ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸುಸ್ತಾಗಿರುವ ವಾಹನ ಸವಾರರಿಗೆ ಬೆಸ್ಕಾಂ ಗುಡ್ ನ್ಯೂಸ್ ಕೊಡುತ್ತಿದೆ.
ಹೌದು. ವಾಹನ ಸವಾರರಿಗೆ ಬೆಸ್ಕಾಂ ಸಂಜೀವಿನಿ ನೀಡಿದೆ. ಕಡಿಮೆ ದರದಲ್ಲಿ ವಿದ್ಯುತ್ ವಾಹನಗಳಿಗೆ ಚಾರ್ಜಿಂಗ್ ಮಾಡುವ ಕೇಂದ್ರಗಳಿಗೆ ಚಾಲನೆ ನೀಡಿದೆ. ನೂತನ ಚಾರ್ಜಿಂಗ್ ಕೇಂದ್ರಗಳಿಗೆ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ.
ಬೈಕ್ ಮತ್ತು ಕಾರ್ ಗಳಿಗೆ ಚಾರ್ಜಿಂಗ್ ಕೇಂದ್ರದ ಮೂಲಕ ಚಾರ್ಜ್ ಮಾಡಲಾಗುತ್ತದೆ. ಬೆಂಗಳೂರಿನಲ್ಲಿ 14 ಕಡೆ ಚಾರ್ಜಿಂಗ್ ಸ್ಟೇಷನ್ ಗಳ ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಬೆಸ್ಕಾಂ ಕೇಂದ್ರ ಕಚೇರಿ, ವಿಧಾನಸೌಧ ಹಾಗೂ ಕೆಇಆರ್ ಸಿ ಕಚೇರಿಯಲ್ಲಿ ಈ ವ್ಯವಸ್ಥೆ ಇರಲಿದೆ. ಪ್ರತಿ ಯೂನಿಟ್ ಚಾರ್ಜ್ ಗೆ 4 ರೂಪಾಯಿ 85 ಪೈಸೆ ನಿಗದಿ ಪಡಿಸಿದ್ದು, ಕಿಲೋ ವ್ಯಾಟ್ ಗೆ 50 ರೂಪಾಯಿ ಆಗಲಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಅವರು ಹೇಳಿದ್ದಾರೆ.
ಚಾರ್ಜಿಂಗ್ ಹೇಗೆ..?
* ಎರಡು ಹಂತದಲ್ಲಿ ಚಾರ್ಜಿಂಗ್ ವ್ಯವಸ್ಥೆ
1- ಡಿಸಿ ಫಾಸ್ಟ್ ಚಾರ್ಜಿಂಗ್
2- ಎಸಿ ಸ್ಲೋ ಚಾರ್ಜಿಂಗ್
* ಪೂರ್ತಿ ಚಾರ್ಜ್ ಆಗಲು 90 ನಿಮಿಷ ಬೇಕಾಗಿದ್ದು 15 ಕಿಲೋ ವ್ಯಾಟ್ ವಿದ್ಯುತ್.
* ಪೂರ್ತಿ ಚಾರ್ಜ್ ಗೆ 6-7 ಗಂಟೆ. 3.3 ಕಿಲೋ ವ್ಯಾಟ್ ವಿದ್ಯುತ್.
* ಎಸಿ ರಹಿತ ವಾಹನ 120 ಕಿಲೋ ಮೀಟರ್ ಬಳಸಬಹುದು.
* ಎಸಿ ಸಹಿತ 100 ಕಿಲೋಮೀಟರ್ ದೂರ ಬಳಸಬಹುದು.
ಹೀಗಾಗಿ ಜನರು ವಿದ್ಯುತ್ ಚಾರ್ಜಿಂಗ್ ವಾಹನ ಬಳಕೆ ಮಾಡಿದರೆ ಹಣವನ್ನು ಉಳಿಸಬಹುದು ಜೊತೆಗೆ ಮಾಲಿನ್ಯವನ್ನ ತಡೆಯಬಹುದು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews