ಅಮರಾವತಿ: ತಿರುಪತಿಗೆ (Tirupati) ತೆರಳುವ ಕರ್ನಾಟಕದ (Karnataka) ಭಕ್ತರಿಗೆ ಮುಜರಾಯಿ ಇಲಾಖೆ (Muzrai Department) ಗುಡ್ ನ್ಯೂಸ್ ನೀಡಿದೆ. ತಿರುಮಲದಲ್ಲಿ ನಿರ್ಮಿಸಿರುವ ಕಲ್ಯಾಣ ಮಂಟಪ ಇಂದಿನಿಂದ ಸೇವೆಗೆ ಸಿದ್ಧವಾಗಿದೆ. ತಿರುಮಲ ಕಲ್ಯಾಣ ಮಂಟಪದಲ್ಲಿ ಕರ್ನಾಟಕದ ಜೋಡಿಯ ಮೊದಲ ಮದುವೆ (Marriage) ಆಗುತ್ತಿದೆ. ಈಗಾಗಲೇ ಎಂಟು ಮದುವೆಗಳು ಬುಕ್ ಆಗಿವೆ.
ಮುಜರಾಯಿ ಇಲಾಖೆಯಿಂದ ತಿರುಪತಿಗೆ ತೆರಳುವ ಕರ್ನಾಟಕ ರಾಜ್ಯದ ಭಕ್ತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಳೆದ ತಿಂಗಳು ತಿರುಮಲದಲ್ಲಿ ರಾಜ್ಯ ಮುಜರಾಯಿ ಇಲಾಖೆ ಕಲ್ಯಾಣ ಮಂಟಪ ಉದ್ಘಾಟನೆ ಮಾಡಿತ್ತು. ಈಗ ಈ ಕಲ್ಯಾಣ ಮಂಟಪದಲ್ಲಿ ಮೊದಲ ಮದುವೆ ಇಂದು ನಡೆಯುತ್ತಿದೆ. ಕರ್ನಾಟಕ ರಾಜ್ಯದ ಜೋಡಿಗಳ ಮೊದಲ ಮದುವೆ ನಡೆಯುತ್ತಿದ್ದು. ತಿರುಮಲ ಕಲ್ಯಾಣ ಮಂಟಪದಲ್ಲಿ ಮದುವೆಗಾಗಿ ರಾಜ್ಯದ ವಿವಿಧ ಜಿಲ್ಲೆಯ 8 ಜೋಡಿ ಮದುವೆಗೆ ಬುಕ್ಕಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ತಾಯಿಗೆ ಬೆಂಕಿ – ಶವದ ಪಕ್ಕವೇ ಮಲಗಿದ್ದ ಪುತ್ರ ಅರೆಸ್ಟ್
ಇನ್ನೂ ನೂತನವಾಗಿ ಇರುವ ಕಲ್ಯಾಣ ಮಂಟಪದಲ್ಲಿ 36 ಕೊಠಡಿಗಳು ಇದ್ದು, 500 ಆಸನದ ವ್ಯವಸ್ಥೆ ಇದೆ. ಒಂದು ಮದುವೆಗೆ ಜಿಎಸ್‌ಟಿ ಸೇರಿಸಿ ಮೂರುವರೆ ಲಕ್ಷ ರೂ. ಆಗಲಿದೆ. ಸದ್ಯಕ್ಕೆ ಕಲ್ಯಾಣ ಮಂಟಪಕ್ಕೆ ತೆರಳಿ ಬುಕ್ಕಿಂಗ್ ಮಾಡುತ್ತಿದ್ದು, ಶೀಘ್ರದಲ್ಲೇ ಆನ್‌ಲೈನ್ ವ್ಯವಸ್ಥೆ ಕೂಡ ಜಾರಿ ಮಾಡಲಿದ್ದಾರೆ. ಇದನ್ನೂ ಓದಿ: ಖಾಸಗಿ ಅಂಬುಲೆನ್ಸ್‌ಗಳಿಗೆ ಶಾಕ್ ಕೊಟ್ಟ ಸರ್ಕಾರ- KPME ನಡಿ ಲೈಸೆನ್ಸ್ ಕಡ್ಡಾಯ
ಒಟ್ಟಾರೆ ತಿರುಪತಿಗೆ ತೆರಳೋ ಕರ್ನಾಟಕ ಭಕ್ತರು ತಿರುಪತಿಯಲ್ಲೆ ಮದುವೆ ಮಾಡಬೇಕು ಎಂಬ ಇಚ್ಛೆ ಇದ್ದರೆ ಮುಜರಾಯಿ ಇಲಾಖೆ ಅವಕಾಶ ಕಲ್ಪಿಸಿದೆ. ಬುಕ್ಕಿಂಗ್ ಮಾಡಿ ತಿರುಮಲದಲ್ಲಿ ಮದುವೆ ಆಗಬಹುದು. ಇದನ್ನೂ ಓದಿ: ಸೇನಾ ವಾಹನದ ಮೇಲೆ ಬಿದ್ದ ಬಂಡೆ – ಇಬ್ಬರು ಯೋಧರು ಸಾವು