– 1,900 ಕಿಮೀ ದೂರದಿಂದ ಸಂಚರಿಸಿ ಬೆಂಗಳೂರು ತಲುಪಿದ ಹಳದಿ ಮಾರ್ಗದ ರೈಲು
ಬೆಂಗಳೂರು: ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಎರಡನೇ ಚಾಲಕ ರಹಿತ ಮೆಟ್ರೋ (Driver Less Metro) ಬೆಂಗಳೂರು ತಲುಪಿದೆ.
Advertisement
Advertisement
ಟಿಟಾಗರ್‌ದಿಂದ 1,900 ಕಿ.ಮೀ ದೂರದಿಂದ ಸಂಚರಿಸಿ ಭಾನುವಾರ ಬೆಳಿಗ್ಗೆ 8:30ರ ಸುಮಾರಿಗೆ ಎರಡನೇ ಚಾಲಕ ರಹಿತ ಮೆಟ್ರೋ ಬೆಂಗಳೂರು ಹೆಬ್ಬಗೋಡಿ ಡಿಪೋಗೆ ತಲುಪಿದೆ. ಸಂವಹನ ಆಧಾರಿತ ರೈಲು ಇದಾಗಿದ್ದು, ಯೆಲ್ಲೋ ಲೈನ್‌ನಲ್ಲಿ ಚಾಲಕ ರಹಿತ ಮೆಟ್ರೋದ ವಾಣಿಜ್ಯ ಕಾರ್ಯಚರಣೆ ಆರಂಭಿಸಲು ಬಳಸಲಾಗುತ್ತದೆ.ಇದನ್ನೂ ಓದಿ: Aeroindia 2025 | ಬೆಂಗಳೂರಿಗೆ ಬಂದಿಳಿದ ಅಮೆರಿಕ – ರಷ್ಯಾ ಜೆಟ್
Advertisement
Advertisement
ಇದಕ್ಕಾಗಿ ಸದ್ಯ ಕನಿಷ್ಟ 5 ಚಾಲಕ ರಹಿತ ಮೆಟ್ರೋಗಳ ಅವಶ್ಯಕತೆಯಿದ್ದು, ಇಂದು 2ನೇ ಮೆಟ್ರೋ ನಗರಕ್ಕೆ ಬಂದು ತಲುಪಿದೆ. ಇದಕ್ಕೂ ಮುನ್ನ ಕೆಲ ತಿಂಗಳ ಹಿಂದೆ ಮೊದಲ ಚಾಲಕ ರಹಿತ ಬೆಂಗಳೂರಿಗೆ ಬಂದಾಗಿದೆ.
ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಕಾರ್ಯನಿರ್ವಹಿಸಲಿರುವ ಯೆಲ್ಲೋ ಲೈನ್ ಮೆಟ್ರೋ ಒಟ್ಟು 19.15 ಕಿ.ಮೀ ಚಲಿಸಲಿದೆ. ಕಳೆದ ನಾಲ್ಕು ವರ್ಷದಿಂದ ಯೆಲ್ಲೋ ಲೈನ್‌ಗಾಗಿ ಜನ ಕಾಯುತ್ತಿದ್ದು, ಇದರಿಂದ ಐಟಿಬಿಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ.ಇದನ್ನೂ ಓದಿ: ಕಲ್ಯಾಣಿಯಲ್ಲಿ ಈಜಲು ಹೋಗಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು – ಮೊಬೈಲ್‌ನಲ್ಲಿ ದೃಶ್ಯ ಸೆರೆ