆಹಲಿ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರಕ್ಕೆ ತೊಂದರೆಯಾಗಿದೆ. ಘಟನೆಯಿಂದ ಈ ಮಾರ್ಗವಾಗಿ ಚಲಿಸುವ ರೈಲುಗಳನ್ನು ನಿಲ್ಲಿಸಲಾಗಿದೆ. ಮುಂಜಾನೆ 4:40ರ ವೇಳೆಗೆ ಘಟನೆ ನಡೆದಿದೆ. ಘಟನೆಯಲ್ಲಿ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್
Advertisement