– ಯುಪಿಐ ಆ್ಯಪ್‌ನಂತೆ ಕೆಲಸ ಮಾಡಲಿದೆ ಮೆಟ್ರೋ ಆಪ್..!
ಬೆಂಗಳೂರು: ಸಿಲಿಕಾನ್ ಸಿಟಿ ಜನರ ನಾಡಿಮಿಡಿತವಾಗಿರೋದು ನಮ್ಮ ಮೆಟ್ರೋ (Namma Metro). ಸುರಕ್ಷಿತ ಪ್ರಯಾಣದೊಂದಿಗೆ ಸಮಯ ಕೂಡ ಉಳಿತಾಯವಾಗುತ್ತೆ. ಟ್ರಾಫಿಕ್ ಸಮಸ್ಯೆಯಂತೂ ಇಲ್ಲವೇ ಇಲ್ಲ. ಅದಕ್ಕಾಗಿ ಮೆಟ್ರೋ ಕಡೆ ಮುಖ ಮಾಡಿರುವವರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲು ಬಿಎಂಆರ್‌ಸಿಎಲ್ (BMRCL) ಮುಂದಾಗಿದೆ.
Advertisement
ಸದ್ಯ ನಮ್ಮ ಮೆಟ್ರೋ ಈಗಾಗಲೇ ಕ್ಯೂಆರ್ ಕೋಡ್ ವ್ಯವಸ್ಥೆಯನ್ನ ಹೊಂದಿದೆ. ಆದ್ರೆ ಈಗಿರುವ ಕ್ಯೂಆರ್ ಕೋಡ್ ಎಲ್ಲ ಆ್ಯಪ್‌ಗಳಿಗೂ ಸಹಕರಿಸಲ್ಲ. ಪೇಟಿಎಂ, ವಾಟ್ಸಪ್, ಯಾತ್ರಾ ಆ್ಯಪ್‌ಗಳಿಗೆ ಮಾತ್ರ ಕ್ಯೂಆರ್ ಕೋಡ್ (QR Code App) ಸೌಲಭ್ಯವಿದೆ. ಇದನ್ನ ಯುನಿವರ್ಸೆಲ್ ವೇದಿಕೆಗೆ ತರಲು ಬಿಎಂಆರ್‌ಸಿಎಲ್ ನಿರ್ಧರಿಸಿದ್ದು, ಹೊಸ ಆ್ಯಪ್ ವ್ಯವಸ್ಥೆಯನ್ನ ಅನುಷ್ಠಾನಗೊಳಿಸಿದೆ. ಇದನ್ನೂ ಓದಿ: ಬಿಜೆಪಿಯಿಂದ ಕೋಟಿ ಕೋಟಿ ಆಫರ್ – ಆರೋಪ ಮಾಡಿದ್ದ ಕೇಜ್ರಿವಾಲ್‌ಗೆ ಕಂಟಕ – ದೆಹಲಿ ಕ್ರೈಂಬ್ರ್ಯಾಂಚ್ ನೋಟಿಸ್
Advertisement
Advertisement
ಇದಕ್ಕಾಗಿ ನಮ್ಮ ಮೆಟ್ರೋ ಈಗಾಗಲೇ ಟೆಂಡರ್ ಪ್ರಕಿಯೆ ಶುರು ಮಾಡಿದ್ದು, `ಭಾರತ್ ಬಿಲ್ ಪೇ ಸಿಸ್ಟಮ್’ ಮಾದರಿಯ ಆ್ಯಪ್ ಇದಾಗಿರಲಿದೆ. ಈ ಆ್ಯಪ್ ಮೂಲಕ ಮೆಟ್ರೋ ಟಿಕೆಟ್ ತೆಗೆದುಕೊಳ್ಳೋದು ಮಾತ್ರವಲ್ಲ, ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಸಹ ಮಾಡಿಕೊಳ್ಳಬಹುದು.
Advertisement
ಹಾಗೆಯೇ ಇದೇ ಆ್ಯಪ್ ಮೂಲಕ ಆಟೋ ಕ್ಯಾಬ್ ಕೂಡ ಬುಕ್ ಮಾಡಿಕೊಳ್ಳಬಹುದಾಗಿದೆ. ಈ ಒಂದು ಆ್ಯಪ್‌ನಲ್ಲೇ ಮೆಟ್ರೋ ರೈಲುಗಳ ಮಾಹಿತಿ ನೋಡುವ ಜೊತೆಗೆ ಆನ್‌ಲೈನ್ ಪೇಮೆಂಟ್ ಸಹ ಇದರಲ್ಲೇ ಮಾಡಬಹುದಾಗಿದೆ. ಇದನ್ನೂ ಓದಿ: ಜಾತಿ ಕಾರಣಕ್ಕೆ ನಮ್ಮನ್ನ ಚನ್ನಕೇಶವ ದೇಗುಲದ ಗರ್ಭಗುಡಿಗೆ ಬಿಟ್ಟಿರಲಿಲ್ಲ – ಕನಕ ಪೀಠದ ಈಶ್ವರಾನಂದಪುರಿ ಶ್ರೀ ಬೇಸರ