ನಮ್ಮ ಮೆಟ್ರೋದಿಂದ ಮತ್ತೊಂದು ಗುಡ್‌ನ್ಯೂಸ್ – ಹೊಸ ವರ್ಷದಿಂದ್ಲೇ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು!

Public TV
2 Min Read
Namma Metro

– ಆರ್‌.ವಿ ರಸ್ತೆಯಿಂದ-ಬೊಮ್ಮಸಂದ್ರದ ಮಾರ್ಗದಲ್ಲಿ 30 ನಿಮಿಷದೊಳಗೆ 3 ರೈಲುಗಳ ಸಂಚಾರ

ಬೆಂಗಳೂರು: ಸಿಲಿಕಾನ್‌ ಸಿಟಿ ಜನರಿಗೆ ನಮ್ಮ ಮೆಟ್ರೋ (Namma Metro) ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟಿದೆ.‌ 2025ರ ಜನವರಿಯಿಂದ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ರೈಲು ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಶನಿವಾರ ರೀಚ್ -5 (ಹಳದಿ ಮಾರ್ಗದ) (Yellow Line) ಆರ್‌.ವಿ ರಸ್ತೆಯಿಂದ ಬೊಮ್ಮಸಂದ್ರದವರೆಗಿನ (R.V. Road to Bommasandra) ಪ್ರಗತಿ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಇದನ್ನೂ ಓದಿ: Exit Poll Result | ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್‌-ಎನ್‌ಸಿ ಮೈತ್ರಿಕೂಟಕ್ಕೆ ಅಧಿಕಾರ – ಬಿಜೆಪಿಗೆ ಹಿಂದಿಗಿಂತ ಹೆಚ್ಚು ಸ್ಥಾನ

ಸಿವಿಲ್ ಅಥವಾ ಸಿಸ್ಟಂ ಕಾಮಗಾರಿಗಳು ಗಣನೀಯವಾಗಿ ಪೂರ್ಣಗೊಂಡಿವೆ. ಪ್ರೋಟೋ-ಟೈಪ್ ರೈಲಿನ ಪರೀಕ್ಷೆ ಪ್ರಗತಿಯಲ್ಲಿದ್ದು, ರೈಲ್ವೆ ಮಂಡಳಿಯು ಟ್ರಾಕ್ಷನ್‌ ಗೆ ಸಂಬಂಧಿಸಿದಂತೆ ತಾಂತ್ರಿಕ ಮಂಜೂರಾತಿ ನೀಡಿದೆ. ಸಿಗ್ನಲಿಂಗ್ ಸಿಸ್ಟಮ್ ಮತ್ತು ರೋಲಿಂಗ್ ಸ್ಟಾಕ್ ಪೂರ್ವಭಾವಿ ಹಂತದಲ್ಲಿದೆ ಎಂದು ತಿಳಿಸಿದೆ.

ಇನ್ನೂ ನವೆಂಬರ್-ಡಿಸೆಂಬರ್ 2024ರ ವೇಳೆಗೆ 3 ರೈಲು ಸೆಟ್‌ಗಳು ಲಭ್ಯವಿರಲಿದೆ. ಜನವರಿ 2025ರ ವೇಳೆಗೆ ಈ ಮಾರ್ಗದಲ್ಲಿ 3 ರೈಲುಗಳೊಂದಿಗೆ 30 ನಿಮಿಷಗಳ ಆವರ್ತನದಲ್ಲಿ ಕಾರ್ಯಾರಂಭಿಸುವ ಗುರಿಯನ್ನು ಹೊಂದಿದೆ. ಇದನ್ನೂ ಓದಿ: Bengaluru Rains | ಎಲೆಕ್ಟ್ರಾನಿಕ್ ಸಿಟಿ ಮತ್ತೆ ಜಲಾವೃತ – ಸಣ್ಣ ಮಳೆಗೆ ತತ್ತರಿಸಿದ ಐಟಿಬಿಟಿ ಮಂದಿ

Namma Metro Yellow Line

ಡಿಸೆಂಬರ್ 2024ರಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಶಾಸನಬದ್ಧ ಪರೀಕ್ಷೆ ನಡೆಸಲು ಯೋಜಿಸಲಾಗಿದೆ. ಮಾರ್ಚ್ 2025 ರಿಂದ ಪ್ರತಿ ತಿಂಗಳು 2 ರೈಲು ಸೆಟ್‌ಗಳನ್ನ ಟಿಆರ್‌ಎಸ್‌ಎಲ್ ಸಂಸ್ಥೆಯಿಂದ ಪಡೆಯಲಾಗುತ್ತದೆ ಹಾಗೂ ಹಂತ ಹಂತವಾಗಿ ಪ್ರಯಾಣದ ಆವರ್ತನವನ್ನು ಕಡಿಮೆ ಗೊಳಿಸಲಾಗುತ್ತದೆ. ಆಗಸ್ಟ್ 2025ರ ಒಳಗೆ ಹಳದಿ ಮಾರ್ಗಕ್ಕೆ ಬೇಕಾಗಿರುವ ಎಲ್ಲಾ 15 ರೈಲುಗಳ ಸೆಟ್‌ಗಳು ಲಭ್ಯವಿರುತ್ತವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದ ಐಟಿ-ಬಿಟಿ ಕಂಪನಿ ಉದ್ಯೋಗಿಗಳಿಗೆ ಅನುಕೂಲವಾಗಲಿದ್ದು, ಟ್ರಾಫಿಕ್ ದಟ್ಟಣೆಯೂ ಕಡಿಮೆಯಾಗಲಿದೆ.

Share This Article