ಬೆಂಗಳೂರು: ಮಹಿಳೆಯರಿಗೆ ಫ್ರೀ ಬಸ್ (Free Bus) ನೀಡಿದ್ದ ಸರ್ಕಾರ ಈಗ ಅಂಧತ್ವ ಹೊಂದಿರೋ ವಿಶೇಷ ಚೇತನರಿಗಾಗಿ ಗುಡ್ ನ್ಯೂಸ್ ನೀಡಿದ್ದು, ಈ ಮೂಲಕ ರಾಜ್ಯ ಸಾರಿಗೆ 4 ನಿಗಮಗಳಲ್ಲಿ ಉಚಿತವಾಗಿ ಓಡಾಡಲು ಅವಕಾಶ ಮಾಡಿಕೊಟ್ಟಿದೆ.
ಶಕ್ತಿ ಯೋಜನೆ (Shakthi Scheme ಸರ್ಕಾರದ ಮಹತ್ವದ ಗ್ಯಾರಂಟಿಯು ಸರ್ಕಾರಕ್ಕೆ ಅತಿ ಹೆಚ್ಚು ಹೆಸರು ತಂದ ಯೋಜನೆ ಕೂಡ. ಮಹಿಳೆಯರಿಗೆ ಯೋಜನೆ ಫ್ರೀ ಮಾಡಿದ್ದ ಸರ್ಕಾರ, ಈಗ ಅಂಧತ್ವ ಹೊಂದಿರೋ ವಿಶೇಷ ಚೇತನರಿಗಾಗಿ (Blind People) ಮಹತ್ವದ ಆದೇಶ ಹೊರಡಿಸಿದ್ದು, ಈ ಮೂಲಕ ಅಂಧರು ರಾಜ್ಯವ್ಯಾಪಿ ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಿದೆ. ಇದನ್ನೂ ಓದಿ: ಕಸಬ್ ಗಲ್ಲಿಗೇರಲು ಕಾರಣರಾಗಿದ್ದ ವಕೀಲ ಉಜ್ವಲ್ ನಿಕಮ್, ಸದಾನಂದನ್ ಮಾಸ್ಟರ್ ಸೇರಿದಂತೆ ನಾಲ್ವರು ರಾಜ್ಯಸಭೆಗೆ ನಾಮನಿರ್ದೇಶನ
ಹೌದು, ಈ ಹಿಂದೆ 4 ನಿಗಮಗಳ ಪೈಕಿ ಯಾವ ನಿಗಮದ ಬಸ್‌ಪಾಸ್ ಇತ್ತೋ ಆ ಬಸ್‌ನಲ್ಲಿ ಮಾತ್ರ ಅಂಧತ್ವ ಇದ್ದವರು ಓಡಾಡಲು ಅವಕಾಶ ಇತ್ತು. ಇದು ಅನೇಕರಿಗೆ ಸಮಸ್ಯೆ ಕೂಡ ಆಗುತ್ತಿತ್ತು. ಅದರಲ್ಲೂ ಬೆಂಗಳೂರಿನಲ್ಲಿರೋ ಹಲವರು ಬಿಎಂಟಿಸಿ ಬಸ್‌ನಲ್ಲಿ ಓಡಾಡಲು ಅವಕಾಶ ಇದ್ದವರು ಕೆಎಸ್‌ಆರ್‌ಟಿಸಿಯಲ್ಲಿ ಓಡಾಡಬೇಕಾದ್ರೆ ಹಣ ಪಾವತಿ ಮಾಡಿಯೇ ಓಡಾಡಬೇಕಿತ್ತು. ಇದನ್ನೂ ಓದಿ: ಬೀದಿ ನಾಯಿಗಳಿಗೆ ವಿಶೇಷವಾಗಿ ತಯಾರಿಸಿದ ಭಕ್ಷ್ಯ ನೀಡುತ್ತಿಲ್ಲ: ಬಿಬಿಎಂಪಿ ಸ್ಪಷ್ಟನೆ
ಆದರೆ ಈಗ ಅಂಧರ ಅನೂಕೂಲಕ್ಕಾಗಿ ಸರ್ಕಾರ ಹೊಸ ಆದೇಶ ಮಾಡಿದೆ. ಆ ಪ್ರಕಾರ ಯಾವುದಾದರೂ 1 ನಿಗಮದ ಪಾಸ್ ಇದ್ದರೆ, 4 ನಿಗಮಗಳ ಬಸ್‌ಗಳಲ್ಲಿ ಉಚಿತವಾಗಿ ಸಂಚಾರ ಮಾಡಬಹುದು. ಸದ್ಯ ಈ ಬಗ್ಗೆ ಖುದ್ದು ಸಾರಿಗೆ ಸಚಿವರೇ ನಿಗಮಗಳಿಗೆ ಸೂಚಿಸಿದ್ದು, ಶೀಘ್ರ ಈ ಕ್ರಮಕ್ಕೆ ಆದೇಶಿಸಿದ್ದಾರೆ. ಇದನ್ನೂ ಓದಿ: ರಾಯಚೂರಿನಲ್ಲೊಂದು ‘ರುದ್ರಪ್ರಯಾಗ’ದ ಥ್ರಿಲ್ಲರ್ ಸ್ಟೋರಿ – ಒಂದೂವರೆ ತಿಂಗಳ ಬಳಿಕ ಚಿರತೆ ಸೆರೆ, ನಿಟ್ಟುಸಿರು ಬಿಟ್ಟ ಜನ
ಇನ್ನೂ ಬೆಂಗಳೂರು ಒಂದರಲ್ಲೇ ಸುಮಾರು 20 ಸಾವಿರಕ್ಕೂ ಹೆಚ್ಚು ಅಂಧರಿದ್ದಾರೆ. ರಾಜ್ಯವ್ಯಾಪಿ ಲಕ್ಷದಷ್ಟು ಅಂಧ ವಿಶೇಷ ಚೇತನರಿದ್ದು, ಎಲ್ಲರಿಗೂ ಸರ್ಕಾರ ಉಚಿತ ಪಾಸ್ ನೀಡುತ್ತಿದೆ. ಆದರೆ ಸದ್ಯ ರಾಜ್ಯ ಸರ್ಕಾರವು ಹೊಸದಾಗಿ ಕೈಗೊಳ್ಳಲು ಹೊರಟಿರುವ ಈ ನಿರ್ಧಾರ ಎಲ್ಲಾ ಅಂಧ ವಿಶೇಷ ಚೇತನರಿಗೆ ಅನೂಕೂಲ ಆಗಲಿದೆ.