ಬೆಂಗಳೂರು: ಗೃಹಲಕ್ಷ್ಮಿ 2,000 ರೂ. ಜಮೆಗೆ ನೂರೆಂಟು ವಿಘ್ನಗಳು. ಗೃಹಲಕ್ಷ್ಮಿಯರಿಗೆ (Gruhalakshmi Scheme) ದುಡ್ಡು ತಲುಪದೇ ಸಾಕಷ್ಟು ಗೊಂದಲ ಉದ್ಭವವಾಗಿತ್ತು. ಆದರೆ ಇದೀಗ ಕೊನೆಗೂ ಇದಕ್ಕೆ ಇತಿಶ್ರೀ ಹಾಕೋಕೆ ಸರ್ಕಾರ ರೆಡಿಯಾಗಿದೆ.
ರಾಜ್ಯದಲ್ಲಿ ಒಟ್ಟು 1.10 ಕೋಟಿ ಗೃಹಲಕ್ಷ್ಮಿಯರಿಗೆ ಹಣ ಜಮೆಯಾಗಿದ್ರೂ 5-6 ಲಕ್ಷದಷ್ಟು ಮಹಿಳೆಯರಿಗೆ ತಾಂತ್ರಿಕ ದೋಷದಿಂದ ಹಣ ಜಮೆಯಾಗಿರಲಿಲ್ಲ. ಇದೀಗ ಗೃಹಲಕ್ಷ್ಮಿಯರಿದ್ದಡೆಗೆ ಅಧಿಕಾರಿಗಳು ತೆರಳಿ ಅದಾಲತ್ ನಡೆಸಲಿದ್ದಾರೆ. ಇನ್ನೊಂದು ವಾರದಲ್ಲಿ ಪಂಚಾಯತಿ, ನಗರಸಭೆ, ಪುರಸಭೆ ಸೇರಿದಂತೆ ರಾಜ್ಯಾದ್ಯಂತ ಅದಾಲತ್ ನಡೆಯಲಿದ್ದು ಅಕೌಂಟ್‍ಗೆ ದುಡ್ಡು ಬಾರದ ಮಹಿಳೆಯರು ಇಲ್ಲಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Laxmi Hebbalkar) ಹೇಳಿದ್ದಾರೆ.
ಡಿಸೆಂಬರ್ 31 ರೊಳಗೆ ಎಲ್ಲಾ ಫಲಾನುಭವಿಗಳ ಅಕೌಂಟ್‍ಗೆ ಹಣ ಜಮೆ ಮಾಡಲು ಸಿಎಂ ಖಡಕ್ ಸೂಚನೆ ಕೊಟ್ಟಿದ್ದಾರೆ. ಇದರ ಮಧ್ಯೆ ಸುಮಾರು 50 ಸಾವಿರ ಟ್ಯಾಕ್ಸ್ ಪೇಯರ್ ಮಹಿಳೆಯರು ಕೂಡ ಗೃಹಲಕ್ಷ್ಮಿ ದುಡ್ಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಇವರ ಅರ್ಜಿ ತಿರಸ್ಕಾರ ಮಾಡಿರೋದಾಗಿ ಸಚಿವೆ ತಿಳಿಸಿದ್ದಾರೆ.
ಏಕಕಾಲಕ್ಕೆ ಬಾಕಿ ಕಂತಿನ ದುಡ್ಡನ್ನು ಪಾವತಿ ಮಾಡೋದಾಗಿ ಕೂಡ ಇಲಾಖೆ ಹೇಳಿದೆ. ಒಟ್ಟಿನಲ್ಲಿ ಡಿಸೆಂಬರ್ (December) ನೊಳಗಾದ್ರೂ ಗೃಹಲಕ್ಷ್ಮಿಯರ ಗೊಂದಲ ಬಗೆಹರಿಯುತ್ತಾ ಕಾದು ನೋಡಬೇಕಿದೆ. ಇದನ್ನೂ ಓದಿ: ರೆಬೆಲ್ ರಮೇಶ್ ಜಾರಕಿಹೊಳಿ ಭೇಟಿಯಾದ ವಿಜಯೇಂದ್ರ: ಗೋಕಾಕ್ ಸಾಹುಕಾರನ ಮನವೊಲಿಕೆ ಸಕ್ಸಸ್