ಬೆಂಗಳೂರು: ಸಾಗರ ರಾಣಿ ಮೀನು ಲ್ಯಾಬ್ ಟೆಸ್ಟ್ ಎಂಬ ಪರೀಕ್ಷೆಯಲ್ಲಿ ಪಾಸಾಗಿದ್ದಾಳೆ. ಹಾಗಾಗಿ ಮೀನಿನ ಆಹಾರ ಸೇವಿಸುವರ ನಿಶ್ಚಿಂತೆಯಿಂದ ತಿನ್ನಬಹುದು.
ಶವ ಕೆಡದಂತೆ ಮಾಡಲು ಬಳಸುವ ಫಾರ್ಮಲಿನ್ ದ್ರಾವಣವನ್ನು ಮೀನಿಗೆ ಸಿಂಪರಣೆ ಮಾಡುತ್ತಾರೆ ಅನ್ನೋ ದೂರುಗಳು ಕೇಳಿ ಬಂದಿದ್ದವು. ಈ ಬಗ್ಗೆ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಆಹಾರ ಮತ್ತು ಸುರಕ್ಷತಾ ಇಲಾಖೆ ಮಂಗಳೂರು ಮತ್ತು ಉಡುಪಿ ಕರಾವಳಿ ಭಾಗದ ಮೀನುಗಳನ್ನು ಎನ್‍ಎಬಿಎಲ್ ಲ್ಯಾಬ್ ಗೆ ಕಳಿಸಿಕೊಡಲಾಗಿತ್ತು.
Advertisement
Advertisement
ಯಾವುದೇ ಫಾರ್ಮಲಿನ್ ಅಂಶ ಇಲ್ಲ ಅಂತಾ ಮೀನಿಗೆ ಕ್ಲೀನ್ ಚೀಟ್ ಕೊಟ್ಟಿದೆ. ಈ ಲ್ಯಾಬ್ ರಿಪೋರ್ಟ್ ಪಬ್ಲಿಕ್ ಟಿವಿಗೂ ಲಭ್ಯವಾಗಿದೆ. ಆದರೆ ಕೇರಳದಲ್ಲಿ ಮೀನಿಗೆ ಈ ವಿಷ ಹಾಕುತ್ತಿದ್ದು, ಈ ಮೀನನ್ನು ಕರ್ನಾಟಕಕ್ಕೆ ಕಳ್ಳ ಸಾಗಣೆ ಮಾಡುವ ಬಗ್ಗೆ ದೂರುಗಳು ಬಂದಿದೆ.
Advertisement
ಇದರಿಂದ ಎಲ್ಲಾ ಚೆಕ್ ಪೋಸ್ಟ್ ನಲ್ಲಿ ಮೀನಿನ ಸ್ಯಾಂಪಲ್‍ಗಳನ್ನು ಸ್ಪಾಟ್ ಟೆಸ್ಟ್ ಕಿಟ್ ಮೂಲಕ ಪರೀಕ್ಷೆ ನಡೆಸುತ್ತಿದೆ. ಸದ್ಯ ಕರ್ನಾಟಕದಲ್ಲಿರುವ ಮೀನಿನಲ್ಲಿ ವಿಷ ಪತ್ತೆಯಾಗಿಲ್ಲ, ಮೀನು ಪ್ರಿಯರು ತಲೆಕೆಡಿಸಿಕೊಳ್ಳದೇ ಮೀನು ತಿನ್ನಬಹುದು ಅಂತಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.