ಫ್ರೀ ಬಸ್ ಟಿಕೆಟ್ ಪಡೆಯುವ ಮಹಿಳೆಯರಿಗೆ ಗುಡ್‍ನ್ಯೂಸ್

Public TV
1 Min Read
FREE BUS TICKET 1

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಭಾನುವಾರವಷ್ಟೇ ಚಾಲನೆ ದೊರಕಿದೆ. ಈ ಮಧ್ಯೆ ಕೆಲ ಮಹಿಳೆಯರು ದಾಖಲೆ ತರದೇ ಪರದಾಡಿದ ಪ್ರಸಂಗ ಇಂದು ನಡೆದಿದೆ. ಹೀಗಾಗಿ ಸರ್ಕಾರ ಮತ್ತೆ ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದೆ.

ಸಾರಿಗೆ ಬಸ್‍ನಲ್ಲಿ ಉಚಿತ ಪ್ರಯಾಣ (Free Bus Ticket For Women) ಮಾಡುವಾಗ ಮೂಲ ದಾಖಲೆಯನ್ನೇ ಕೈಯಲ್ಲಿ ಹಿಡಿದು ಓಡಾಡಬೇಕಾಗಿಲ್ಲ. ಡಿಜಿಲಾಕರ್, ಝೆರಾಕ್ಸ್, ಪ್ರತಿಯನ್ನು ತೋರಿಸಬಹುದು ಎಂಬ ಮಾಹಿತಿ ಲಭ್ಯವಾಗಿದೆ.

ಮೂಲ ದಾಖಲೆಯ ಮಾರ್ಗಸೂಚಿಗೆ ಮಾರ್ಪಾಡು ಮಾಡಿ ನಕಲು ಪ್ರತಿ ಹಾಗೂ ಮೊಬೈಲ್‍ನಲ್ಲಿ ಡಿಜಿಲಾಕರ್ ಹಾರ್ಡ್ ಅಥವಾ ಸಾಪ್ಟ್ ಕಾಫಿ ತೋರಿಸಿಯೂ ಬಸ್‍ನಲ್ಲಿ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ನಮಗೆ ಎಷ್ಟೇ ಕಷ್ಟ ಬರಲಿ 5 ಗ್ಯಾರಂಟಿ ಈಡೇರಿಸುತ್ತೇವೆ: ಸಿದ್ದರಾಮಯ್ಯ ಶಪಥ

ದಾಖಲೆ ತರದೆ ಗೊಂದಲಕ್ಕೀಡಾಗಿ ಅಜ್ಜಿಯೊಬ್ಬರು ಕಣ್ಣೀರು ಹಾಕಿದ ಘಟನೆ ಇಂದು ಉಡುಪಿ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಮಹಿಳೆ ಉಡುಪಿಯಿಂದ ಶಿವಮೊಗ್ಗ ತೆರಳಬೇಕಾಗಿತ್ತು. ಆದರೆ ದಾಖಲೆ ಇಲ್ಲದೆ ಬಸ್ ಪ್ರಯಾಣ ಅಸಾಧ್ಯ ಎಂದ ಬಸ್ ಕಂಡಕ್ಟರ್ ಹೇಳಿದ್ದಾರೆ. ಹೀಗಾಗಿ ಇತ್ತ ದಾಖಲೆಯೂ ತರದೆ, ಹಣವು ಇಲ್ಲದೇ ಕಣ್ಣೀರು ಹಾಕಿದ್ದಾರೆ. ಬಳಿಕ ಮಾನವೀಯತೆ ದೃಷ್ಟಿಯಿಂದ ಸಹ ಪ್ರಯಾಣಿಕ ಶಿವಮೊಗ್ಗ ಟಿಕೆಟ್ ಮಾಡಿಕೊಟ್ಟರು.

Share This Article