2018ಕ್ಕೆ ಗುಡ್‍ಬೈ.. 2019ಕ್ಕೆ ವೆಲ್‌ಕಮ್‌

Public TV
2 Min Read
bng new year 2 1

– ಡ್ಯಾನ್ಸ್ ಮಾಡಿ ಸಂಭ್ರಮಿಸಿದ ಜನ
– ಸೋಮವಾರ ಸಂಜೆಯಿಂದಲೇ ಬಾರ್‌ಗಳಿಗೆ ಭರ್ಜರಿ ವ್ಯಾಪಾರ

ಬೆಂಗಳೂರು: 2018ಗೆ ಟಾಟಾ ಹೇಳಿ ಹೊಸ ವರ್ಷ 2019 ಅನ್ನು ರಾಜ್ಯದ ಜನ ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಸಾವಿರಾರು ಯುವಕ-ಯುವತಿಯರು ರಸ್ತೆಗೆ ಇಳಿದು ನೃತ್ಯ ಮಾಡಿ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.

ಹೊಸ ವರ್ಷದ ಹಿನ್ನೆಲೆಯಲ್ಲಿ ಸೋಮವಾರ ಸಂಜೆಯಿಂದಲೇ ಬೆಂಗಳೂರಿನ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್, ಕ್ಲಬ್‍ಗಳಲ್ಲಿ ಪಾರ್ಟಿಗಳು ಜೋರಾಗಿತ್ತು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿತ್ತು.

ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಎಚ್ಚರವಹಿಸಿತ್ತು. ಮಂಗಳವಾರ ಬೆಳಗ್ಗೆ 6 ಗಂಟೆವರೆಗೆ ವಿಮಾನ ನಿಲ್ದಾಣ ರಸ್ತೆ, ತುಮಕೂರು ರೋಡ್‍ನ ಫ್ಲೈಓವರ್ ಹೊರತುಪಡಿಸಿ ಬೆಂಗಳೂರಿನ ಎಲ್ಲಾ ಫ್ಲೈಓವರ್‌ಗಳಲ್ಲಿ ಸಂಚಾರವನ್ನು ರದ್ದು ಮಾಡಲಾಗಿತ್ತು.

New Year 3

ಬಳ್ಳಾರಿ: ನಗರದ ಹೈದ್ರಾಬಾದ್ ಬಿರಿಯಾನಿ ಹೋಟೆಲ್‍ನಲ್ಲಿ ಹೊಸ ವರ್ಷವನ್ನ ವಿನೂತನವಾಗಿ ಆಚರಣೆ ಮಾಡಲಾಗುತ್ತಿದೆ. ಹೋಟೆಲ್‍ಗೆ ಬಿರಿಯಾನಿ ತಿನ್ನಲು ಬರುವ ಗ್ರಾಹಕರಿಗೆ ಹೈದರಾಬಾದ್ ಮ್ಯಾಂಗೋ ಪಾಯಸ ವಿತರಣೆ ಮಾಡಿ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಹೋಟೆಲ್ ಮಾಲೀಕ ಮೊಹಮ್ಮದ್ ಮುನ್ನಾವರ್ ಗ್ರಾಹಕರಿಗೆ ಹೈದ್ರಾಬಾದ್ ಪಾಯಸ ವಿತರಣೆ ಮಾಡಿ ವಿಶ್ ಮಾಡುತ್ತಿರುವುದು ವಿಶೇಷವಾಗಿದೆ.

ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶರಾದ ವಸ್ತ್ರಮಠ ಅವರು ನಗರ ಹೊರವಲಯದ ಗೋನೂರಿನ ನಿರಾಶ್ರಿತರ ಕೇಂದ್ರದಲ್ಲಿ ವಿನೂತನವಾಗಿ ಹೊಸ ವರ್ಷವನ್ನು ಸ್ವಾಗತಿಸಿದರು. ಈ ವೇಳೆ ನಿರಾಶ್ರಿತರಿಗೆ ಹಣ್ಣು, ಹಂಪಲು ಹಂಚಲಾಯಿತು. ಈ ಸಂಭ್ರಮದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಅರುಣ್ ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು ಕೂಡ ಭಾಗಿಯಾಗಿದ್ದರು.

New Year 1

ಕಾರವಾರ: ಹೊಸ ವರ್ಷವನ್ನು ಬರಮಾಡಿಕೊಳ್ಳಲು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ರವೀಂದ್ರನಾಥ್ ಟಾಗೋರ್ ಬೀಚ್‍ನಲ್ಲಿ ಸಾವಿರಾರು ಜನರು ಸೇರಿದ್ದರು. ನಗರ ಹಾಗೂ ವಿವಿಧ ಪ್ರದೇಶದ ಪ್ರವಾಸಿಗರು, ಬೀಚ್‍ನಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತ, ಕುಣಿದು ಕುಪ್ಪಳಿಸಿದರು.

ಹುಬ್ಬಳ್ಳಿ: ನಗರದ ಉಣಕಲ್ ಕೆರೆ ದಂಡೆಯ ಮೇಲಿರುವ ನವೀನ್ ಹೋಟೆಲ್‍ನಲ್ಲಿ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಚನ್ನಮ್ಮ ಸರ್ಕಲ್, ದುರ್ಗದ ಬೈಲು ಸೇರಿದಂತೆ ವಿವಿಧ ಕಡೆಗಳಲ್ಲಿ ಸಾರ್ವಜನಿಕರು ಸೇರಿ ನ್ಯೂವ್ ಇಯರ್ ಸೆಬ್ರೆಷನ್ ಮಾಡಿದರು.

New Year 5

ಶಿವಮೊಗ್ಗ: ನಗರದ ಕಂಟ್ರಿ ಕ್ಲಬ್‍ನಲ್ಲಿ ಫ್ಯಾಷನ್ ಶೋ, ಫ್ಯಾಮಿಲಿ ಗೇಮ್ಸ್, ಹಾಡು ನೃತ್ಯದ ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ನಡೆದವು.

ಬಾಗಲಕೋಟೆ: ನಗರದ ಹರಿಪ್ರಿಯಾ ಹಾಗೂ ಕಂಠಿ ಹೋಟೆಲ್‍ನಲ್ಲಿ ವೇದಿಕೆ ನಿರ್ಮಿಸಿ, ಯುವಕ- ಯುವತಿಯರು ಡ್ಯಾನ್ಸ್ ಮಾಡಿದರು. ನಗರದ ವಿವಿಧ ಪ್ರದೇಶದಲ್ಲಿ ಮಹಿಳೆಯರು, ಮಕ್ಕಳು, ಯುವಕ ಯುವತಿಯರು ಡ್ಯಾನ್ಸ್ ಮಾಡಿ ಹೊಸ ವರ್ಷವನ್ನು ಸಂಭ್ರಮಿಸಿದರು.

ಉಡುಪಿ: ಉಡುಪಿಯ ಓಷಿಯನ್ ಪರ್ಲ್ ಹೋಟೆಲ್ ನಲ್ಲಿ ನ್ಯೂ ಇಯರ್ ಪಾರ್ಟಿ ಆಯೋಜಿಸಲಾಗಿತ್ತು. ದಂಪತಿಗೆ ನೃತ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

bng new year 3

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *