ಮಂಡ್ಯ: ಮುಂಗಾರು ಮಳೆಯ (Mungaru Rain) ಕಣ್ಣಾ ಮುಚ್ಚಾಲೆಯಿಂದ ಕಾವೇರಿ ನೀರು ಅವಲಂಬಿತ ಜನರಲ್ಲಿದ್ದ ಆತಂಕ ಈಗ ಸ್ವಲ್ಪ ದೂರವಾಗಿದೆ.
ಪ್ರಸಕ್ತ ವರ್ಷದಲ್ಲಿ ಕೆಆರ್‌ಎಸ್ ಜಲಾಶಯಕ್ಕೆ (KRS Dam) ದಾಖಲೆಯ ಒಳಹರಿವು ಬಂದಿರುವ ಹಿನ್ನೆಲೆ ಒಂದೇ ದಿನದಲ್ಲಿ ಜಲಾಶಯದಲ್ಲಿ ಒಂದು TMC ನೀರು ಹೆಚ್ಚಳವಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕಳೆದ ಮೂರು ದಿನ ಉತ್ತಮ ಮಳೆಯಾದ ಹಿನ್ನೆಲೆ ಕೆಆರ್‌ಎಸ್ ಜಲಾಶಯಕ್ಕೆ 13,449 ಕ್ಯೂಸೆಕ್ ನೀರು ಒಳಹರಿವು ಬಂದಿದೆ. ಇದನ್ನೂ ಓದಿ: ಕಾಂಗ್ರೆಸ್ Vs ಹೆಚ್‌ಡಿಕೆ ನಡುವೆ ಪೆನ್‌ಡ್ರೈವ್ ಕದನ – ಸೋಮವಾರ ಸ್ಫೋಟವಾಗುತ್ತಾ ರಹಸ್ಯ?
2023ನೇ ಸಾಲಿನಲ್ಲಿ ಇದೇ ಅಧಿಕ ಪ್ರಮಾಣದ ಒಳಹರಿವು ಆಗಿದೆ. ಡ್ಯಾಂ ಬರಿದಾಗುವ ಸಮಯದಲ್ಲಿ ಈ ಪ್ರಮಾಣದ ಒಳಹರಿವು ಕಾವೇರಿ ನೀರು ಅವಲಂಬಿತ ಜನರಲ್ಲಿ ಮಂದಹಾಸ ತರಿಸಿದೆ. 124.80 ಅಡಿಗಳ ಡ್ಯಾಂ 82.00 ಅಡಿಯಲ್ಲಿ ನೀರಿದೆ. 49.452 ಟಿಎಂಸಿ ಗರಿಷ್ಠ ಸಾಂದ್ರತೆ ಡ್ಯಾಂನಲ್ಲಿ 11.695 ಟಿಎಂಸಿ ನೀರು ಶೇಖರಣೆಯಾಗಿದೆ. ಡ್ಯಾಂನ ಒಳ ಹರಿವಿನ ಪ್ರಮಾಣ 13,499 ಕ್ಯೂಸೆಕ್ ಇದ್ದು, ಡ್ಯಾಂ ಹೊರಹರಿವು 353 ಕ್ಯೂಸೆಕ್ ಇದೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಹಳ್ಳಿ ಹುಡ್ಗನಂತೆ ಭತ್ತದ ಗದ್ದೆಯಲ್ಲಿ ನಾಟಿ ಮಾಡಿದ ರಾಹುಲ್ ಗಾಂಧಿ!
ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಬೆಂಗಳೂರು (Bengaluru) ಹಾಗೂ ಮೈಸೂರಿಗೆ (Mysuru) ಕುಡಿಯುವ ನೀರಿನ ಸಮಸ್ಯೆಯಾಗುವ ಆತಂಕ ಶುರುವಾಗಿತ್ತು. ಇತ್ತೀಚೆಗೆ ಕೊಡಗಿನಲ್ಲಿ ಮಳೆಯಾದ ಕಾರಣ, ಪ್ರಸಕ್ತ ವರ್ಷದಲ್ಲಿ ಕೆಆರ್‌ಎಸ್ ಡ್ಯಾಂಗೆ ಮೊದಲ ಬಾರಿಗೆ ಸಾವಿರ ಕ್ಯೂಸೆಕ್ ನೀರು ಬಿಡಲಾಗಿತ್ತು.
Web Stories