ಪಬ್ಲಿಕ್ ಟಿವಿಯ ವಿದ್ಯಾಪೀಠಕ್ಕೆ ಅಭೂತಪೂರ್ವ ಬೆಂಬಲ- ಭಾನುವಾರವೂ ಪ್ರವೇಶ ಉಚಿತ, ಮಿಸ್ ಮಾಡ್ದೇ ಬನ್ನಿ

Public TV
2 Min Read
EDUCATION EXPO

320 X 50

ಬೆಂಗಳೂರು: ಪಬ್ಲಿಕ್ ಟಿವಿ (PUBLiC TV) ಹೆಮ್ಮೆಯ ಪ್ರಸ್ತುತ ವಿದ್ಯಾಪೀಠ (Vidyapeeta) 6ನೇ ಆವೃತ್ತಿ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನವೇ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಪೀಠಕ್ಕೆ ಆಗಮಿಸಿದ ಜ್ಞಾನಾರ್ಜನೆ ಪಡೆದುಕೊಂಡರು.

ಬೆಂಗಳೂರಿನ ಅರಮನೆ ಮೈದಾನ (Palace Ground) ದ ಗಾಯಿತ್ರಿ ವಿಹಾರ್ ನಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಮೇಳಕ್ಕೆ ಬೆಳಗ್ಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್.ಆರ್. ರಂಗನಾಥ್ (H.R Ranganath), ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್ ಚಾಲನೆ ನೀಡಿದ್ರು. 105 ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ವಿದ್ಯಾಪೀಠ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಶೈಕ್ಷಣಿಕ ಜ್ಞಾನಾರ್ಜನೆಗೆ ದಾರಿದೀಪ ಆದರು. ವೇದಿಕೆ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್, ಗಾರ್ಡನ್ ಸಿಟಿ ಯುನಿವರ್ಸಿಟಿಯ ಚಾನ್ಸಲರ್ ವಿ.ಜಿ. ಜೋಸೆಫ್, ರೇವಾ ಯುನಿವರ್ಸಿಟಿ ಚಾನ್ಸಲರ್ ಶಾಮರಾಜು, ಕೇಂಬ್ರಿಡ್ಜ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಅಧ್ಯಕ್ಷರಾದ ಡಿ.ಕೆ. ಮೋಹನ್ ಭಾಗವಹಿಸಿದ್ರು. ವಿದ್ಯಾಪೀಠ ಕಾರ್ಯಕ್ರಮದ ಬಗ್ಗೆ ಪಬ್ಲಿಕ್ ಟಿವಿ ಮುಖ್ಯಸ್ಥರಾದ ರಂಗನಾಥ್ ಅವರು ತಿಳಿಸಿದ್ರು. ಗಣ್ಯರು ವಿದ್ಯಾಪೀಠ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮೊದಲ ದಿನದ ಎಕ್ಸ್ ಪೋನಲ್ಲಿ ಸಿಇಟಿ (CET), ನೀಟ್ (NEET) ಸಂಬಂಧ ಉಪನ್ಯಾಸ ನಡೆಯಿತು. ವಿದ್ಯಾರ್ಥಿಗಳು ಸಿಇಟಿ ಮತ್ತು ನೀಟ್ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಜನೆ ಜೊತೆಗೆ ವಿದ್ಯಾರ್ಥಿಗಳಿಗೆ ವಿವಿಧ ಗೇಮ್ಸ್ ನಡೆಯಿತು. ಸ್ಲೋ ಸೈಕಲ್ ರೈಸ್, ಮ್ಯೂಸಿಕಲ್ ಛೇರ್, ಲೋಗೋ ಗೇಮ್, ಪಿಕ್ ಅಂಡ್ ಸ್ಪೀಕ್ ಸ್ಪರ್ಧೆ ನಡೆಯಿತು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗೆದ್ದರು. ಪ್ರತಿ ಒಂದು ಗಂಟೆಗೆ ಲಕ್ಕಿ ಡಿಪ್ ಮೂಲಕ ವಿದ್ಯಾರ್ಥಿಗಳು ಆಕರ್ಷಕ ಗಿಫ್ಟ್ ಪಡೆದರು. ಪಿಯುಸಿ ಟಾಪರ್ಸ್ ಗಳಿಗೆ ಆಕರ್ಷಕ ಗಿಫ್ಟ್ ಕೂಡಾ ಸಿಕ್ಕಿತು. ಪೋಷಕರು ಕೂಡಾ ವಿದ್ಯಾಪೀಠ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶನಿವಾರ ಕೂಡಾ ಎಕ್ಸ್ ಪೋ (Education Expo) ಬೆಳಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೂ ನಡೆಯಲಿದೆ. ಆಂಡ್ರೆಟಿಂಗ್ ಎಕ್ಸ್ ಪರ್ಟ್ ಆಗಿರೋ ರಫೀಉಲ್ಲಾ ಬೇಗ್ ನಿಂದ ಕಾರ್ಯಕ್ರಮ ಇರಲಿದೆ. ಇದಲ್ಲದೆ ಬೈಸಿಕಲ್, ಲ್ಯಾಪ್ ಟಾಪ್, ಸೇರಿದಂತೆ ಹಲವು ಬಂಪರ್ ಗಿಫ್ಟ್ ಗೆಲ್ಲೋ ಅವಕಾಶ ವಿದ್ಯಾರ್ಥಿಗಳಿಗೆ ಸಿಗಲಿದೆ. ಬನ್ನಿ ಭಾಗವಹಿಸಿ ಜ್ಞಾನಾರ್ಜನೆ ಜೊತೆಗೆ ಆಕರ್ಷಕ ಬಹುಮಾನ ಗೆಲ್ಲಿ. ಇದನ್ನೂ ಓದಿ: ಭಾರತದಲ್ಲಿ ಭೀಕರ ರೈಲು ದುರಂತ ಕಂಡು ತುಂಬಾ ದುಃಖವಾಗಿದೆ – ಪಾಕಿಸ್ತಾನ, ತಾಲಿಬಾನ್‌ ಸಂತಾಪ

Share This Article