ಬೆಂಗಳೂರು: ಚಾಲೆಂಜಿಂಗ್‍ಸ್ಟಾರ್ ದರ್ಶನ್ ಹಾಗೂ ರೆಬೆಲ್‍ಸ್ಟಾರ್ ಅಂಬರೀಷ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ತೇಲಿಬಂದಿದೆ. ಕರ್ಣನ ಪುತ್ರ ಅಭಿಷೇಕ್ ಹಾಗೂ ಮಾನಸಪುತ್ರ ದಾಸ ದರ್ಶನ್ ಅವರನ್ನು ಒಂದೇ ಸ್ಕ್ರೀನ್‍ನಲ್ಲಿ ನೋಡುವಂತಹ ಭಾಗ್ಯ ಅಭಿಮಾನಿಗಳಿಗೆ ಸಿಗಲಿದೆ.
ಹೌದು, ಅಭಿಷೇಕ್ ನಟನೆಯ `ಅಮರ್’ ಸಿನಿಮಾಗೆ ದರ್ಶನ್ ಬಣ್ಣಹಚ್ಚಿದ್ದಾರೆ. ರೆಬೆಲ್ ಕುಟುಂಬಕ್ಕೆ ದೊಡ್ಡ ಮಗನಂತಿರುವ ದರ್ಶನ್, ಸಹೋದರನ ಚೊಚ್ಚಲ ಚಿತ್ರಕ್ಕೆ ಸಾತ್ ಕೊಟ್ಟಿದ್ದಾರೆ. ಅಮರ್ ಸಿನಿಮಾದಲ್ಲಿ ದರ್ಶನ್ ಪಾತ್ರವೊಂದನ್ನು ನಿರ್ವಹಿಸುವ ಕುರಿತು ನಿರ್ಮಾಪಕ ಸಂದೇಶ್ ನಾಗರಾಜ್ ಖಚಿತಪಡಿಸಿದ್ದಾರೆ.
ಮೈನಾ ಖ್ಯಾತಿಯ ನಾಗಶೇಖರ್ ಅವರು ಅಮರ್ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಚಿತ್ರೀಕರಣ ಭರದಿಂದ ನಡಿಯುತ್ತಿದೆ. ಅಮರ್ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದೆ. ತಂದೆಯ ಅಗಲಿಕೆಯ ನೋವಿನಿಂದ ಚೇರಿಸಿಕೊಂಡು ಶೂಟಿಂಗ್‍ನಲ್ಲಿ ತೊಡಗಿದ್ದ ಅಭಿಷೇಕ್‍ಗೆ ಈಗ ಚಾಲೆಂಜಿಂಗ್ ಸ್ಟಾರ್ ಬಣ್ಣ ಹಚ್ಚಿ ನೋವು ಕಡಿಮೆ ಮಾಡುವ ಪ್ರಯತ್ನ ಮಾಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv