ಬೆಂಗಳೂರು: ತಡರಾತ್ರಿವರೆಗೆ ಕೆಲಸ ಮುಗಿಸಿ ಮನೆಗೆ ತೆರಳುವ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್. ಏಕೆಂದರೆ ರಾತ್ರಿ 11.30ಕ್ಕೆ ಸಂಚಾರ ನಿಲ್ಲಿಸುತ್ತಿದ್ದ ಮೆಟ್ರೋ ರೈಲು ಸಂಚಾರವನ್ನು 12 ಗಂಟೆಯವರೆಗೆ ವಿಸ್ತರಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಟ್ (ಬಿಎಂಆರ್‌ಸಿಎಲ್) ಚಿಂತನೆ ನಡೆಸಿದೆ.
ರಾತ್ರಿ ವೇಳೆ ಹೆಚ್ಚು ಹಣ ತೆತ್ತು ಆಟೋದಲ್ಲಿ ಪ್ರಯಾಣಿಸಬೇಕಿದ್ದ ಪ್ರಯಾಣಿಕರು ಒಂದಿಷ್ಟು ನಿರಾಳವಾಗಲಿದ್ದಾರೆ. ಬಸ್ ಕಾಯುವ ಬದಲು ಮೆಟ್ರೋ ರೈಲು ಇದ್ದರೆ ಅನುಕೂಲ ಎನ್ನುವವರಿಗೆ ಇದು ಖುಷಿ ವಿಚಾರವಾಗಿದೆ.
ಸಿಲಿಕಾನ್ ಸಿಟಿ ದಿನದಿಂದ ದಿನಕ್ಕೆ ಶರವೇಗದಲ್ಲಿ ಬೆಳಿಯುತ್ತಿದೆ. ಇತ್ತ ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮೆಟ್ರೋ ರೈಲು ಮೊರೆ ಹೋಗಲಾಗುತ್ತಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬುಧವಾರ, ಆರು ಬೋಗಿಗಳ ಮೆಟ್ರೋ ರೈಲು ಉದ್ಘಾಟನೆ ಮಾಡಿದ್ದಾರೆ. ಈ ಮೂಲಕ 1,800 ಜನ ಒಂದೇ ಬಾರಿಗೆ ಪ್ರಯಾಣಿಸಬಹುದಾಗಿದೆ.
ಅದಷ್ಟು ಬೇಗ ರಾತ್ರಿ 11.30ಕ್ಕೆ ಸಂಚಾರ ನಿಲ್ಲಿಸುತ್ತಿದ್ದ ಮೆಟ್ರೋ ರೈಲು 12 ಗಂಟೆಗೆ ವಿಸ್ತರಿಸಬೇಕು ಎಂದು ಮೆಟ್ರೋ ಪ್ರಯಾಣಿಕರು ಒತ್ತಾಯಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv