ಬೆಂಗಳೂರು: ಕರ್ನಾಟಕದಿಂದ ಬೇರೆ ಬೇರೆ ರಾಜ್ಯಗಳಿಗೆ ಸಂಚಾರ ಮಾಡುವ ಟೂರಿಸ್ಟ್ ವಾಹನಗಳಿಗೆ ಆರ್‌ಟಿಓ ಗುಡ್‌ನ್ಯೂಸ್ ಕೊಟ್ಟಿದೆ. ಕಳೆದ ಹಲವು ವರ್ಷಗಳಿಂದ ಅಂತರರಾಜ್ಯ ಸಂಚಾರಕ್ಕೆ ಬೇಕಿದ್ದ ಸ್ಪೇಷಲ್ ಪರ್ಮಿಟ್ ವಿಚಾರವಾಗಿ, ಯೆಲ್ಲೋ ಬೋರ್ಡ್ ವಾಹನ (Yellow board Vehicle) ಮಾಲೀಕರಿಗೆ ಇದ್ದ ಕೆಲವು ನಿಯಮಗಳನ್ನ ಆರ್‌ಟಿಓ (RTO) ಸರಳೀಕರಣ ಮಾಡಿದೆ. ಹಾಗಾಗಿ ಇನ್ಮುಂದೆ ಹತ್ತೆ ಸೆಕೆಂಡುಗಳಲ್ಲಿ ಸ್ಪೇಷಲ್ ಪರ್ಮಿಟ್ ವಾಹನ ಸವಾರರ ಕೈ ಸೇರಲಿದೆ. ಅಷ್ಟಕ್ಕೂ ಹೇಗೆ ಅಂತೀರಾ ಮುಂದೆ ಓದಿ…
Advertisement
ಪ್ರತಿದಿನ ಕರ್ನಾಟಕದಿಂದ (Karnataka) ಬೇರೆ ಬೇರೆ ರಾಜ್ಯಗಳಿಗೆ ಟೂರಿಸ್ಟ್ ಸೇರಿದಂತೆ ವ್ಯವಹಾರಿಕ ಕಾರ್ಯಗಳಿಗೆ ಸಾವಿರಾರು ಯೆಲ್ಲೋ ಬೋರ್ಡ್ ವಾಹನಗಳು ಸಂಚಾರ ಮಾಡುತ್ತವೆ. ಅಂತರರಾಜ್ಯಕ್ಕೆ ತೆರಳುವ ಮುನ್ನ ಪ್ರತಿ ಬಾರಿಯೂ ಮಾಲೀಕ ಅಥವಾ ಚಾಲಕ ಯಾವುದೇ ಜಿಲ್ಲೆಯಲ್ಲಿದ್ದರೂ ವಾಹನದ ಮೂಲ ದಾಖಲಾತಿಯೊಂದಿಗೆ ಬೆಂಗಳೂರಿನ ಕೇಂದ್ರ ಕಚೇರಿಗೆ ಬಂದು ದಾಖಲೆ ನೀಡಿ ಕಾದು ಸ್ಪೇಷಲ್ ಪರ್ಮಿಟ್ ಪಡೆದ ಬಳಿಕವಷ್ಟೇ ಬೇರೆ ರಾಜ್ಯಗಳ ಎಂಟ್ರಿಗೆ ಅವಕಾಶ ಸಿಗುತ್ತಿತ್ತು. ಇದನ್ನೂ ಓದಿ: ನನ್ನ ಮಗನಿಗೆ ಚಿಕಿತ್ಸೆ ನೀಡಲು ರಜೆ ಸಿಗಲಿಲ್ಲ, ಮಗ ಉಳಿಯಲಿಲ್ಲ – ವಿಜಯಪುರ ಕಾನ್ಸ್‌ಟೇಬಲ್ ಮನಕಲುಕುವ ಪೋಸ್ಟ್
Advertisement
ಈ ಎಲ್ಲಾ ಪ್ರಕ್ರಿಯೆ ಮುಕ್ತಾಯಕ್ಕೆ ಸುಮಾರು ಎರಡು ಮೂರು ದಿನ ಸಮಯ ಬೇಕಾಗಿತ್ತು. ಸದ್ಯ ಈಗ ಸಮಸ್ಯೆಗೆ ಪರಿಹಾರ ನೀಡುವ ನಿಟ್ಟಿನಲ್ಲಿ ರಾಜ್ಯ ಸಾರಿಗೆ ಇಲಾಖೆ ಮುಂದಾಗಿದ್ದು, ಇನ್ಮುಂದೆ ಬೆರಳ ತುದಿಯಲ್ಲಿ, ಸೆಕೆಂಡ್ ಗಳಲ್ಲೇ ಸ್ಪೆಷಲ್ ಪರ್ಮಿಟ್ (Special Permit) ಸಿಗಲಿದೆ.
Advertisement
Advertisement
ಹೌದು. ರಾಜ್ಯದಿಂದ ಬೇರೆ ರಾಜ್ಯಗಳಿಗೆ ಸಂಚಾರ ಮಾಡುವ ಮುನ್ನ ರಾಜ್ಯ ಆರ್‌ಟಿಓನಿಂದ ವಿಶೇಷ ಅನುಮತಿ ಪಡೆಯಬೇಕು. ಅದರಂತೆ ಒಬ್ಬ ಮಾಲೀಕ ಅಥವಾ ಚಾಲಕ ಉದಾಹರಣೆಗೆ ದೂರದ ಬೆಳಗಾವಿಯಿಂದ ಪಕ್ಕದ ಮಹಾರಾಷ್ಟ್ರಕ್ಕೆ ಸಂಚಾರ ಮಾಡಬೇಕಿದ್ರು, ಬೆಂಗಳೂರಿನ ಕೇಂದ್ರ ಕಚೇರಿಯ ಕರ್ನಾಟಕ ಸಾರಿಗೆ ಅಥಾರಿಟಿಗೆ ಬಂದು ಕಾದು ಪರ್ಮಿಟ್ ಪಡೆದು, ಆ ಬಳಿಕ ರಾಜ್ಯ ಗಡಿ ದಾಟಬೇಕಿತ್ತು. ಜೊತೆಗೆ ಪರ್ಮಿಟ್ ನೀಡುವ ವಿಚಾರದಲ್ಲಿ ಕೆಲವು ಕಡೆ ಲಂಚ ಕೊಡಬೇಕೆಂಬ ಆರೋಪವೂ ಇತ್ತು. ಸದ್ಯ ಈಗ ಇವೆಲ್ಲದಕ್ಕೂ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಾರಿಗೆ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಇದನ್ನೂ ಓದಿ: 9 ವಿಶ್ವವಿದ್ಯಾಲಯಗಳ ಸ್ಥಗಿತ ವಿಚಾರ – ರಾಜ್ಯಪಾಲರ ಮಧ್ಯಪ್ರವೇಶ ಒತ್ತಾಯಿಸಿ ಬಿಜೆಪಿ ದೂರು
ವಾಹನ್-4 ಆ್ಯಪ್ ಮೂಲಕ ಮಾಲೀಕ ತನ್ನ ವಾಹನದ ಮಾಹಿತಿಯನ್ನ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ರೆ, ಕೆಲವೇ ಸೆಕೆಂಡುಗಳಲ್ಲಿ ಪರಿಶೀಲನೆ ಮಾಡಿ, ದಾಖಲಾತಿ ಸರಿಯಿದ್ದಲ್ಲಿ ಹತ್ತೇ ಸೆಕೆಂಡುಗಳಲ್ಲಿ ನಿಮಗೆ ಪರ್ಮಿಟ್ ಸಿಗಲಿದೆ. ಇನ್ನೂ ಇದಕ್ಕೆ ತಗುಲುವ ಸಂಪೂರ್ಣ ವೆಚ್ಚ 2000 ರೂಪಾಯಿಗಳು ಮಾತ್ರ. ಈ ಹಿಂದೆ ಅಧಿಕಾರಿಗಳ ಜೊತೆ ನೇರ ಪರ್ಮಿಷನ್ ಪಡೆಯುವ ಸಂಧರ್ಭಗಳಲ್ಲಿ ಪರ್ಮಿಟ್‌ಗೆ 1,000 ರೂ. ವರೆಗೆ ಖರ್ಚು ಬೀಳುತ್ತಿತ್ತು. ಸದ್ಯ ಆರ್‌ಟಿಓ ಹೊಸ ಯೋಜನೆಯಿಂದ ಯೆಲ್ಲೋ ಬೋರ್ಡ್ ವಾಹನ ಮಾಲೀಕರಿಗೆ ಸಮಯದ ಜೊತೆ ದುಡ್ಡು ಕೂಡ ಉಳಿತಾಯವಾಗಲಿದೆ.
ಈ ಸಂಬಂಧ ಕಳೆದ ಹಲವು ವರ್ಷಗಳಿಂದ ಖಾಸಗಿ ಸಾರಿಗೆ ಒಕ್ಕೂಟ ಕೂಡ ಹೋರಾಟ ಮಾಡಿತ್ತು. ಸದ್ಯ ಈಗ ಸಂಘಟನೆಗಳ ಹೋರಾಟಕ್ಕೂ ಜಯ ಸಿಗುವ ಜೊತೆಗೆ ಸಾವಿರಾರು ಯೆಲ್ಲೋ ಬೋರ್ಡ್ ಮಾಲೀಕರಿಗೂ ಅನೂಕೂಲವಾಗಲಿದೆ. ಸದ್ಯ ಇದೇ ವಾರದಿಂದ ಸಂಪೂರ್ಣ ಪ್ರಕ್ರಿಯೆ ಜಾರಿಯಾಗಲಿದೆ. ಇದನ್ನೂ ಓದಿ: ನಮ್ಮ ನಾಯಕರು ಬೆದರಿಕೆ ಹಾಕುವುದನ್ನು ನಿಲ್ಲಿಸಬೇಕು – ನಿನ್ನೆ ಸಮರ್ಥನೆ, ಇಂದು ರಮ್ಯಾ ಆಕ್ಷೇಪ