ನವದೆಹಲಿ: ಜವಳಿ ಮೇಲಿನ ಜಿಎಸ್‍ಟಿಯನ್ನು ಶೇ.5 ರಿಂದ ಶೇ.12ಕ್ಕೆ ಹೆಚ್ಚಿಸದೇ ಇರಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಕೌನ್ಸಿಲ್ ನಿರ್ಧರಿಸಿದೆ.
ಇಂದು ತುರ್ತು ಸಭೆ ನಡೆಸಿದ ಜಿಎಸ್‍ಟಿ ಮಂಡಳಿ ಮುಂದಿನ ಕೌನ್ಸಿಲ್ ಸಭೆಯಲ್ಲಿ ಈ ವಿಷಯವನ್ನು ಮತ್ತೊಮ್ಮೆ ಚರ್ಚಿಸಲಾಗುವುದು ಎಂದು ಹೇಳಿದೆ. ಈ ನಿರ್ಧಾರದಿಂದಾಗಿ ಜವಳಿ ಮೇಲಿನ ಜಿಎಸ್‍ಟಿ ದರ ಯಥಾಸ್ಥಿತಿಯಲ್ಲೇ ಮುಂದುವರಿಯಲಿದೆ.
Advertisement
Advertisement
ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಇಂದು ಜವಳಿ ವಿಚಾರಕ್ಕಾಗಿ ತುರ್ತು ಸಭೆಯನ್ನು ನಡೆಸಲಾಗಿತ್ತು. ಈ ಸಭೆಯಲ್ಲಿ ದರ ನಿಗದಿ ಸಂಬಂಧ ಕರ್ನಾಟಕ ಸಿಎಂ ಬೊಮ್ಮಾಯಿ ನೇತೃತ್ವದ ಸಮಿತಿ ಪರಿಶೀಲಿಸಿ ವರದಿ ನೀಡಿದ ಬಳಿಕ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಂಬೈಯಲ್ಲಿ ಜ.15ರವರೆಗೆ 144 ಸೆಕ್ಷನ್ ಜಾರಿ – ಸಂಜೆ 5 ರಿಂದ ಬೆಳಗ್ಗೆ 5ರವರೆಗೆ ನಿರ್ಬಂಧ
Advertisement
Advertisement
ಸಭೆಯಲ್ಲಿ ಜವಳಿ ಜಿಎಸ್‍ಟಿಯ ವಿಚಾರವಾಗಿ ಮಾತ್ರವೇ ಚರ್ಚೆ ನಡೆಸಲಾಗಿದ್ದು, ಪಾದರಕ್ಷೆಯ ದರಗಳ ಮೇಲಿನ ಹೆಚ್ಚಳದ ಬಗ್ಗೆ ಚರ್ಚಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಐದು ಜಿಲ್ಲೆಗಳ ಡಿಸಿಗಳಿಗೆ ಬೆವರಿಳಿಸಿದ ಸಿಎಂ ಬೊಮ್ಮಾಯಿ
We retain the status quo and not go to 12% from 5%, meaning don’t do the correction now in case of textiles.
Textile was the only issue of discussion in this emergency meet: Union Minister @nsitharaman #GSTCouncilMeetingry pic.twitter.com/z5nOw1GyEa
— PIB India (@PIB_India) December 31, 2021
ಸಪ್ಟೆಂಬರ್ 17ರಂದು ಲಕ್ನೋದಲ್ಲಿ ಜಿಎಸ್‍ಟಿ ಕೌನ್ಸಿಲ್ ಸಭೆ ನಡೆದಿತ್ತು. ಈ ವೇಳೆ ಜವಳಿ ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್‍ಟಿಯನ್ನು ಶೇ.5 ರಿಂದ ಶೇ.12 ಕ್ಕೆ ಹೆಚ್ಚಿಸುವ ಹಾಗೂ 2022ರ ಜನವರಿ 1 ರಂದು ಜಾರಿಗೊಳಿಸಲು ನಿರ್ಧರಿಸಲಾಗಿತ್ತು.