ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳು ಮತ್ತೊಮ್ಮೆ ಶಾಲೆಗೆ ಹೋಗಬಹುದು. ಹೊಸ ವಿದ್ಯಾರ್ಥಿಗಳಾಗಿ ಮತ್ತೆ ಹತ್ತನೇ ತರಗತಿ ಪರೀಕ್ಷೆ ಬರೆಯಬಹುದು ಎಂದು ಎಸ್‌ಎಸ್‌ಎಲ್‌ಸಿ ಬೋರ್ಡ್ ಆದೇಶ ನೀಡಿದೆ.
ಫೇಲ್ ಆದ ವಿದ್ಯಾರ್ಥಿಗಳು ಮತ್ತೊಮ್ಮೆ ಶಾಲೆಗೆ ಹೋಗಿ ಹೊಸ ವಿದ್ಯಾರ್ಥಿಗಳಾಗಿ ಮತ್ತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬಹುದು. ಎಲ್ಲಾ ಮಕ್ಕಳಂತೆ ತರಗತಿಗೆ ಹಾಜರಾಗಬಹುದು ಎಂದು ಬೋರ್ಡ್ ತಿಳಿಸಿದೆ.
Advertisement
ಹೊಸ ವಿದ್ಯಾರ್ಥಿಯಾಗಿ 6 ವಿಷಯಗಳ ಪರೀಕ್ಷೆ ಬರೆಯಬೇಕು. ಹಾಗಾಗಿ ತರಗತಿಗಳಿಗೆ ಹಾಜರಾಗಿ ಪರೀಕ್ಷೆ ಬರೆಯಬಹುದು. ಎಸ್‌ಎಸ್‌ಎಲ್‌ಸಿ ಬೋರ್ಡ್ ನಿಂದ ವಿನೂತನ ಪ್ರಯತ್ನವಾಗಿದ್ದು, ಇದೇ ಮೊದಲ ಬಾರಿಗೆ ಫೇಲ್ ಆದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಎಸ್‌ಎಸ್‌ಎಲ್‌ಸಿ ಬೋರ್ಡ್ ಅವಕಾಶ ನೀಡಿದೆ.