ಮೈಸೂರು: ಮಕ್ಕಳ ಹುಟ್ಟುಹಬ್ಬಕ್ಕೆ ಪೊಲೀಸರಿಗೆ ಕಡ್ಡಾಯ ರಜೆ ನೀಡಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣೇಶ್ವರರಾವ್ ನೂತನ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ಎಲ್ಲಾ ಸಂದರ್ಭಗಳಲ್ಲೂ ಕರ್ತವ್ಯ ನಿರ್ವಹಿಸುತ್ತಾರೆ. ಹಾಗಾಗಿ ಹಬ್ಬದ ದಿನಗಳಂದು ಕುಟುಂಬದ ಸಂಭ್ರಮಗಳಿಂದ ವಂಚಿತರಾಗುತ್ತಾರೆ. ಇದರಿಂದ ಸಿಬ್ಬಂದಿ ದೈಹಿಕವಾಗಿ ಮಾನಸಿಕವಾಗಿ ಅವರ ಆತ್ಮಸ್ಥೈರ್ಯ ಕುಗ್ಗುತ್ತದೆ.
Advertisement
Advertisement
ಈ ಪರಿಣಾಮ ಇಲಾಖೆಯಲ್ಲಿ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸುವುದಕ್ಕೆ ಅಡಚಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪಿಸಿಯಿಂದ ಪಿಎಸ್‍ಐವರೆಗೆ ಎಲ್ಲಾ ಸಿಬ್ಬಂದಿಗೆ ಮಕ್ಕಳ ಹುಟ್ಟುಹಬ್ಬಕ್ಕೆ ಕಡ್ಡಾಯ ರಜೆಯನ್ನು ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
Advertisement
ಠಾಣೆಯಲ್ಲಿ ಯಾವುದೇ ಪ್ರಮುಖ ಕೆಲಸವಿದ್ದರೂ ಪೊಲೀಸ್ ಸಿಬ್ಬಂದಿಗೆ ಅವರ ಮಕ್ಕಳ ಹುಟ್ಟುಹಬ್ಬದಂದು ರಜೆ ನೀಡಬೇಕು. ಪೊಲೀಸ್ ಠಾಣೆ, ಸಿಸಿಬಿ, ಸಿಎಸ್‍ಬಿ, ಸಿಸಿಆರ್‍ಬಿ, ಕಂಟ್ರೋಲ್ ರೂಂ, ವಿಮಾನ ನಿಲ್ದಾಣ, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿಗಳಿಗೂ ಈ ಸುತ್ತೋಲೆ ಅನ್ವಯವಾಗಲಿದೆ.
Advertisement
ಎಲ್ಲಾ ಸಂದರ್ಭಗಳಲ್ಲೂ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಮಾನಸಿಕ ಸ್ಥಿತಿ ಅರ್ಥ ಮಾಡಿಕೊಂಡು ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಇಲಾಖೆ ಹೇಳಿದೆ. ಈ ಹೊಸ ಸುತ್ತೋಲೆಯಿಂದ ಪೊಲೀಸ್ ಸಿಬ್ಬಂದಿ ಫುಲ್ ಖುಷ್ ಆಗಿದ್ದಾರೆ.