ಬೆಂಗಳೂರು: ಬೆಂಗಳೂರು ವಿಭಾಗವು ಸರಕು ಸಾಗಾಟದಲ್ಲಿ ಹೊಸ ದಾಖಲೆಯನ್ನು ಬರೆದಿದೆ. 2021-22ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಮಾಸಿಕ ಸಾಧನೆಯನ್ನುಗಳಿಸಿದೆ.
Advertisement
ಈ ಕುರಿತಂತೆ ನೈರುತ್ಯ ರೈಲ್ವೇ ಬೆಂಗಳೂರು ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ನೈಋತ್ಯ ರೈಲ್ವೇಯ ಬೆಂಗಳೂರು ವಿಭಾಗವು ಇತ್ತೀಚಿನ ದಿನಗಳಲ್ಲಿ ಸರಕು ಸಾಗಣೆಯಲ್ಲಿ ದಾಪುಗಾಲು ಹಾಕುತ್ತಿದೆ. ಅಕ್ಟೋಬರ್ ತಿಂಗಳಿನಲ್ಲಿ ವಿಭಾಗವು 0.141 ಮಿಲಿಯನ್ ಟನ್‍ಗಳಷ್ಟು ಸರಕುಲೋಡ್ ಮಾಡಿದ್ದು, Rs.14.48 ಕೋಟಿಗಳ ಸರಕು ಸಾಗಣೆ ಆದಾಯವನ್ನು ದಾಖಲಿಸಿದೆ. ಇದು 2021-22ನೇ ಹಣಕಾಸು ವರ್ಷದಲ್ಲಿ ಅತ್ಯಧಿಕ ಮಾಸಿಕ ಸಾಧನೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೇಶದ ಅತಿ ದೊಡ್ಡ ಜೇಬುಗಳ್ಳ ಅಂದ್ರೆ ಕಾಂಗ್ರೆಸ್: ಬಿಜೆಪಿ ತಿರುಗೇಟು
Advertisement
Advertisement
2020ರ ಅಕ್ಟೋಬರ್ ನಲ್ಲಿ ದಿನಕ್ಕೆ 148 ವ್ಯಾಗನ್‍ಗಳಿಗೆ ಹೋಲಿಸಿದರೆ, 2021ರ ಅಕ್ಟೋಬರ್‍ನಲ್ಲಿ ದಿನಕ್ಕೆ ಸರಾಸರಿ 166 ವ್ಯಾಗನ್‍ಗಳನ್ನು ಲೋಡ್ ಮಾಡಲಾಗಿದೆ, ಇದು 28% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಒಟ್ಟಾರೆಯಾಗಿ, ಕಳೆದ ಹಣಕಾಸು ವರ್ಷದಲ್ಲಿ ಅಕ್ಟೋಬರ್, 2020 ರವರೆಗಿನ ಸಂಚಿತ ಅಂಕಿಅಂಶಗಳಿಗೆ ಹೋಲಿಸಿದರೆ ವಿಭಾಗವು 7% ಟನ್ ಮತ್ತು 36.23% ಸರಕು ಸಾಗಣೆ ಆದಾಯದಲ್ಲಿ ಹೆಚ್ಚಳವನ್ನು ಕಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್ 100.63, ಡೀಸೆಲ್ 85.03ರೂ. – ಸರ್ಕಾರದಿಂದ ಅಧಿಕೃತ ಅಧಿಸೂಚನೆ
Advertisement
ಬಿಡದಿ ಗೂಡ್ಸ್ ಶೆಡ್‍ನಲ್ಲಿ ಟೊಯಾಟಾ ಎಸ್‍ಯುವಿ ಲೋಡಿಂಗ್, ಹೊಸೂರಿನಲ್ಲಿ ಅಶೋಕ್ ಲೇಲ್ಯಾಂಡ್ ಟ್ರಕ್ ಲೋಡಿಂಗ್, ಧರ್ಮಪುರಿ ಮತ್ತು ಹೊಸೂರು ಗೂಡ್ಸ್ ಶೆಡ್‍ಗಳಿಂದ ರೈಸ್ ಲೋಡಿಂಗ್ ವಿಭಾಗದ ಈ ಸಾಧನೆಗೆ ಕಾರಣವೆಂದು ಹೇಳಬಹುದೆಂದಿದ್ದಾರೆ.