ಬೆಂಗಳೂರು: ಅತಿಥಿ ಉಪನ್ಯಾಸಕರಿಗೆ ಸಂಕ್ರಾಂತಿ ಸಿಹಿಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅತಿಥಿ ಉಪನ್ಯಾಸಕರ ವೇತನವನ್ನು 11 ಸಾವಿರದಿಂದ 28 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. 13 ಸಾವಿರ ಇರೋರಿಗೆ 32 ಸಾವಿರ ನೀಡಲಾಗುತ್ತೆ. ಪೂರ್ಣ ಪ್ರಮಾಣದಲ್ಲಿ ವರ್ಕ್‍ಲೋಡ್ ನೀಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಹೇಳಿದ್ದಾರೆ.
Advertisement
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅತಿಥಿ ಉಪನ್ಯಾಸಕರು ಅನೇಕ ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆ ಬಗ್ಗೆ ವರದಿ ನೀಡಲು ಸಿಎಂ ಸಮಿತಿ ನೇಮಕ ಮಾಡಿದ್ರು. ಕುಮಾರ್ ನಾಯಕ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ರು. ಸಮಿತಿ ಸರ್ಕಾರಕ್ಕೆ ವರದಿ ನೀಡಿದೆ. ವರದಿಯನ್ನು ಸಿಎಂ ಗಮನಿಸಿ ವರದಿಯನ್ನ ಅನುಷ್ಠಾನ ಮಾಡಲು ಸಿಎಂ ಒಪ್ಪಿದ್ದಾರೆ ಎಂದರು. ಇದನ್ನೂ ಓದಿ: ಆರೋಪಿಗಳ ರಕ್ಷಣೆಗೆ ಲಂಚ – ರವಿ ಡಿ.ಚನ್ನಣ್ಣನವರ್ ಅಮಾನತಿಗೆ AAP ಆಗ್ರಹ
Advertisement
Advertisement
2002 ರಿಂದ ಅತಿಥಿ ಉಪನ್ಯಾಸಕರು ಹುದ್ದೆ ಸೃಷ್ಟಿಯಾಗಿದೆ. 2012ರ ಮೊದಲು ಕಾಲೇಜುಗಳೇ ನೇಮಕ ಮಾಡುತ್ತಿತ್ತು. 2012 ರ ನಂತ್ರ ನಮ್ಮ ಇಲಾಖೆ ನೇಮಕ ಮಾಡುತ್ತಿದೆ. 5 ವರ್ಷ ಮೇಲ್ಪಟ್ಟು ಸೇವೆ ಮಾಡಿದ ಯುಜಿಸಿ ಕ್ವಾಲಿಫಿಕೇಶನ್ ಇರೋರಿಗೆ 32 ಸಾವಿರ ಕೊಡ್ತೀವಿ. 5 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸದ ಯುಜಿಸಿ ಕ್ವಾಲಿಫಿಕೇಶನ್ ಇರೋ ಅತಿಥಿ ಉಪನ್ಯಾಸಕರಿಗೆ 30 ಸಾವಿರ, 5 ವರ್ಷ ಸೇವೆ ಹೆಚ್ಚು ಸೇವೆ ಸಲ್ಲಿಸಿದ ಯುಜಿಸಿ ಕ್ವಾಲಿಫಿಕೇನ್ ಇಲ್ಲದವರಿಗೆ 28 ಸಾವಿರ, 5 ವರ್ಷ ಸೇವೆ ಇಲ್ಲದ ಯುಜಿಸಿ ಕ್ವಾಲಿಫಿಕೇಶನ್ ಇಲ್ಲದವರಿಗೆ 26 ಸಾವಿರ ಸಂಬಳ ನೀಡ್ತೀವಿ. ಪ್ರತಿ ತಿಂಗಳು 10 ರಂದು ಸಂಬಳ ಕೊಡ್ತೀವಿ ಎಂದು ಸಚಿವರು ಘೋಷಣೆ ಮಾಡಿದರು.
Advertisement
ಅತಿಥಿ ಉಪನ್ಯಾಸಕರನ್ನ ಖಾಯಂ ಮಾಡಲು ಸಾಧ್ಯವಿಲ್ಲ. ಕೃಪಾಂಕ ನೀಡುವ ಪ್ರಸ್ತಾಪವೂ ಇಲ್ಲ. ಸಂಬಳ ಜಾಸ್ತಿ ಮಾಡೋಕೆ ಸಮಿತಿ ವರದಿ ನೀಡಿದೆ. ಅದನ್ನ ಸರ್ಕಾರ ಒಪ್ಪಿಕೊಂಡಿದೆ. ವರ್ಷದಲ್ಲಿ 10 ತಿಂಗಳು ಅತಿಥಿ ಉಪನ್ಯಾಸಕರಿಗೆ ಕೆಲಸ ಇರುತ್ತೆ. ಫುಲ್ ವರ್ಕ್ ಲೋಡ್ ಅತಿಥಿ ಉಪನ್ಯಾಸಕರಿಗೆ ಕೊಡ್ತೀವಿ ಎಂದು ತಿಳಿಸಿದರು.