ಬೆಂಗಳೂರು: ಭಾರದ ಶಾಲಾ ಬ್ಯಾಗ್ ಹೊತ್ತುಕೊಂಡು ಹೋಗುವ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಭಾರದ ಶಾಲಾ ಬ್ಯಾಗ್‍ಗಳಿಗೆ ಮಿತಿ ಹೇರಲಾಗಿದ್ದು, ಮಕ್ಕಳಿಗೆ ಕೊಡುವ ಹೋಂ ವರ್ಕ್ ಕಿರಿಕಿರಿಗೂ ನಿಯಂತ್ರಣ ನೀಡಲಾಗಿದೆ. ಶಾಲಾ ಮಕ್ಕಳ ಬ್ಯಾಗ್‍ನ ತೂಕ ಮತ್ತು ಮಕ್ಕಳಿಗೆ ಹೋಂ ವರ್ಕ್ ಕೊಡುವ ಕುರಿತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಲಾಯದಿಂದ ನಿರ್ದೇಶನಗಳ ಪಾಲನೆಗೆ ಸುತ್ತೋಲೆ ಪ್ರಕಟವಾಗಿದೆ. ಎಲ್ಲ ರಾಜ್ಯಗಳ ಶಿಕ್ಷಣ ಇಲಾಖೆಗಳು ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸಲು ಸೂಚನೆ ನೀಡಲಾಗಿದೆ.
Advertisement
Advertisement
ಎಷ್ಟು ಕೆಜಿ ತೂಕ?
1. 1 ಮತ್ತು 2 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ನ ತೂಕ 1.5 ಕೆ.ಜಿ ದಾಟುವಂತಿಲ್ಲ
2. 3 ಮತ್ತು 4 ನೇ ತರಗತಿ ಮಕ್ಕಳ ಸ್ಕೂಲ್ ಬ್ಯಾಗ್ ತೂಕ 2 ರಿಂದ 3 ಕೆ.ಜಿ ಇರಬೇಕು
3. 6 ಮತ್ತು 7 ನೇ ತರಗತಿಗೆ ಮಕ್ಕಳ ಸ್ಕೂಲ್ ಬ್ಯಾಗ್ 4 ಕೆ.ಜಿ ಮಾತ್ರ ಇರಬೇಕು
4. 8 ಮತ್ತು 9 ನೇ ತರಗತಿ ಮಕ್ಕಳಿಗೆ 4.5 ಕೆ.ಜಿ ಶಾಲಾ ಬ್ಯಾಗ್
5. 10 ನೇ ತರಗತಿ ಮಕ್ಕಳಿಗೆ 5 ಕೆ.ಜಿ ತೂಕದ ಸ್ಕೂಲ್ ಬ್ಯಾಗ್
Advertisement
ಸುತ್ತೋಲೆಯಲ್ಲಿ ಏನಿದೆ?1 ಮತ್ತು 2 ನೇ ತರಗತಿ ಮಕ್ಕಳಿಗೆ ಶಿಕ್ಷಕರು ಹೋಂ ವರ್ಕ್ ಕೊಡುವಂತಿಲ್ಲ. ಹೋಂ ವರ್ಕ್ ಕೊಟ್ಟರೂ ಭಾಷೆ ಮತ್ತು ಗಣಿತ ವಿಷಯಗಳಷ್ಟೇ ಕೊಡಬೇಕು. ಮಕ್ಕಳಿಗೆ ಹೆಚ್ಚುವರಿ ಬುಕ್ ಗಳನ್ನು ತರುವಂತೆ ಶಿಕ್ಷಕರು ಒತ್ತಾಯಿಸುವಂತಿಲ್ಲ. ಅಲ್ಲದೇ ಹೆಚ್ಚುವರಿ ಶಾಲಾ ಪರಿಕರಗಳನ್ನು ತರುವಂತೆಯೂ ಬಲವಂತ ಮಾಡಬಾರದು. ಎಲ್ಲ ರಾಜ್ಯಗಳೂ ಈ ನಿರ್ದೇಶನಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಾಕೀತು ಮಾಡಲಾಗಿದೆ.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv