ಬೆಂಗಳೂರು: ಚುನಾವಣೆಗೂ (Election) ಮುನ್ನಾ ಬಿಪಿಎಲ್ ಕಾರ್ಡ್‌ಗೆ (BPL Card) ಅರ್ಜಿ ಸಲ್ಲಿಸಿದವರಿಗೆ ಕೊನೆಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Department of Food and Civil Supplies) ಗುಡ್‌ನ್ಯೂಸ್ ಕೊಟ್ಟಿದೆ.
ಬರೋಬ್ಬರಿ ಮೂರು ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದೆ. ಇದರ ಆಡಿಟಿಂಗ್ ಈಗ ಶುರುವಾಗಿದ್ದು, ಸದ್ಯ ಏಳು ಸಾವಿರ ಅರ್ಜಿಗಳಿಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇನ್ನೂ ಎರಡು ತಿಂಗಳ ಕಾಲ ಇನ್ನುಳಿದ ಕಾರ್ಡ್‌ಗಳ ಪರಿಶೀಲನೆ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಅಮರ್ ರಹೇ ಕ್ಯಾಪ್ಟನ್ ಪ್ರಾಂಜಲ್ – ಅಂತಿಮ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಜನ ಆಗಮನ
ಈ ಅರ್ಜಿ ವಿಲೇವಾರಿಯಾಗುವವರೆಗೆ ಹೊಸ ಅರ್ಜಿಗಳಿಗೆ ಅವಕಾಶ ಇರೋದಿಲ್ಲ. ಗ್ಯಾರಂಟಿ ಎಫೆಕ್ಟ್ ಹಾಗೂ ಈಗಾಗಲೇ ಹೆಚ್ಚುವರಿ ಬಿಪಿಎಲ್ ಕಾರ್ಡ್‌ಗಳು ಇರುವುದರಿಂದ ಅಳೆದು ತೂಗಿ, ಕಾರ್ಡ್‌ಗಳಿಗೆ ಗ್ರೀನ್ ಸಿಗ್ನಲ್ ನೀಡಲಾಗುತ್ತಿದೆ. ಇದನ್ನೂ ಓದಿ: ಮೂವರನ್ನು ಬಲಿ ಪಡೆದ ಒಂಟಿ ಸಲಗ ಸೆರೆಗೆ ಆದೇಶ
ಎಪಿಎಲ್ – ಬಿಪಿಎಲ್ ಎಲ್ಲಾ ಫಲಾನುಭವಿಗಳಿಗೂ ಕೂಡ ಹೊಸ ಕಾರ್ಡ್ ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಸಾಕಷ್ಟು ದಿನಗಳಿಂದ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರೂ ಬಿಪಿಎಲ್ ಕಾರ್ಡ್ ಹಾಗೂ ಎಪಿಎಲ್ ಕಾರ್ಡ್ ಅನ್ನು ಹೊಸದಾಗಿ ಪಡೆದುಕೊಳ್ಳಲು ಕಾದು ಕುಳಿತಿದ್ದಾರೆ. ಇದನ್ನೂ ಓದಿ: ಕ್ರಿಕೆಟ್ ಆಡುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಬಾಲಕ ಸಾವು – ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಈಗಾಗಲೇ ಹೊಸ ಕಾರ್ಡ್ಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಜನರೇನೋ ತಯಾರಿದ್ದಾರೆ. ಆದರೆ ಚುನಾವಣೆಗೂ ಮುನ್ನ ಬಂದಿರುವ ರೇಷನ್ ಕಾರ್ಡ್‌ಗಳಿಗೆ ಮುಕ್ತಿ ಸಿಗದ ಹೊರತು ಅವಕಾಶ ಇರಲ್ಲ. ಇದನ್ನೂ ಓದಿ: 2 ತಿಂಗಳ ಬಳಿಕ 24 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ ಹಮಾಸ್