ಬೆಂಗಳೂರು: ನಗರದಲ್ಲಿ ಜನರಿಂದ ತುಂಬಿ ತುಳುಕುವ ಮೆಟ್ರೋದಲ್ಲಿ ಕೂಡ ಮಹಿಳೆಯರು ಸಂಚರಿಸಲು ಒಂದು ಕ್ಷಣ ಯೋಚನೆ ಮಾಡುತ್ತಾರೆ. ಆದ್ರೆ ಇನ್ಮುಂದೆ ಈ ರೀತಿಯ ಯಾವುದೇ ತೊಂದರೆಗಳ ಬಗ್ಗೆ ಚಿಂತೆ ಮಾಡಬೇಕಿಲ್ಲ.
ಹೌದು. ಯಾಕಂದ್ರೆ ಇಂದು ಬಿಇಎಂಎಲ್ ನಿಂದ ‘ನಮ್ಮ ಮೆಟ್ರೋ’ಗೆ 6 ಬೋಗಿಗಳ ಮೆಟ್ರೋ ಟ್ರೈನ್ ಹಸ್ತಾಂತರ ಆಗಲಿದೆ. 6 ಬೋಗಿಗಳಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಇಂದು ಪ್ರಾಯೋಗಿಕವಾಗಿ ಒಂದು ಟ್ರೈನ್ ಹಸ್ತಾಂತರ ಮಾಡಲಿದ್ದು, ಮೊದಲ 2 ತಿಂಗಳು 6 ಬೋಗಿಗಳ ಮೆಟ್ರೋ ಪ್ರಾಯೋಗಿಕವಾಗಿ ಸಂಚಾರ ಮಾಡಲಿದೆ.
Advertisement
ರಾತ್ರಿ 11 ರಿಂದ ಬೆಳಗ್ಗೆ 5 ಗಂಟೆಯವರೆಗೆ ಬೈಯಪ್ಪನಹಳ್ಳಿಯಿಂದ ನಾಯಂಡಹಳ್ಳಿ ಮತ್ತು ಯಲೇಚೇನಹಳ್ಳಿಯಿಂದ ನಾಗಸಂದ್ರದವರೆಗೆ ಮೆಟ್ರೋ ಪ್ರಾಯೋಗಿಕ ಸಂಚಾರ ನಡೆಸಲಿದೆ. ಪ್ರಾಯೋಗಿಕ ಸಂಚಾರ ಯಶಸ್ವಿಯಾದ್ರೆ ಏಪ್ರಿಲ್ನಿಂದ 6 ಬೋಗಿಗಳ ಮೆಟ್ರೋ ಸಂಚಾರ ಆರಂಭವಾಗಲಿದೆ.