ಬೆಂಗಳೂರು: ಮೆಟ್ರೋ ಪ್ರಯಾಣಿಕರಿಗೆ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ನೀಡಲು ನಮ್ಮ ಮೆಟ್ರೋ ಕಾತುರದಿಂದ ಕಾಯುತ್ತಿದೆ. ಇಷ್ಟು ದಿನ ಮೆಟ್ರೋದಲ್ಲೂ ಜಾಗ ಸಿಗದೆ ತಿಕ್ಕಾಟದ ನಡುವೆ ಆಫೀಸ್ ಗೆ ಹೋಗುತ್ತಿದ್ದ ಜನಕ್ಕೆ ರಿಲೀಫ್ ಸಿಗಲಿದೆ.
ಹೌದು, ಇನ್ನು ಮುಂದೆ ಮೆಟ್ರೋ ಟ್ರೈನ್ ನಲ್ಲಿ ಹೋಗೋರು ಆರಾಮಾಗಿ ಕುಳಿತುಕೊಂಡು ಯಾವುದೇ ತಳ್ಳಾಟ ನೂಕಾಟ ಇಲ್ಲದೆ ಪ್ರಯಾಣಿಸಬಹುದು. ಇಷ್ಟು ದಿನ 3 ಬೋಗಿಗಳಲ್ಲಿ ಓಡಾಡುತ್ತಿದ್ದ ನಮ್ಮ ಮೆಟ್ರೋ ಟ್ರೈನ್ ಇನ್ನು ಮುಂದೆ 6 ಬೋಗಿಗಳೊಂದಿಗೆ ಸಂಚಾರ ಮಾಡಲಿದೆ. ಈಗಾಗಲೇ ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ಮುಗಿಸಿರುವ ನಮ್ಮ ಮೆಟ್ರೋ ಜೂನ್ ಅಂತ್ಯದ ವೇಳೆಗೆ ಪ್ರಯಾಣಿಕರ ಸಂಚಾರಕ್ಕೆ ಅನುವು ಮಾಡಿಕೊಡಲಿದೆ.
Advertisement
Advertisement
6 ಬೋಗಿಗಳ ಮೆಟ್ರೋ ಟ್ರೈನ್ ನಲ್ಲಿ ಒಂದು ಬಾರಿ 1800 ಪ್ರಯಾಣಿಕರು ಪ್ರಯಾಣ ಮಾಡಬಹುದಾಗಿದ್ದು, ಇಷ್ಟು ದಿನ ಬೆಳಗ್ಗೆ ಮತ್ತು ಸಂಜೆ ಕಾಡುತ್ತಿದ್ದ ಜಾಗದ ಸಮಸ್ಯೆಗೆ ಪರಿಹಾರ ಸಿಕ್ಕಂತಾಗಿದೆ. ಅಷ್ಟೇ ಅಲ್ಲದೆ ಇನ್ನು ಮುಂದೆ ಪೀಕ್ ಸಮಯದಲ್ಲಿ ಪ್ರತಿ 4 ನಿಮಿಷಕ್ಕೆ ಒಂದರಂತೆ ಮೆಟ್ರೋ ಟ್ರೈನ್ ಓಡಿಸಲು ಸಹ ಅಧಿಕಾರಿಗಳು ತೀರ್ಮಾನಿಸಿದ್ದಾರೆ. 6 ಬೋಗಿಗಳ ಟ್ರೈನ್ ನಲ್ಲಿ ಮಹಿಳೆಯರಿಗೆ ಅಂತಾನೆ 2 ಬೋಗಿಗಳನ್ನು ಮೀಸಲಿಟ್ಟದ್ದರೆ ಒಳ್ಳೆಯದು ಎಂದು ವಕೀಲ ಉಮೇಶ್ ಹೇಳಿದ್ದಾರೆ.
Advertisement
Advertisement
ಸಿಲಿಕಾನ್ ಸಿಟಿಯ ಮೆಟ್ರೋ ಪ್ರಯಾಣಿಕರ ಬಹುದಿನದ ಕನಸು ನನಸಾಗುವ ಸಮಯ ಬಂದಿದೆ. 2 ಹಂತದ ಮೆಟ್ರೋ ಕಾಮಗಾರಿಯನ್ನ ಆದಷ್ಟು ಬೇಗ ಮುಗಿಸಿದರೆ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಇನ್ನಷ್ಟು ಮುಕ್ತಿ ಸಿಗುತ್ತದೆ.