ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಬೊಮ್ಮಾಯಿ ಗುಡ್ ನ್ಯೂಸ್ ನೀಡಿದೆ.
ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ಮಾರ್ಚ್ 1ರಿಂದ ಮುಷ್ಕರಕ್ಕೆ ಮುಂದಾಗಿದ್ರು. ಮಾಜಿ ಸಿಎಂ ಯಡಿಯೂರಪ್ಪ (B S Yediyurappa) ಆದಿಯಾಗಿ ಬಹುತೇಕ ನಾಯಕರು ರಾಜ್ಯ ಸರ್ಕಾರಿ ನೌಕರರ ಪರ ಬ್ಯಾಟ್ ಬೀಸಿದ್ರು. ಈ ಬೆಳವಣಿಗೆ ಚುನಾವಣೆ ಮೇಲೆ ಪರಿಣಾಮ ಬೀರುವ ಆತಂಕವೂ ಬಿಜೆಪಿ(BJP) ಗೆ ವ್ಯಕ್ತವಾಗಿತ್ತು. ಹೀಗಾಗಿಯೇ ಅಧಿವೇಶನ ಮುಗಿಯಲು ಒಂದು ದಿನ ಇರುವಾಗಲೇ ವಿಧಾನಸಭೆ ಸಾಕ್ಷಿಯಾಗಿ ಸಿಎಂ ಬೊಮ್ಮಾಯಿ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ನೀಡಿದ್ದಾರೆ.
Advertisement
Advertisement
ಮಾರ್ಚ್ ತಿಂಗಳಲ್ಲಿ 7ನೇ ವೇತನ ಆಯೋಗದ ಮಧ್ಯಂತರ ವರದಿ ಅನ್ವಯ ನಿರ್ಧಾರ ತೆಗೆದುಕೊಳ್ಳುವ ಘೋಷಣೆಯನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಆದರೆ ಯಾವ ಪ್ರಮಾಣದಲ್ಲಿ ವೇತನ ಹೆಚ್ಚಳ ಆಗಲಿದೆ ಎಂಬ ಗುಟ್ಟನ್ನು ಸಿಎಂ ಬೊಮ್ಮಾಯಿ ಬಿಟ್ಟುಕೊಟ್ಟಿಲ್ಲ. ಇದನ್ನೂ ಓದಿ: ನಮ್ಮದು ಜನಕಲ್ಯಾಣ, ಆರ್ಥಿಕ ಸ್ಥಿರತೆ ಸಾಧಿಸುವ ವಾಸ್ತವಿಕತೆಯ ಬಜೆಟ್: ಬೊಮ್ಮಾಯಿ
Advertisement
Advertisement
ಇದೇ ವೇಳೆ ಬಜೆಟ್ (Budget) ನಲ್ಲಿ ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಘೋಷಿಸಿದ್ದ 500 ರೂಪಾಯಿ ಮಾಸಿಕ ಸಹಾಯಧವನ್ನು ಸಾವಿರ ರೂಪಾಯಿಗೆ ಹೆಚ್ಚಿಸಲು ಸಿಎಂ ತೀರ್ಮಾನಿಸಿದ್ದಾರೆ. ಅಲ್ಲದೇ, ಶಾಲೆಗೆ ಹೋಗುವ ಮಕ್ಕಳಿಗೆ ಬಸ್ ಸಮಸ್ಯೆ ನೀಗಿಸಲು ಬಜೆಟ್‍ನಲ್ಲಿ ಘೋಷಿಸಿದ್ದ 1 ಸಾವಿರ ಬಸ್‍ಗೆ ಬದಲಾಗಿ 2ಸಾವಿರ ಬಸ್ ಒದಗಿಸುವ ಹೊಸ ಘೋಷಣೆಯನ್ನು ಸಿಎಂ ಮಾಡಿದ್ದಾರೆ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k