ಬೆಂಗಳೂರು: ಚುನಾವಣೆಯ ಹೊತ್ತಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ರೈತರಿಗಾಗಿ ಮಹತ್ವದ ನಿರ್ಧಾರ ಕೈಗೊಳ್ಳಲಿದೆ.
ಕಾಂಗ್ರೆಸ್ ಸರ್ಕಾರ ರಾಜ್ಯಾದ್ಯಂತ `ನೀರಾ’ ತೆಗೆಯಲು ರೈತರಿಗೆ ಅನುಮತಿ ನೀಡಲು ಮುಂದಾಗಿದ್ದು, ನೀರಾ ತೆಗೆಯುವುದಕ್ಕೆ ರಾಜ್ಯದ ರೈತರಿಗೆ ಲೈಸೆನ್ಸ್ ನೀಡಲು ತೀರ್ಮಾನಿಸಿದೆ. ಸರ್ಕಾರ ನೀರಾದಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿ ಆದಾಯ ಬರುತ್ತದೆ ಎಂಬ ನಿರೀಕ್ಷೆಯಲ್ಲಿದೆ. ಆದ್ದರಿಂದ ಈ ತೀರ್ಮಾನ ಕೈಗೊಳ್ಳಲು ಮುಂದಾಗಿದೆ.
Advertisement
Advertisement
ಸರ್ಕಾರ ಹಾಲು ಒಕ್ಕೂಟದ ಮಾದರಿಯಲ್ಲೇ ಸಂಘ ಕಟ್ಟಿಕೊಂಡು ನೀರಾ ತೆಗೆದು ಮಾರಾಟಕ್ಕಷ್ಟೇ ಮಾತ್ರ ಅವಕಾಶ ಮಾಡಿಕೊಡಲಾಗುತ್ತದೆ. ನೀರಾದಿಂದ ರೈತರ ಆದಾಯ ವೃದ್ಧಿಯಾಗಲಿದೆ ಅನ್ನೋ ಲೆಕ್ಕಾಚಾರದಲ್ಲಿ ಈ ತಿರ್ಮಾನ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.
Advertisement
ಪ್ರತಿ ಮರಕ್ಕೆ ವರ್ಷಕ್ಕೆ 15 ರೂಪಾಯಿ ಶುಲ್ಕ, 1500 ರೂಪಾಯಿ ಪರವಾನಿಗೆ ಶುಲ್ಕ ಸಾಧ್ಯತೆ ಇದೆ. 10 ವರ್ಷಗಳಿಂದ ಧೂಳು ತಿನ್ನುತ್ತಿದ್ದ ನೀರಾ ನೀತಿಗೆ ಸಿದ್ದರಾಮಯ್ಯ ಸರ್ಕಾರದ ಅಸ್ತು ಎಂದಿದ್ದು, ಮದ್ಯಪಾನ ನಿಷೇಧದ ಕೂಗಿನ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ನೀರಾಗೆ ಜೈ ಎಂದಿದೆ.