ಬೆಂಗಳೂರು: ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್ ನ್ಯೂಸ್ ಸಿಕ್ಕಿದೆ. 6 ತಿಂಗಳಿಂದ ಅಕ್ಕಿ ಪಡೆಯದೇ ಇದ್ದ 2.76 ಲಕ್ಷ ಬಿಪಿಎಲ್ ಕಾರ್ಡ್‌ದಾರರಿಗೆ ಅಕ್ಕಿ ನೀಡಲು ಆಹಾರ ಇಲಾಖೆ ನಿರ್ಧರಿಸಿದೆ.
ಬಿಪಿಎಲ್ ಕಾರ್ಡ್ ಪರಿಷ್ಕರಣೆ ವೇಳೆ ಆಹಾರ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿತ್ತು. ಬಿಪಿಎಲ್ ಕಾರ್ಡ್ ರದ್ದಾಗಿರೋ ರಾದ್ಧಾಂತದ ಮಧ್ಯೆ ಆರು ತಿಂಗಳಿನಿಂದ 2.76 ಲಕ್ಷ ಮಂದಿ ಅಕ್ಕಿ ತೆಗೆದುಕೊಂಡಿರಲಿಲ್ಲ. ಬೇರೆ ಬೇರೆ ಉದ್ದೇಶಗಳಿಗೆ ಬಿಪಿಎಲ್ ಕಾರ್ಡ್ ಪಡೆದಿದ್ದವರು ಅಕ್ಕಿ ಪಡೆದಿರಲಿಲ್ಲ. ವಿಧ್ಯಾಭ್ಯಾಸ, ಹಾಸ್ಪಿಟಲ್‌ಗೆ ಅಂತಾ ಕಾರ್ಡ್ ಪಡೆದು ಅಕ್ಕಿ ಪಡೆದಿರಲಿಲ್ಲ.
Advertisement
ಅಕ್ಕಿ ಪಡೆಯದೇ ಇದ್ದ 2.76 ಲಕ್ಷ ಕಾರ್ಡ್ಗಳನ್ನ ಅಮಾನತಿನಲ್ಲಿ ಇಟ್ಟಿದ್ದರು. ಈಗ ಮತ್ತೆ ಪರಿಷ್ಕರಣೆ ಮಾಡಿ 2.76 ಲಕ್ಷ ಕಾರ್ಡ್‌ಗಳಿಗೆ ಅಕ್ಕಿ ನೀಡಲು ನಿರ್ಧರಿಸಲಾಗಿದೆ. ಮುಂದಿನ ತಿಂಗಳಿನಿಂದ ಅಮಾನತಿನಲ್ಲಿದ್ದ ಕಾರ್ಡ್‌ದಾರರಿಗೆ ಅಕ್ಕಿ ವಿತರಣೆಯಾಗಲಿದೆ.
Advertisement
ಬಿಪಿಎಲ್‌ನಿಂದ ಎಪಿಎಲ್‌ಗೆ ಶಿಫ್ಟ್ ಆಗಿರೋ ಕಾರ್ಡ್‌ಗಳ ಪರಿಷ್ಕರಣೆ ಭರದಿಂದ ಸಾಗಿದೆ. ಪರಿಷ್ಕರಣೆ ವೇಳೆ 6 ತಿಂಗಳಿನಿಂದ ಅಕ್ಕಿ ತೆಗೆದುಕೊಳ್ಳದೇ ಇರುವ ಬಿಪಿಎಲ್ ಕಾರ್ಡ್‌ಗಳ ದುರುಪಯೋಗ ಆಗಬಾರದು ಎಂದು ಅಮಾನತಿನಲ್ಲಿಡಲಾಗಿತ್ತು.