Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಜ್ಯದ ಕೈಗಾರಿಕೆಗಳಿಗೆ ಸಿಹಿ ಸುದ್ದಿ| ಭೂಮಿ ಬಳಕೆಗೆ ಇದ್ದ ಹಲವು ನಿರ್ಬಂಧ ಸಡಿಲ – ಹಿಂದೆ ಎಷ್ಟು? ಈಗ ಏನು ಬದಲಾವಣೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bagalkot | ರಾಜ್ಯದ ಕೈಗಾರಿಕೆಗಳಿಗೆ ಸಿಹಿ ಸುದ್ದಿ| ಭೂಮಿ ಬಳಕೆಗೆ ಇದ್ದ ಹಲವು ನಿರ್ಬಂಧ ಸಡಿಲ – ಹಿಂದೆ ಎಷ್ಟು? ಈಗ ಏನು ಬದಲಾವಣೆ?

Bagalkot

ರಾಜ್ಯದ ಕೈಗಾರಿಕೆಗಳಿಗೆ ಸಿಹಿ ಸುದ್ದಿ| ಭೂಮಿ ಬಳಕೆಗೆ ಇದ್ದ ಹಲವು ನಿರ್ಬಂಧ ಸಡಿಲ – ಹಿಂದೆ ಎಷ್ಟು? ಈಗ ಏನು ಬದಲಾವಣೆ?

Public TV
Last updated: February 12, 2026 7:25 pm
Public TV
Share
4 Min Read
industrial township
SHARE

– ಎಫ್ಎಆರ್ ನಿರ್ಬಂಧ ಸಡಿಲ, ಕೈಗಾರಿಕಾ ಚಟುವಟಿಕೆಗೆ ಆನೆಬಲ
– ಕಟ್ಟಡದ ನಾಲ್ಕೂ ಬದಿಗಳಲ್ಲಿ ಬಿಡಬೇಕಾದ ಸೆಟ್ ಬ್ಯಾಕ್ ಜಾಗದ ಪ್ರಮಾಣ ಇಳಿಕೆ
– ಉದ್ಯೋಗಿಗಳ ವಸತಿ ಸೌಕರ್ಯ, ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಗೂ ಅವಕಾಶ

ಬೆಂಗಳೂರು: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಯು ಮಹತ್ತ್ವದ ಸುಧಾರಣಾ ಕ್ರಮದಲ್ಲಿ ಕೈಗಾರಿಕಾ ನಿವೇಶನಗಳಲ್ಲಿ (Industrial Site) ಮಹಡಿ ವಿಸ್ತೀರ್ಣ ಅನುಪಾತ (FAR= ಫ್ಲೋರ್ ಏರಿಯಾ ರೇಶಿಯೋ)ವನ್ನು ಕೈಗಾರಿಕಾ ಸ್ನೇಹಿಯಾಗಿ ಮಾರ್ಪಡಿಸಿದೆ. ಈ ಸಂಬಂಧ ಅಧಿಕೃತ ಆದೇಶ ಹೊರಡಿಸಲಾಗಿದೆ. ಸರಕಾರದ ಈ ಕ್ರಮದಿಂದ ಕೆಐಎಡಿಬಿ ಅಭಿವೃದ್ಧಿಪಡಿಸಿರುವ ಕೈಗಾರಿಕಾ ಪ್ರದೇಶಗಳ ಪರಿಸರದಲ್ಲಿ ಉದ್ಯಮ ಮತ್ತು ವಸತಿ ಉದ್ದೇಶದ ರಿಯಲ್ ಎಸ್ಟೇಟ್ ಚಟುವಟಿಕೆಗಳು ಗರಿಗೆದರಲಿವೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್‌ (MB Patil) ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಅವರು, ಇದುವರೆಗೂ ಕೈಗಾರಿಕಾ ನಿವೇಶನಗಳಲ್ಲಿ ಶೇ.65 ರಷ್ಟು ಭೂಮಿಯನ್ನು ಮಾತ್ರ ಉದ್ಯಮದ ಕಟ್ಟಡ ನಿರ್ಮಾಣಕ್ಕೆ ಬಳಸಿಕೊಳ್ಳಲು ಅವಕಾಶವಿತ್ತು. ಈಗ ಇದನ್ನು ಶೇ.75%ಕ್ಕೆ ಹೆಚ್ಚಿಸಿದ್ದೇವೆ. ಸರಕಾರದ ಈ ಕ್ರಮ ಚಾರಿತ್ರಿಕವಾಗಿದ್ದು, ಕೈಗಾರಿಕೆಗಳಿಗೋಸ್ಕರ ಹೆಚ್ಚು ಹೆಚ್ಚು ಜಮೀನು/ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವುದು ತಪ್ಪಲಿದೆ. ಇದರ ಫಲವಾಗಿ, ಉದ್ಯಮಿಗಳು ತಮ್ಮ ಕೈಗಾರಿಕೆಗಳನ್ನು ಸ್ಥಾಪಿಸಲು ಬೇಕಾದ ಭೂಮಿಗೆಂದೇ ವಿಪರೀತ ಹಣ ಹಾಕಬೇಕಾಗಿದ್ದ ಹೊರೆ ಇಳಿಯಲಿದೆ. ಇನ್ನೊಂದೆಡೆಯಲ್ಲಿ ರೈತರ ಜಮೀನು ಕೂಡ ಹೆಚ್ಚಾಗಿ ಅವರಲ್ಲೇ ಉಳಿಯಲಿದೆ. ಇದು ಸುಲಲಿತ ವಹಿವಾಟು ಸಂಸ್ಕೃತಿಗೆ ನಿದರ್ಶನವಾಗಿದೆ ಎಂದಿದ್ದಾರೆ.

ಇದುವರೆಗೂ ಇದ್ದ ಹಳೆಯ ಎಫ್ಎಆರ್ ಪ್ರಮಾಣದಲ್ಲಿ ಹೂಡಿಕೆದಾರರಿಗೆ ಅನೇಕ ಅಡಚಣೆಗಳಿದ್ದವು. ಉದಾಹರಣೆಗೆ ಒಂದು ಉದ್ಯಮಕ್ಕೆ 10 ಎಕರೆ ಜಾಗ ಕೊಟ್ಟರೆ ಅದರಲ್ಲಿ ಆರೂವರೆ ಎಕರೆಯನ್ನು ಮಾತ್ರ ಅವರು ಬಳಸಿಕೊಳ್ಳಬಹುದಿತ್ತು. ಉಳಿದ ಜಾಗವನ್ನು ಮೇಲ್ಮೈ ಪಾರ್ಕಿಂಗ್, ಕಟ್ಟಡದ ನಾಲ್ಕೂ ಬದಿಗಳಲ್ಲಿ ಸೆಟ್ ಬ್ಯಾಕ್ ಇತ್ಯಾದಿ ಉದ್ದೇಶಗಳಿಗೆಂದು ಸಾಕಷ್ಟು ಜಾಗ ಬಿಡಬೇಕಿತ್ತು. ಈಗ ಇದನ್ನು ಗಮನಾರ್ಹವಾಗಿ ತಗ್ಗಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.  ಇದನ್ನೂ ಓದಿ: 37,000 ಕೋಟಿ ಹಣ ಬಾಕಿ – ಮಾ.5 ರಂದು ಬೆಂಗಳೂರಲ್ಲಿ ಬೃಹತ್‌ ಪ್ರತಿಭಟನೆಗೆ ಗುತ್ತಿಗೆದಾರರ ಸಂಘ ಕರೆ

ಇದುವರೆಗೂ 7 ಮೀ. ಎತ್ತರದ ಕೈಗಾರಿಕಾ ಕಟ್ಟಡಗಳಲ್ಲಿ ಸೆಟ್-ಬ್ಯಾಕ್ ಉದ್ದೇಶಕ್ಕೆ ಮುಂಭಾಗದಲ್ಲಿ 1.5 ಮೀ, ಹಿಂಭಾಗ, ಎಡ ಮತ್ತು ಬಲ ಬದಿಗಳಲ್ಲಿ ತಲಾ 1 ಮೀ. ಜಾಗ ಬಿಡಬೇಕಿತ್ತು. ಇನ್ನು ಮುಂದೆ ಮುಂಭಾಗದಲ್ಲಿ 1.5 ಮೀ. ಮತ್ತು ಯಾವುದಾದರೂ ಒಂದು ಪಾರ್ಶ್ವದಲ್ಲಿ (ಎಡ/ಬಲ) 1 ಮೀ. ಬಿಟ್ಟರೆ ಸಾಕು. ಇದೇ ರೀತಿಯಲ್ಲಿ 15 ಮೀ. ಎತ್ತರದ ಕಟ್ಟಡಗಳಿಗೆ ಮುಂಬದಿಯಲ್ಲಿ ಇದುವರೆಗೆ 3 ರಿಂದ 10 ಮೀ. ಮತ್ತು ಉಳಿದ ಮೂರು ಕಡೆಗಳಲ್ಲಿ 1.5 ಮೀ.ನಿಂದ 8 ಮೀ.ವರೆಗೆ ಜಾಗವನ್ನು ಖಾಲಿ ಬಿಡಬೇಕಿತ್ತು. ಈಗ ಇದನ್ನು ಕ್ರಮವಾಗಿ 2 ರಿಂದ 6 ಮೀ. ಮತ್ತು 1.5 ಮೀ.ನಿಂದ 6 ಮೀ.ಗೆ ಇಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಹಳೆಯ ನಿಯಮಾವಳಿಗಳಲ್ಲಿ ಉದ್ಯೋಗಿಗಳ ವಸತಿ ಸೌಕರ್ಯ ಮತ್ತು ಕೈಗಾರಿಕಾ ಟೌನ್ ಶಿಪ್ ಅಭಿವೃದ್ಧಿಯನ್ನು ನಿರ್ಬಂಧಿಸಲಾಗಿತ್ತು. ಪರಿಷ್ಕೃತ ಎಫ್.ಎ.ಆರ್. ಅಡಿಯಲ್ಲಿ ಸಾಮಾನ್ಯ ಕೈಗಾರಿಕಾ ಪ್ಲಾಟ್ ಗಳಲ್ಲಿ ಶೇ.15ರಷ್ಟು ಪ್ರದೇಶದಲ್ಲಿ ವಸತಿ ಸೌಕರ್ಯ ಕಲ್ಪಿಸಲು ಮತ್ತು ಕನಿಷ್ಠ 50 ಎಕರೆ ವಿಸ್ತೀರ್ಣದ ಕೈಗಾರಿಕಾ ಪ್ಲಾಟ್ ಗಳಲ್ಲಿ ಶೇ.10ರಷ್ಟು ಪ್ರದೇಶದಲ್ಲಿ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಕೊಡಲಾಗುವುದು. ಹಾಗೆಯೇ ವಾಹನಗಳ ನಿಲುಗಡೆಗೆ ಈಗ ಸಾಮಾನ್ಯ ಕೈಗಾರಿಕೆಗಳಿರುವ ನಿವೇಶನಗಳಲ್ಲಿ ಮತ್ತು ಡೇಟಾ ಸೆಂಟರುಗಳಲ್ಲಿ ಶೇ.2ರಷ್ಟು ಮತ್ತು ವೇರ್-ಹೌಸಿಂಗ್ ಹಾಗೂ ಲಾಜಿಸ್ಟಿಕ್ಸ್ ಉದ್ಯಮಗಳಲ್ಲಿ ಶೇ.3ರಷ್ಟು ಜಾಗವನ್ನು ಮಾತ್ರ ಮೀಸಲಿಟ್ಟರೆ ಸಾಕು ಎಂದು ಅವರು ವಿವರಿಸಿದ್ದಾರೆ.

ಕೈಗಾರಿಕೆಗಳಿಗೆ ಭೂಮಿ ಒದಗಿಸುವುದು ಸವಾಲಿನ ಕೆಲಸವಾಗಿದೆ. ಭೂಮಿಯ ಲಭ್ಯತೆ ಕಡಿಮೆ ಇರುವುದು ಇದಕ್ಕೆ ಮುಖ್ಯ ಕಾರಣವಾಗಿದೆ. ಈಗ ಎಫ್ಎಆರ್ ಅನ್ನು ಕೈಗಾರಿಕೆಗಳ ಹಿತವನ್ನು ಗಮನದಲ್ಲಿ ಇಟ್ಟುಕೊಂಡು ಬದಲಿಸಲಾಗಿದೆ. ಇದರಿಂದ ಕೈಗಾರಿಕಾ ಪ್ರದೇಶ ಪರಿಸರಗಳ ಲಂಬ ಬೆಳವಣಿಗೆಗೆ (ವರ್ಟಿಕಲ್ ಡೆವಲಪ್ಮೆಂಟ್) ಅವಕಾಶ ಸಿಗಲಿದೆ. ಜತೆಗೆ ಕಡಿಮೆ ಭೂಮಿಯಲ್ಲೇ ಉದ್ಯಮಗಳ ನಿರ್ಮಾಣ, ಆರ್ಥಿಕ ಪ್ರಗತಿ ಮತ್ತು ಗರಿಷ್ಠ ಉದ್ಯೋಗಸೃಷ್ಟಿಯ ಸಾಧನೆಗಳನ್ನು ಮಾಡಬಹುದು ಎಂದು ಅವರು ವಿವರಿಸಿದ್ದಾರೆ.

ಕೆಐಎಡಿಬಿ(KIADB) ರಾಜ್ಯದ ಹಲವೆಡೆಗಳಲ್ಲಿ ಸಾವಿರಾರು ಎಕರೆ ಪ್ರದೇಶಗಳಲ್ಲಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಿದೆ. ಹೊಸ ನಿಯಮದ ಪ್ರಕಾರ, ಪ್ರೀಮಿಯಂ ದರ್ಜೆಯ ಕೈಗಾರಿಕಾ ನಿವೇಶನಗಳಲ್ಲಿ ಎಫ್ಎಆರ್ ಅನ್ನು 5.2ಕ್ಕೆ ಏರಿಸಲಾಗಿದೆ. ಈ ನಿಯಮಗಳು ಕೈಗಾರಿಕಾ ಪ್ರದೇಶಗಳು, ವಿಶೇಷ ಹೂಡಿಕೆ ವಲಯಗಳು (ಎಸ್ಇಆರ್), ಏಕಘಟಕ ಸಂಕೀರ್ಣಗಳು, ಕೈಗಾರಿಕಾ ಪ್ರದೇಶಗಳ ವ್ಯಾಪ್ತಿಯಲ್ಲಿನ ವಸತಿ ಮತ್ತು ವಾಣಿಜ್ಯ ಉದ್ದೇಶದ ಕಟ್ಟಡ ನಿರ್ಮಾಣ ಯೋಜನೆಗಳಿಗೆ ಅನ್ವಯಿಸಲಿವೆ ಎಂದು ಅವರು ತಿಳಿಸಿದ್ದಾರೆ.

ಕೈಗಾರಿಕಾ ಪ್ರದೇಶಗಳಲ್ಲಿರುವ ರಸ್ತೆಗಳ ಅಗಲವನ್ನು ಆಧರಿಸಿ ಎಫ್ಎಆರ್ ಪ್ರಮಾಣವನ್ನು ತೀರ್ಮಾನಿಸಲಾಗುತ್ತದೆ. 30 ಮೀ. ಅಗಲದ ರಸ್ತೆಯ ಆಚೀಚೆ ಇರುವ ಕೈಗಾರಿಕಾ ನಿವೇಶನಗಳಲ್ಲಿ ಈವರೆಗೂ 3.25ರಷ್ಟು ಎಫ್ಎಆರ್ ಗೆ ಮಾತ್ರ ಅವಕಾಶವಿತ್ತು. ಈಗ ಇದನ್ನು 5.2ಕ್ಕೆ ಹೆಚ್ಚಿಸಲಾಗಿದೆ. ಇದೇ ರೀತಿಯಲ್ಲಿ 24ರಿಂದ 30 ಮೀ. ಅಗಲದ ರಸ್ತೆ ಇರುವ ಕಡೆಗಳಲ್ಲಿ ಇದನ್ನು 4.8ಕ್ಕೆ, 18ರಿಂದ 24 ಮೀ. ಅಗಲದ ರಸ್ತೆ ಇರುವೆಡೆಗಳಲ್ಲಿ 4ಕ್ಕೆ ಮತ್ತು 12ರಿಂದ 18 ಮೀ. ಅಗಲದ ರಸ್ತೆ ಇರುವಂತಹ ಜಾಗಗಳಲ್ಲಿ 3.6ಕ್ಕೆ ಏರಿಸಲಾಗಿದೆ. 12 ಮೀ.ಗಿಂತ ಕಡಿಮೆ ಅಗಲವಿರುವ ರಸ್ತೆಗಳು ಇರುವಂತಹ ಕಡೆಗಳಲ್ಲಿ ಎಫ್ಎಆರ್ ಪ್ರಮಾಣವನ್ನು 2.45ರಿಂದ 2.8ರವರೆಗೆ ಪರಿಷ್ಕರಿಸಲಾಗಿದೆ ಎಂದು ಪಾಟೀಲ ನುಡಿದಿದ್ದಾರೆ.

 

ರೈತರಿಗೂ ಲಾಭ
ಪರಿಷ್ಕೃತ ನಿಯಮಗಳಿಂದಾಗಿ ಭೂ ಸ್ವಾಧೀನ ಕಡಿಮೆ ಮಾಡಬಹುದು. ಜತೆಗೆ ಭೂಮಿ ಕಳೆದುಕೊಳ್ಳುವ ಕೆಲವು ರೈತರು ನಗದು ಪರಿಹಾರಕ್ಕೆ ಪರ್ಯಾಯವಾಗಿ ಅಭಿವೃದ್ಧಿಪಡಿಸಿದ ಭೂಮಿಯನ್ನು ಪರಿಹಾರ ರೂಪದಲ್ಲಿ ಪಡೆಯಲಿದ್ದು, ಅಂತಹವರಿಗೂ ಇದರಿಂದ ಹೆಚ್ಚಿನ ಲಾಭವಾಗಲಿದೆ. ಹೆಚ್ಚು ವಿಸ್ತೀರ್ಣದ ಕಟ್ಟಡ ನಿರ್ಮಾಣಕ್ಕೆ ಅವಕಾಶ ಇರುವುದರಿಂದ ಸಹಜವಾಗಿ ರೈತರಿಗೂ ಅನುಕೂಲವಾಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ ವಿವರಿಸುತ್ತಾರೆ.

ವಾಹನ‌ ನಿಲುಗಡೆ ಮೀಸಲು ಜಾಗ ಇಳಿಕೆ
ವಾಹನ ನಿಲುಗಡೆಗೆ ಕಡ್ಡಾಯವಾಗಿ ಬಿಡಬೇಕಿದ್ದ ಜಾಗದ ಪ್ರಮಾಣವನ್ನು ಗಣನೀಯವಾಗಿ ಇಳಿಕೆ ಮಾಡಲಾಗಿದೆ. ಕೈಗಾರಿಕಾ ನಿವೇಶನದ ಒಟ್ಟು ಜಾಗದಲ್ಲಿ ಶೇ.5ರಷ್ಟು ಜಾಗವನ್ನು ಈ ಹಿಂದೆ ವಾಹನ ನಿಲುಗಡೆಗೆ ಮೀಸಲಿಡಬೇಕಿತ್ತು. ಅದರೆ ಈಗ ಅದನ್ನು ಶೇ.3ರಷ್ಟಕ್ಕೆ ಇಳಿಸಿದ್ದು, ಇದರಿಂದ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಪಾಟೀಲ್‌ ವಿವರಿಸಿದರು.

TAGGED:industrykarnatakaKIADBMB Patilಎಂಬಿ ಪಾಟೀಲ್ಕರ್ನಾಟಕಕೆಐಎಡಿಬಿಕೈಗಾರಿಕೆ
Share This Article
Facebook Whatsapp Whatsapp Telegram

Cinema news

rashmika vijay dkshivakumar 1
ವಿಜಯ್, ರಶ್ಮಿಕಾ ಆರತಕ್ಷತೆಗೆ ತೆರಳಿ ಶುಭಕೋರಿದ ಡಿಕೆ ಶಿವಕುಮಾರ್
Cinema Latest Top Stories
honey singh 1
ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಹನಿ ಸಿಂಗ್
Cinema Latest National Top Stories
Toxic
ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?
Bollywood Cinema Latest Main Post Sandalwood
mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories

You Might Also Like

Operation Epic Fury
Latest

`ಆಪರೇಷನ್ ಎಪಿಕ್ ಫ್ಯೂರಿ’ – ಇರಾನ್ ವಿರುದ್ಧದ ಯುದ್ಧಕ್ಕೆ 100 ಗಂಟೆ; ವೀಡಿಯೋ ಹಂಚಿಕೊಂಡ ಯುಎಸ್‌

Public TV
By Public TV
2 minutes ago
crude oil
Latest

ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಆಪತ್ಭಾಂದವ – ಈ ವಾರವೇ 22 ಕೋಟಿ ಲೀಟರ್‌ ತೈಲ ಪೂರೈಕೆ

Public TV
By Public TV
22 minutes ago
indian navy
Latest

ಇರಾನ್‌ ಮೇಲಿನ ದಾಳಿಗೆ ಅಮೆರಿಕವು ಭಾರತೀಯ ನೌಕಾನೆಲೆ ಬಳಸುತ್ತಿದೆ ಅನ್ನೋದು ಶುದ್ಧ ಸುಳ್ಳು – ಎಂಇಎ

Public TV
By Public TV
55 minutes ago
G PARAMESHWAR
Bengaluru City

ನೇಮಕಾತಿಯಲ್ಲಿ ಒಳಮೀಸಲಾತಿ ಗೊಂದಲ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ: ಪರಮೇಶ್ವರ್

Public TV
By Public TV
1 hour ago
doomsday
Latest

ಯುದ್ಧದ ನಡುವೆ ವಿನಾಶಕಾರಿ ʻಡೂಮ್ಸ್‌ಡೇʼ ಕ್ಷಿಪಣಿ ಪರೀಕ್ಷಿಸಿದ ಅಮೆರಿಕ – 3ನೇ ಮಹಾಯುದ್ಧ ಫಿಕ್ಸಾ?

Public TV
By Public TV
1 hour ago
Gadag Tata Ace Accident
Crime

ಕಾಮಣ್ಣನ ಉತ್ಸವ ಮುಗಿಸಿ ಬರುವಾಗ ಮರಕ್ಕೆ ಟಾಟಾ ಏಸ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?