BBMP ವ್ಯಾಪ್ತಿಯ 110 ಹಳ್ಳಿ ನಿವಾಸಿಗಳಿಗೆ ಗುಡ್‌ನ್ಯೂಸ್; ದಸರಾ ಮುಗಿದ ಬೆನ್ನಲ್ಲೇ ಹರಿಯಲಿದೆ ಕಾವೇರಿ

Public TV
1 Min Read
Siddaramaiah govt hikes drinking water Tax BWSSB

ಬೆಂಗಳೂರು: ಹತ್ತಾರು ವರ್ಷಗಳಿಂದ ಕಾವೇರಿ ನೀರಿಗಾಗಿ (Bengaluru) ಕಾದು ಕುಳಿತಿದ್ದ ಬೆಂಗಳೂರು ಹೊರವಲಯದ ಜನಕ್ಕೆ ಕೊನೆಗೂ ಗುಡ್ ನ್ಯೂಸ್ ಸಿಕ್ಕಿದೆ. ಬಿಬಿಎಂಪಿ (BBMP) ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ಹರಿಯಲು ಮೂಹೂರ್ತ ಫಿಕ್ಸ್ ಆಗಿದೆ.

BWSSB WATER

ಹೌದು. ಇದೇ ಅಕ್ಟೋಬರ್‌ 16ರಂದು ಕಾವೇರಿ 5ನೇ ಹಂತದ ಯೋಜನೆಗೆ ಚಾಲನೆ ಸಿಗಲಿದ್ದು, ಬೆಂಗಳೂರು ಹೊರವಲಯದ ಹಳ್ಳಿ ನಿವಾಸಿಗಳ ಬಹುದಿನಗಳ ಕನಸು ನನಸಾಗಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ದಸರಾ ಉತ್ಸವ ಮುಗಿದ ಬಳಿಕ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಕಾವೇರಿ ನೀರು ಹರಿಯಲಿದೆ. ಇದನ್ನೂ ಓದಿ: ಉದ್ಯಮಿ ಮುಮ್ತಾಜ್‌ ಅಲಿ ಸಾವು ಪ್ರಕರಣ – ಆರೋಪಿ ಮಹಿಳೆ ಬಂಧನ

Water

2019 ರಲ್ಲಿ ಕಾವೇರಿ 5ನೇ ಹಂತ ಯೋಜನೆ ಕಾಮಗಾರಿ ಆರಂಭ ಮಾಡಿದ್ದ ಜಲಮಂಡಳಿ, ಇದೀಗ ಸುಮಾರು 5,500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕಾಮಗಾರಿ ಮುಗಿಸಿದೆ. ಅ.16ರಂದು ಟಿಕೆ ಹಳ್ಳಿಯ ಜಲಮಂಡಳಿ ಆವರಣದಲ್ಲಿ ಸಿಎಂ, ಡಿಸಿಎಂ ಕಾವೇರಿ 5ನೇ ಹಂತ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದನ್ನೂ ಓದಿ: ಕಳೆಗಟ್ಟಿದ ಚೆಲುವ ಚಾಮರಾಜನಗರ ದಸರಾ ಮಹೋತ್ಸವ – ಗಡಿನಾಡ ಜನತೆಯ ಕಣ್ಮನ ಸೆಳೆದ ಫಲಪುಷ್ಪ ಪ್ರದರ್ಶನ

ಈಗಾಗಲೇ ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳ ವ್ಯಾಪ್ತಿಯಲ್ಲಿ ಒಟ್ಟು 5 ಲಕ್ಷ ಸಂಪರ್ಕ ನೀಡಲು ಉದ್ದೇಶಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ನಿವಾಸಿಗಳು ನೀರಿನ ಸಂಪರ್ಕ ಹೊಂದಿದ್ದಾರೆ. ಮೊದಲ ಹಂತದಲ್ಲಿ 170 MLD ನೀರು ಪೂರೈಕೆಯಾಗಲಿದ್ದು, ಉಳಿದ ನೀರನ್ನು ಹಂತಹಂತವಾಗಿ ಪೂರೈಸಲು ಜಲ ಮಂಡಳಿ ನಿರ್ಧರಿಸಿದೆ. ಯಶವಂತಪುರ, ದಾಸರಹಳ್ಳಿ, ಬೊಮ್ಮನಹಳ್ಳಿ, ಮಹಾದೇವಪುರ, ಆರ್.ಆರ್ ನಗರ ವಿಧಾನಸಭಾ ಕ್ಷೇತ್ರದ ಹಳ್ಳಿಗಳಿಗೆ ಕಾವೇರಿ ನೀರು ಹರಿಯಲಿದೆ. ಇದನ್ನೂ ಓದಿ: `ಅಹಿಂದ’ ನಾಯಕರ ಡಿನ್ನರ್‌ ಮೀಟಿಂಗ್‌ – ರಾಜ್ಯ ರಾಜಕೀಯದಲ್ಲಿ ಸಂಚಲನ

Share This Article